ಬೆಂಗಳೂರು ಯುವತಿ ಕೈಗೆ ಸಿಕ್ಕಿಬಿದ್ದ ದಾವೂದ್

ಬೆಂಗಳೂರು, ಡಿಸೆಂಬರ್, 10: ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಕಳ್ಳರನ್ನು ಪಕ್ಕಾ ಲೇಡಿ ಟೈಗರ್ ಶೈಲಿಯಲ್ಲಿ ಚೇಸ್ ಮಾಡಿದ ಗಟ್ಟಿಗಿತ್ತಿ ಕಳ್ಳನೊಬ್ಬನಿಗೆ ಸರಿಯಾಗಿ ಗೂಸಾ ನೀಡಿ ಪೊಲೀಸರ ಕೈಗೆ ಒಪ್ಪಿಸಿದ್ದಾಳೆ.

ಲಿಂಗರಾಜಪುರದ ನಿವಾಸಿ ಬಿಂದು ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳ ದಾವೂದ್ (18)ನನ್ನು ಪುಲಿಕೇಶಿ ನಗರದ ಪೊಲೀಸರಿಗೆ ಒಪ್ಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ಈಕೆ ಪುಲಿಕೇಶಿ ನಗರದಲ್ಲಿ ಮಾತನಾಡುತ್ತಾ ಹೋಗುವಾಗ ಕಳ್ಳರು ಮೊಬೈಲ್ ಕದಿಯಲು ಪ್ರಯತ್ನಿಸಿದ್ದಾರೆ. [ಮೊಬೈಲ್ ಕದಿಯಲು ಬಂದವನಿಗೆ ಯುವತಿಯರಿಂದ ಸರಿಯಾಗೇ ಬಿತ್ತು!]

A brave girl catched mobile thief at Bengaluru

ಬಿಂದು ಬುಧವಾರ ಮಧ್ಯಾಹ್ನ 2.15 ಕ್ಕೆ ಮೊಬೈಲ್ ನಲ್ಲಿ ಮಾತನಾಡುತ್ತಾ ದಾರಿಯಲ್ಲಿ ನಡೆದು ಹೋಗುತ್ತಿದ್ದಳು. ಈಕೆ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ ಇಬ್ಬರು ಬೈಕ್ ಸವಾರರು ನೇರವಾಗಿ ಬಂದು ಆಕೆಯ ಮೊಬೈಲ್ ಗೆ ಕೈ ಹಾಕಿದ್ದಾರೆ.

ತಕ್ಷಣವೇ ಎಚ್ಚೆತ್ತ ಯುವತಿ ಕಳ್ಳರ ಕೊರಳಪಟ್ಟಿ ಹಿಡಿದುಕೊಂಡೇ ಬೈಕ್ ನ ಜೊತೆಯಲ್ಲೇ ಸುಮಾರು 200 ಮೀಟರ್ ದೂರ ಹೋಗಿದ್ದಾಳೆ. ಆಗ ಬೈಕ್ ಸವಾರರ ಚಾಲನೆ ನಿಯಂತ್ರಣ ತಪ್ಪಿ ಹತ್ತಿರದ ಕಾಂಪೌಂಡ್ ಗೆ ಗುದ್ದಿ ಇಬ್ಬರು ಕೆಳಕ್ಕೆ ಬಿದ್ದಿದ್ದಾರೆ.[ಮೊಬೈಲ್ ಕಳ್ಳನನ್ನು ಬೋಲ್ಟ್ ವೇಗದಲ್ಲಿ ಬೆನ್ನಟ್ಟಿದ ಸೆರೆನಾ]

ಇಬ್ಬರು ಕಳ್ಳರಲ್ಲಿ ಮೊಬೈಲ್ ಕದ್ದ ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ. ಅದರಲ್ಲಿ ಇನ್ನೊಬ್ಬನನ್ನು ಯುವತಿ ಹಿಡಿದ್ದಿದ್ದಾಳೆ. ಕಳ್ಳತನ ವಿಷಯ ತಿಳಿದ ಸಾರ್ವಜನಿಕರು ಪುಲಿಕೇಶಿ ನಗರದ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಕಳೆದ ತಿಂಗಳಷ್ಟೇ ವಿಶ್ವದ ನಂಬರ್ ಒನ್ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮೊಬೈಲ್ ಕಳ್ಳನನ್ನು ಬೆನ್ನಟ್ಟಿ ಹಿಡಿದ ಘಟನೆ ಬೆನ್ನಲ್ಲೇ ಬೆಂಗಳೂರಿನ ಯುವತಿ ಕೂಡ ಈ ಸಾಹಸ ತೋರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+