ಬೆಂಗಳೂರಲ್ಲಿ ರಾತ್ರಿ ವೇಳೆ ಕ್ಯಾಬ್ ಏರಿದ ಯುವತಿಗೆ ಲೈಂಗಿಕ ಕಿರುಕುಳ

ಬೆಂಗಳೂರು, ಫೆಬ್ರವರಿ.17: ಸಿಲಿಕಾನ್ ಸಿಟಿಯಲ್ಲಿ ಇತ್ತೀಚಿಗೆ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚು ಹೆಚ್ಚು ವರದಿಯಾಗುತ್ತಿವೆ. ಪೊಲೀಸರು ಅದೆಷ್ಟೇ ಕಟ್ಟೆಚ್ಚರ ವಹಿಸಿದರೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣವೇ ಇಲ್ಲದಂತಾಗಿದೆ.

ಇದು ಫೆಬ್ರವರಿ.01ರಂದು ಬೆಂಗಳೂರಿನ ಹೆಬ್ಬಾಳದ ಬಳಿ ನಡೆದ ಘಟನೆ. ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ತೆರಳಲೆಂದು ಉತ್ತರ ಭಾರತ ಮೂಲದ ಯುವತಿಯೊಬ್ಬರು ಕ್ಯಾಬ್ ಬುಕ್ ಮಾಡಿದ್ದಾರೆ. ಆಫೀಸ್ ಬಳಿ ಬಂದ ಕ್ಯಾಬ್ ಏರಿದ ಯುವತಿ ಜೊತೆ ಕ್ಯಾಬ್ ಚಾಲಕನೇ ಅಸಭ್ಯವಾಗಿ ವರ್ತಿಸಿದ್ದಾನೆ.

ತನ್ನ ಜೊತೆಗೆ ಅಳತೆ ಮೀರಿ ನಡೆದುಕೊಂಡ ಚಾಲಕನಿಗೆ ಬಿಸಿ ಮುಟ್ಟಿಸಿದ ಯುವತಿ, ಅರ್ಧದಾರಿಯಲ್ಲೇ ಕ್ಯಾಬ್ ನಿಂದ ಇಳಿದಿದ್ದಾರೆ. ನಂತರ ಪೊಲೀಸರಿಗೆ ಕ್ಯಾಬ್ ಚಾಲಕನ ವಿರುದ್ಧ ಯುವತಿಯು ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

A Girl Sexually Abused By Private Cab Driver In Banglore

ಹಿಂದೂಪುರ ಮೂಲಕ ಕ್ಯಾಬ್ ಚಾಲಕ ಅರೆಸ್ಟ್:

ಇನ್ನು, ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಎಂಬ ಆರೋಪದ ಮೇಲೆ ಕ್ಯಾಬ್ ಚಾಲಕ ರಾಮ್ ಮೋಹನ್ ರನ್ನು ಕೆ.ಆರ್.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಹಿಂದೂಪುರ ಮೂಲದವನು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಬಂಧಿತನ ವಿರುದ್ಧ ಕೆ.ಆರ್.ಪುರಂ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354(ಎ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+