ಪಬ್‌ನಲ್ಲಿ ಯುವತಿ ಟಾಯ್ಲೆಟ್‌ಗೆ ಹೋದಾಗ ವಿಡಿಯೋ ಮಾಡಿದ ನೌಕರ!
ಬೆಂಗಳೂರು, ಜನವರಿ 29: ಮೋಜು ಮಸ್ತಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಏನೂ ಬರವಿಲ್ಲ. ನಮ್ಮ ಬಳಿ ದುಡ್ಡಿದೆ, ನಾವು ಸಕತ್ ಮಾಡರ್ನ್ ಎಂದು ಮೋಜು ಮಸ್ತಿಗಾಗಿ ಪಬ್‌ಗೆ ತೆರಳುವ ಹುಡುಗಿಯರು, ಮಹಿಳೆಯರು ಈ ಸ್ಟೋರಿಯನ್ನು ಒಮ್ಮೆ ಓದಲೇಬೇಕು.
ಪಬ್ ಒಂದರಲ್ಲಿ ಯುವತಿಯೊಬ್ಬಳು ಶೌಚಾಲಯಕ್ಕೆ ತೆರಳಿದ್ದಾಗ, ಅದೇ ಪಬ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಯುವತಿಯ ಖಾಸಗಿ ಕ್ಷಣದ ವಿಡಿಯೋ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಘಟನೆಯಿಂದ ತೀವ್ರ ಆಘಾತಗೊಂಡಿದ್ದ ಯುವತಿ, ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಪ್ರಕರಣವನ್ನು ದಾಖಲಿಸಿಕೊಂಡು ಪಬ್‌ನಲ್ಲಿ ಕೆಲಸ ಮಾಡುತ್ತಿದ್ದ ಓಡಿಶಾ ಮೂಲದ ಬುದ್ದಿಕಾಂತ್ ದೇಬಾನಾಥ್ ಎನ್ನುವವನನ್ನು ಅಶೋಕ ನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆ ನಡೆದಿದ್ದು ಎಲ್ಲಿ?
ಬೆಂಗಳೂರಿನ ಅಶೋಕ ನಗರ ಪಬ್, ಡಿಸ್ಕೋ ಥೆಕ್‌ಗಳ ಅಡ್ಡೆಯಾಗಿದೆ. ಇಲ್ಲಿನ ಮ್ಯಾಗ್ರಾಥ್ ರಸ್ತೆಯ Arbor Brewing Company ಎಂಬ ಪಬ್‌ಗೆ, ಕಳೆದ ಜನವರಿ 24 ರಂದು (ಶುಕ್ರವಾರ) 32 ವರ್ಷದ ಯುವತಿಯೊಬ್ಬಳು ತನ್ನ ಸ್ನೇಹಿತರ ಜೊತೆ ತೆರಳಿದ್ದಳು. ಯುವತಿ ರಾತ್ರಿ 11.55 ರ ಸುಮಾರು ಶೌಚಾಲಯಕ್ಕೆ ತೆರಳಿದ್ದಾಗ, ಮರೆಯಲ್ಲಿ ನಿಂತು ವ್ಯಕ್ತಿಯೊಬ್ಬ ತನ್ನ ಮೊಬೈಲ್‌ನಲ್ಲಿ ಆ ಯುವತಿಯ ಖಾಸಗಿ ಕ್ಷಣದ ವಿಡಿಯೋ ಮಾಡುತ್ತಿದ್ದ. ತಕ್ಷಣವೇ ಎಚ್ಚೆತ್ತ ಯುವತಿ ಕಿರುಚಿಕೊಂಡಿದ್ದರಿಂದ ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಯುವತಿಯ ದೂರು ನಿರ್ಲಕ್ಷ್ಯ ಮಾಡಿದ ಪಬ್ ಮ್ಯಾನೇಜರ್!
ನಡೆದ ಅನಪೇಕ್ಷಿತ ಘಟನೆಯಿಂದ ಕೋಪಗೊಂಡ ಯುವತಿ, ಪಬ್‌ನ ಮ್ಯಾನೇಜರ್ ಬಳಿ ಘಟನೆ ಬಗ್ಗೆ ಆರೋಪ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸದ ಮ್ಯಾನೇಜರ್ ಯುವತಿಯ ದೂರನ್ನು ನಿರ್ಲಕ್ಷ್ಯ ಮಾಡಲು ನೋಡಿದ್ದಾನೆ. ಆದರೆ, ಹಠ ಬಿಡದ ಯುವತಿ, ಪಬ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ. ಆದರೆ, ಇದಕ್ಕೂ ಮ್ಯಾನೇಜರ್ ಕ್ಯಾರೆ ಅಂದಿಲ್ಲ.

"ವ್ಯಕ್ತಿಯೊಬ್ಬ ಓಡಿ ಹೋಗಿದ್ದನ್ನು ನಾನು ನೋಡಿದೆ'
ಇನ್ನೊಬ್ಬ ಯುವತಿ ಬಂದು "ನೀವು ಶೌಚಾಲಯದಲ್ಲಿದ್ದಾಗ ಪಬ್ ಸಮವಸ್ತ್ರ ತೊಟ್ಟಿದ್ದ ವ್ಯಕ್ತಿಯೊಬ್ಬ ಓಡಿ ಹೋಗಿದ್ದನ್ನು ನಾನು ನೋಡಿದೆ' ಎಂದು ಸಂತ್ರಸ್ತ ಯುವತಿಗೆ ಹೇಳಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಯುವತಿ ಸೀದಾ ಅಶೋಕ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಘಟನೆ ಬಗ್ಗೆ ಪಬ್ ಗೆ ತೆರಳಿ ಪೊಲೀಸರು ಸಿಸಿಟಿವಿ ಪರಿಶೀಲಿಸಿ ವಿಚಾರಣೆ ನಡೆಸಿದ್ದಾರೆ. ಕಡೆಗೂ ಯುವತಿಯ ಅನುಮಾನ ನಿಜವಾಗಿದ್ದು, ಕಾಮುಕ ಪಬ್ ಕೆಲಸಗಾರ ಯುವತಿಯ ಖಾಸಗಿ ವಿಡಿಯೋ ಮಾಡಲು ಮುಂದಾಗಿದ್ದ ಎಂದು ಗೊತ್ತಾಗಿದೆ. ಯುವತಿ ಕಿರುಚಿಕೊಂಡು ಪೊಲೀಸ್ ಠಾಣೆಗೆ ಹೋಗಿದ್ದನ್ನು ಅರಿತ ಕಾಮುಕ ವಿಡಿಯೋ ಅಳಿಸಿ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಂಗ ಬಂಧನಕ್ಕೆ ಕಾಮುಕ
ಒಡಿಶಾ ಮೂಲದ 30 ವರ್ಷದ ಬುದ್ದಿಕಾಂತ್ ದೇಬಾನಾಥ್ ಎನ್ನುವನನ್ನು ಮಂಗಳವಾರ ಬಂಧಿಸಿರುವ ಅಶೋಕ ನಗರ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ನಡೆದಾಗ ಎಚ್ಚೆತ್ತುಕೊಳ್ಳದೇ ಯುವತಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ಪಬ್ ಮ್ಯಾನೇಜರ್ ಮೇಲೂ ಯುವತಿ ಆರೋಪ ಹೊರಿಸಿದ್ದಾಳೆ. ಒಟ್ಟಾರೆ ಮೋಜು ಮಸ್ತಿ ಎಂದು ಪಬ್‌ಗೆ ತೆರಳುವ ಯುವತಿಯರು ಎಣ್ಣೆ ಏಟಿನಲ್ಲಿ ಮೈ ಮರೆತರೆ ಏನೆಲ್ಲಾ ಅನಾಹುತ ಆಗಬಹುದು ಎಂಬುದಕ್ಕೆ ಜನವರಿ 24 ರಂದು Arbor Brewing Company ಪಬ್‌ನಲ್ಲಿ ನಡೆದ ಘಟನೆ ಉದಾಹರಣೆಯಾಗಿದೆ.












Click it and Unblock the Notifications