ರಜನೀಕಾಂತ್ ರಾಜಕೀಯ ಅರಂಗೇಟ್ರಂಗೆ ಬೆಂಗಳೂರಿನ ಏಜೆನ್ಸಿ ನೆರವು
ಬೆಂಗಳೂರು, ಮೇ 29: ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಅರಂಗೇಟ್ರಂಗೆ ಸಂಬಂಧಿಸಿದ ಹಾಗೆ ಒಂದೊಂದಾಗಿ ಸುದ್ದಿ ಹೊರಬೀಳುತ್ತಿದೆ. ಹೂಬೇಹೂಬು ಅವರ ಸಿನಿಮಾದ ಬಗ್ಗೆ ಹೇಗೆ ಇಷ್ಟಿಷ್ಟೇ ಸುದ್ದಿ ಬಹಿರಂಗವಾಗುತ್ತದೆಯೋ ಹಾಗೆ. ಲೇಟೆಸ್ಟ್ ಸುದ್ದಿ ಏನಪ್ಪಾ ಅಂದರೆ ಬೆಂಗಳೂರು ಮೂಲದ ಏಜೆನ್ಸಿಯೊಂದನ್ನು ರಜನಿ ಸಂಪರ್ಕಿಸಿದ್ದಾರಂತೆ.
ರಜನಿ ರಾಜಕೀಯ ಪ್ರವೇಶಕ್ಕೆ ಇದು ಸಹಾಯ ಮಾಡಲಿದೆಯತೆ. ಅಂಕಿ-ಅಂಶಗಳ ಪೂರೈಕೆ, ಸಲಹೆ-ಸೂಚನೆಗಳನ್ನು ಈ ಏಜೆನ್ಸಿ ನೀಡುತ್ತದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ತಮಿಳುನಾಡಿನ ಮತಗಳ ಹಂಚಿಕೆ ಹೇಗೆ ಆಗಿದೆ, ಸಾರ್ವಜನಿಕ ಸಮಸ್ಯೆಗಳು ಮುಂತಾದವುಗಳ ಬಗ್ಗೆ ರಜನಿಗೆ ಮಾಹಿತಿ ಪೂರೈಸುತ್ತದೆ ಈ ಏಜೆನ್ಸಿ. ಆ ಮೂಲಕ ರಜನಿ ಪ್ರಚಾರಕ್ಕೆ ಸಹಾಯ ಆಗುತ್ತದೆ.[ಜುಲೈ ಕೊನೆಗೆ ರಾಜಕೀಯ ಪ್ರವೇಶ ಘೋಷಣೆ: ಸುಳಿವು ಕೊಟ್ಟ ರಜನಿ ಸಹೋದರ]

ವರದಿಗಳ ಪ್ರಕಾರ ರಜನೀಕಾಂತ್ ಸ್ವಂತ ಪಕ್ಷವೊಂದನ್ನು ಸದ್ಯದಲ್ಲೇ ಆರಂಭಿಸಲಿದ್ದಾರೆ. ಆ ಪಕ್ಷವು ತಮಿಳುನಾಡಿನ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುತ್ತದೆ. ಈ ಮಧ್ಯೆ ರಜನಿ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಮಾತನಾಡಿ, ಈ ವರ್ಷದ ಜುಲೈ ಕೊನೆಗೆ ರಜನಿ ಹೊಸ ಪಕ್ಷ ಸ್ಥಾಪಿಸುವ ಸುಳಿವು ನೀಡಿದ್ದಾರೆ.












Click it and Unblock the Notifications