ಬೆಂಗಳೂರು ನಗರ ಜಿಲ್ಲೆಯಲ್ಲಿ 91 ಲಕ್ಷ ಮತದಾರರು!

ಬೆಂಗಳೂರು, ಮೇ 1: ಬೆಂಗಳೂರು ನಗರ ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 4.39 ಲಕ್ಷ ಜನ ಸೇರ್ಪಡೆಗೊಳ್ಳುವ ಮೂಲಕ ಮತದಾರರ ಸಂಖ್ಯೆ 91.13 ಲಕ್ಷಕ್ಕೆ ಹೆಚ್ಚಳಗೊಂಡಿದೆ.

ಒಟ್ಟು 85,248 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. 39,129 ಜನರ ಹೆಸರುಗಳನ್ನು ತಿದ್ದುಪಡಿ ಮಾಡಲಾಗಿದೆ. 47.6 ಲಕ್ಷ ಪುರುಷ ಮತದಾರರು ಮತ್ತು 43.5 ಲಕ್ಷ ಮಹಿಳಾ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಮತದಾರರ ಚೀಟಿ ಮತ್ತು ಮತದಾನದ ಮಾರ್ಗಸೂಚಿಯನ್ನು ಮನೆಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. 8,278 ಬೂತ್ ಮಟ್ಟದ ಅಧಿಕಾರಿಗಳಿದ್ದು, ಮೂರು ದಿನಗೊಳಗಾಗಿ ವಿತರಿಸಲಾಗುತ್ತದೆ ಎಂದು ಹೇಳಿದರು.

91 lakh voters in 28 constituencies on Bengaluru city

ಮೂರು ಕೇಂದ್ರಗಳಲ್ಲಿ ಯಂತ್ರ: ಮೂರು ಕಡೆಗಳಲ್ಲಿ ಭದ್ರತಾ ಕೊಠಡಿಗಳನ್ನು ನಿರ್ಮಿಸಿ ಮತಯಂತ್ರಗಳನ್ನು ಇರಿಸಲಾಗಿದ್ದು, ಆಯಾ ವಿಧಾನಸಭಾ ಕ್ಷೇತ್ರಗಳಿಗೆ ತೆರಳಲಿರುವ ಮತಯಂತ್ರ, ವಿವಿಪ್ಯಾಟ್, ಕಂಟ್ರೋಲ್ ಯೂನಿಟ್ ಗಳಿಗೆ ಸಂಖ್ಯೆಯನ್ನು ನಮೂದಿಸಲಾಗಿದೆ ಎಂದರು.

ರಾಜಾಜಿನಗರದ ಅಂಬೇಡ್ಕರ್ ಮೈದಾನದ ಕಟ್ಟಡ, ಜಯನಗರದಲ್ಲಿ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿ ಮತ್ತು ಕೆಜಿ ರಸ್ತೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತಯಂತ್ರಗಳನ್ನು ಇರಿಸಲಾಗಿದೆ. ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿರುವವರಿಗೂ ಗುರುತಿನ ಚೀಟಿ ವಿತರಿಸಲಾಗುತ್ತದೆ. ಗುರುತಿನ ಚೀಟಿ ಮತ್ತು ಮತದಾರರಿಗೆ ವಿತರಿಸಲಾಗುವ ಕ್ರಮ ಸಂಖ್ಯೆ, ಮತಗಟ್ಟೆ ಸಂಖ್ಯೆ ಹೊಂದಿರುವ ಚೀಟಿಯನ್ನು ಕಡ್ಡಾಯವಾಗಿ ತರಬೇಕೆಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+