ಪಾನಮತ್ತ ಚಾಲನೆ: 793 ಪ್ರಕರಣ ದಾಖಲು
ಬೆಂಗಳೂರು, ಮೇ.26: ಬೆಂಗಳೂರು ಸಂಚಾರ ಪೊಲೀಸರು ಮದ್ಯಪಾನ ಮಾಡಿ ವಾಹನ ಚಲಾಯಿಸಿದ 793 ವಾಹನ ಸವಾರರ ಚಾಲನಾ ಪತ್ರ ಅಮಾನತು ಮಾಡಲು ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಿದ್ದಾರೆ.
ಸಂಚಾರ ಪೊಲೀಸರು ಮೇ.24, ಶನಿವಾರ ನಗರದ 109 ಸ್ಥಳಗಳಲ್ಲಿ ರಾತ್ರಿ 9ರಿಂದ 2 ಗಂಟೆವರೆಗೂ ವಿಶೇಷ ಕಾರ್ಯಾಚರಣೆ ನಡೆಸಿ 10,639 ವಾಹನಗಳ ತಪಾಸಣೆ ಮಾಡಿದ್ದರು.[ಮದ್ಯಪಾನ ತಪಾಸಣೆ: ಪೊಲೀಸರಿಗೆ ಡಿಕ್ಕಿ ಹೊಡೆದ ಟೆಕ್ಕಿ]

ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯೊಂದರಲ್ಲೇ 48 ಪ್ರಕರಣಗಳು ದಾಖಲಾಗಿದೆ. ಆಲ್ಕೋ ಮೀಟರ್ ಮೂಲಕ ತಪಾಸಣೆ ನಡೆಸಿದಾಗ ನಾಲ್ಕು ಮಂದಿ ಚಾಲಕರ ಮದ್ಯ ಸೇವನೆ ಪ್ರಮಾಣ 550 ಮಿ.ಗ್ರಾಂನಷ್ಟಿತ್ತು.
ಈ ಎಲ್ಲಾ ಸವಾರರ ವಾಹನ ಪರವಾನಗಿಯನ್ನು ಅಮಾನತಿನಲ್ಲಿಡುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications