ನೆಲಮಂಗಲ ಬಳಿ 8.ಕಿಮೀ ಟ್ರಾಫಿಕ್ ಜಾಮ್: ಪ್ರಯಾಣಿಕರು ಕಂಗಾಲು

Recommended Video

      ಬೆಂಗಳೂರಿನ ನೆಲಮಂಗಲದ ಬಳಿ 8 ಕಿಮೀ ಟ್ರಾಫಿಕ್ ಜಾಮ್ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 24: ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪ ಮಳೆ ಹಾಗೂ ಮರದ ದಿಮ್ಮಿಗಳು ರಸ್ತೆಯಲ್ಲಿ ಬಿದ್ದಿದ್ದರಿಂದ ಸುಮಾರು 8 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುವಂತಹ ಸ್ಥಿತಿ ಸೋಮವಾರ ನಿರ್ಮಾಣವಾಗಿತ್ತು.

      ನೆಲಮಂಗಲದ ಮಾಕಳಿ ಬಳಿ ಬೆಳಗಿನಜಾವ 4 ಗಂಟೆಯಿಂದಲೇ ಟ್ರಾಫಿಕ್ ಜಾಮ್ ಉಂಟಾಗಿದೆ, ಮರದ ದಿಮ್ಮಿ ಹೊತ್ತು ತರುತ್ತಿದ್ದ ಲಾರಿ ಮಗುಚಿ ದಿಮ್ಮಿಗಳು ರಸ್ತೆ ತುಂಬ ಚೆಲ್ಲಾಪಿಲ್ಲಿಯಾಗಿ ಬಿದ್ದು ವಾಹನಗಳು ಮುಖ್ಯ ರಸ್ತೆಯ ಮೂಲಕ ಹೋಗಲಾರದಂತೆ ಆಗಿ ಸಂಚಾರ ದಟ್ಟಣೆ ಉಂಟಾಗಿತ್ತು.

      8 km traffic jam near Nelamangala

      ಸರ್ವೀಸ ರಸ್ತೆ ಇಕ್ಕಟ್ಟಾಗಿರುವುದರಿಂದ ರಸ್ತೆಯ ಮೇಲೆ ಸಾವಿರಾರು ಪ್ರಯಾಣಿಕರು ನಾಲ್ಕೈದು ತಾಸು ನಿಲ್ಲುವ ಪರಿಸ್ಥಿತಿ ಎದುರಾಯಿತು, ಬೆಳಗಿನ ಜಾವ ಬೆಂಗಳೂರು ಬಂದು ಸೇರಬೇಕಾದ ನೂರಾರು ವಾಹನಗಳು ಎಸಿ ಹಾಗೂ ನಾನ್ ಎಸಿ ಬಸ್ ಗಳು ಹಾಗೂ ಸರಕು ಸಾಗಾಣಿಕೆಯ ಸಾವಿರಾರು ಲಾರಿಗಳು ಜಾಮ್ ಆಗಿದ್ದವು.

      8 km traffic jam near Nelamangala

      ಪ್ರಯಾಣಿಕರು ಬೆಂಗಳೂರು ಬಂದು ತಲುಪುವುದು ತುಂಬಾ ತಡವಾಯಿತು. ಸೋಮವಾರವಾದ್ದರಿಂದ ಸರ್ಕಾರಿ ಕೆಲಸಗಳು, ಖಾಸಗಿ ಕಂಪನಿ ಕೆಲಸಗಳಿಗೆ ಬರುವ ನೌಕರರಿಗೆ ಸಾರ್ವಜನಿಕರಿಗೆ ತೊಂದರೆ ಉಂಟಾಯಿತು. ಇಷ್ಟೇ ಅಲ್ಲದೆ ಬೆಂಗಳೂರಿನಾದ್ಯಂತ ಭಾನುವಾರ ಸಂಜೆಯಿಂದ ಆರಂಭವಾಗಿರುವ ಮಳೆ ಇನ್ನು ನಿಂತಿಲ್ಲ ಹೀಗಾಗಿ ಬೆಂಗಳೂರು ತಲುಪಿದರೂ ಪ್ರಯಾಣಿಕರು ಅವರವರ ಸ್ಥಳಗಳಿಗೆ ತಲುಪುವುದು ಕಷ್ಟವಾಯಿತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+