• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಬ್ಬರು ದುಷ್ಕರ್ಮಿಗಳಿಂದ ರಾಜಭವನ ಒಳನುಗ್ಗಲು ಯತ್ನ

|

ಬೆಂಗಳೂರು, ನವೆಂಬರ್ 3: ಬೆಂಗಳೂರಿನಲ್ಲಿರುವ ರಾಜಭವನದ ಒಳನುಗ್ಗಲು ದುಷ್ಕರ್ಮಿಗಳು ಯತ್ನಸಿರುವ ಘಟನೆ ಶನಿವಾರ ನಡೆದಿದೆ.

ದೀಪಾವಳಿ ವಿಶೇಷ ಪುರವಣಿ

ರಾಜಭವನದಲ್ಲಿ ನೂರಾರು ಭದ್ರತಾ ಸಿಬ್ಬಂದಿಗಳಿರುತ್ತಾರೆ, ಅನುಮತಿಯಿಲ್ಲದೆ ಮುಖ್ಯಮಂತ್ರಿ ಕೂಡ ರಾಜಭವನದೊಳಗೆ ಪ್ರವೇಶ ಮಾಡಲು ಸಾಧ್ಯವಿಲ್ಲ ಅಂತಹುದರಲ್ಲಿ ಕಂಠಪೂರ್ತಿ ಕುಡಿಸಿದ್ದ ಇಬ್ಬರು ಬೈಕ್ ಸವಾರರು ಬೈಕ್‌ನೊಂದಿಗೆ ರಾಜಭವನ ಪ್ರವೇಶ ಮಾಡಲು ಮುಂದಾಗಿದ್ದರು. ಅವರನ್ನು ತಕ್ಷಣವೇ ತಡೆದ ಭದ್ರತಾ ಸಿಬ್ಬಂದಿಗಳು ಅಲ್ಲಿಂದ ಅವರನ್ನು ಕಳುಹಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರಾಗಿ 7 ಮಂದಿ ಪ್ರಮಾಣ ವಚನ

ಇಂಡಿಯನ್‌ ಎಕ್ಸ್‌ಪ್ರೆಸ್ ಮಾರ್ಗವಾಗಿ ಬಂದ ಬೈಕ್ ಆಕಾಶವಾಣಿ ಪ್ರಸಾರ ಭಾರತಿ ದಾಟುತ್ತಿದ್ದಂತೆಯೇ ನೇರವಾಗಿ ರಾಜಭವನದ ಬಾಗಿಲ ಬಳಿ ಹೋಯಿತು. ನಂತರ ಪೊಲೀಸರಿಗೆ ಆವಾಜ್ ಹಾಕಿ ಇಬ್ಬರು ಪುಂಡರು ರಾಜಭವನ ಪ್ರವೇಶಿಸಲು ಮುಂದಾಗಿದ್ದಾರೆ. ಅದೇ ಮಾರ್ಗದಲ್ಲಿ ಇಂದೇ ಮತ್ತೊಂದು ಘಟನೆಯೂ ನಡೆದಿದೆ. ಸುತ್ತಮುತ್ತ ಅಷ್ಟೊಂದು ಭದ್ರತೆ ಇದ್ದರೂ ಕೂಡ ಪ್ರಸಾರ ಭಾರತಿ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ಕಳವು ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಾಜಭವನಕ್ಕೆ ಪ್ರಜೆಗಳಿಗೆ ಮುಕ್ತ ಪ್ರವೇಶ, ನೀವು ನೋಡಿಬನ್ನಿ

ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಏಳು ಮಂದಿ ಹಾಗೂ ಹೆಚ್ಚುವರಿ ನ್ಯಾಯಾಧೀಶರಾಗಿ ಐದು ಮಂದಿ ರಾಜಭವನದಲ್ಲಿ ರಾಜ್ಯಪಾಲರೆದುರು ಪ್ರಮಾಣವಚನ ಸ್ವೀಕರಿಸಿದ್ದಾರೆ, ಕಾರ್ಯಕ್ರಮಗಳು ಅಷ್ಟೇ ಮುಗಿಸಿದೆ. ಎಷ್ಟೇ ಭದ್ರತೆ ಇದ್ದರೂ ದುಷ್ಕರ್ಮಿಗಳು ರಾಜಭವನ ಪ್ರವೇಶಕ್ಕೆ ಮುಂದಾಗಿದ್ದಾರೆ.

English summary
Incident of security breach reported after a bike borne drunk miscreants tried to enter RajBhavan premises.Another incident of security breach reported when thieves stole a sandalwood tree from the premises of Prasar Bharati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X