• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಪಿಎಸ್ ಅಧಿಕಾರಿ ರೂಪಾ ಹೆಸರು ದುರುಪಯೋಗ, ದೂರು

|

ಬೆಂಗಳೂರು, ಜನವರಿ 3: ಐಪಿಎಸ್ ಅಧಿಕಾರಿ ಡಿ ರೂಪಾ ಅವರ ಹೆಸರನ್ನು ಮತ್ತೆ ದುರುಪಯೋಗ ಪಡಿಸಿಕೊಳ್ಳಲಾಗಿದೆ ಈ ಕುರಿತು ಬನಶಂಕರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ರೂಪಾ ಅವರ ಹೆಸರಿನಲ್ಲಿ ಅಪರಿಚಿತ ಮಹಿಳೆ ಉತ್ತರ ಪ್ರದೇಶದ ಲಕ್ನೋನಲ್ಲಿ ಐಷಾರಾಮಿ ಹೋಟೆಲ್ ಕೊಠಡಿ ಬುಕ್ ಮಾಡಿರುವುದು ಬೆಳಕಿಗೆ ಬಂದಿದೆ.

ಐಪಿಎಸ್ ಅಧಿಕಾರಿ ರೂಪಾ ಹೆಸರಲ್ಲಿ ಇನ್ ಸ್ಟಾ ಗ್ರಾಮ್ ನಕಲಿ ಖಾತೆ

ಈ ಕುರಿತು ರೂಪಾ ಅವರು ಜನವರಿ 1ರಂದು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಮೇರೆಗೆ ಹೋಟೆಲ್‌ಗೆ ಕರೆ ಮಾಡಿದ್ದ ಮೊಬೈಲ್ ಸಂಖ್ಯೆ ಬಳಕೆದಾರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ತನಿಖೆ ಆರಂಭವಾಗಿದೆ.ಲಕ್ನೋ ನ ಐಷಾರಾಮಿ ಹೋಟೆಲ್ ವೊಂದರಲ್ಲಿ ಡಿ. ರೂಪಾ ಹೆಸರಿನಲ್ಲಿ ಡಿ.29ರಿಂದ 2019ರ ಜನವರಿ 3ರ ಅವಧಿವರೆಗೆ ಕೊಠಡಿಯನ್ನು ಬುಕ್ ಮಾಡಿದ್ದರು.

ಅನುಮಾನಗೊಂಡ ಹೋಟೆಲ್ ಸಿಬ್ಬಂದಿ, ಲಕ್ನೊ ಎಸ್‌ಪಿ ವಿಕಾಸ್ ಚಂದ್ರ ತ್ರಿಪಾಠಿ ಅವರಿಗೆ ಐಪಿಎಸ್ ಅಧಿಕಾರಿ ಡಿ ರೂಪಾ ಕುಟುಂಬಸ್ಥರು ರೂಮ್ ಬುಕ್ ಮಾಡಿರುವ ಕುರಿತು ತಿಳಿಸಿದ್ದಾರೆ.

ಐಪಿಎಸ್ ಅಧಿಕಾರಿ ಡಿ ರೂಪಾ ಅವರಿಗೆ ಪ್ರತಿಷ್ಠಿತ ಜಿ-ಫೈಲ್ಸ್ ಪ್ರಶಸ್ತಿ

ತಕ್ಷಣ ಎಸ್ಪಿ ದೂರವಾಣಿ ಮೂಲಕ ರೂಪಾ ಅವರ ಗಮನಕ್ಕೆ ತಂದಿದ್ದಾರೆ. ತಮ್ಮ ಹೆಸರು ದುರುಪಯೋಗ ಮಾಡಿಕೊಂಡು ಹೋಟೆಲ್ ಕೊಠಡಿ ಬುಕ್ ಮಾಡಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ರೂಪಾ ದೂರು ದಾಖಲಿಸಿದ್ದಾರೆ.

English summary
A fraudster booked a hotel room in Lucknow on New Year's eve by misusing IPS officer D. Roopa's name. Lucknow SP Vikas Chandra Tripathi informed D Roopa about the incident. The IPS officer filed a complaint against the accused in Banashankari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X