ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸವರ್ಷ; ಬೆಂಗಳೂರಲ್ಲಿ ಕುಡಿದು ಗಾಡಿ ಓಡಿಸಿದವರೆಷ್ಟು?

|
Google Oneindia Kannada News

ಬೆಂಗಳೂರು, ಜನವರಿ 02; ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ನಗರದ ಹಲವು ಪ್ರದೇಶಗಳಲ್ಲಿ ಪಬ್, ಬಾರ್, ರೆಸ್ಟೋರೆಂಟ್‌ಗಳಲ್ಲಿ ಸಾವಿರಾರು ಜನರು ಸೇರಿ 2023ನೇ ವರ್ಷವನ್ನು ಸ್ವಾಗತಿಸಿದರು.

ಡಿಸೆಂಬರ್ 31ರಂದು ನಗರದಲ್ಲಿ ವಾಹನ ಓಡಿಸುವಾಗ ಜನರು ಜಾಗೃತರಾಗಿರಬೇಕು ಎಂದು ಎಂದು ಸಂಚಾರಿ ಪೊಲೀಸರು ಸೂಚನೆ ನೀಡಿದ್ದರು. ಅಲ್ಲದೇ ಕುಡಿದು ವಾಹನ ಓಡಿಸಬೇಡಿ ಎಂದು ಮನವಿ ಮಾಡಿದ್ದರು.

Year Ender 2022 : ಬೆಂಗಳೂರಲ್ಲಿ ಡ್ರಿಂಕ್ & ಡ್ರೈವ್ ಕೇಸ್‌ನಲ್ಲಿ ದಾಖಲೆYear Ender 2022 : ಬೆಂಗಳೂರಲ್ಲಿ ಡ್ರಿಂಕ್ & ಡ್ರೈವ್ ಕೇಸ್‌ನಲ್ಲಿ ದಾಖಲೆ

ಹೊಸ ವರ್ಷಾಚರಣೆ ಮಾಡಿ ವಾಪಸ್ ಹೋಗುವವರನ್ನು ಹಿಡಿದು ಸಂಚಾರಿ ಪೊಲೀಸರು ತಪಾಸಣೆ ಮಾಡಿದ್ದಾರೆ. ಜವಾಬ್ದಾರಿಯುತವಾಗಿ ವಾಹನ ಚಾಲನೆ ಮಾಡಿದ ಕಾರಣಕ್ಕಾಗಿ ಬೆಂಗಳೂರಿಗರಿಗೆ ಸಂಚಾರಿ ಪೊಲೀಸರು ಧನ್ಯವಾದಗಳನ್ನು ಸಹ ಅರ್ಪಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಗುಲ್ ಎಬ್ಬಿಸಿದ ಬೆಂಗಳೂರಿನ ಸಂಚಾರಿ ಪೊಲೀಸ್! ಸೋಷಿಯಲ್ ಮೀಡಿಯಾದಲ್ಲಿ ಗುಲ್ ಎಬ್ಬಿಸಿದ ಬೆಂಗಳೂರಿನ ಸಂಚಾರಿ ಪೊಲೀಸ್!

78 Drunk And Drive Case Booked In Bengaluru On December 31st

ಎಷ್ಟು ಜನರ ಮೇಲೆ ದಂಡ ಪ್ರಯೋಗ; ಬೆಂಗಳೂರು ಸಂಚಾರಿ ಪೊಲೀಸರು ಟ್ವೀಟ್ ಮೂಲಕ ನಗರದಲ್ಲಿ ಕುಡಿದು ವಾಹನ ಓಡಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೆಲ್ಮೆಟ್ ಇಲ್ಲದ ಪ್ರಯಾಣ; 3.5 ಲಕ್ಷ ಕೇಸು ಹಾಕಿದ ಬೆಂಗಳೂರು ಪೊಲೀಸರು ಹೆಲ್ಮೆಟ್ ಇಲ್ಲದ ಪ್ರಯಾಣ; 3.5 ಲಕ್ಷ ಕೇಸು ಹಾಕಿದ ಬೆಂಗಳೂರು ಪೊಲೀಸರು

ನಿನ್ನೆ ರಾತ್ರಿ ನಗರದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳನ್ನು ತಪಾಸಣೆ ಮಾಡಲಾಗಿದೆ. 78 ಜನರ ವಿರುದ್ಧ ಕುಡಿದು ವಾಹನ ಓಡಿಸಿದ ಪ್ರಕರಣ ದಾಖಲು ಮಾಡಲಾಗಿದೆ ಎಂದು ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಪೊಲೀಸರು ತಮ್ಮ ಟ್ವೀಟ್‌ನಲ್ಲಿ Thank you #Bengalurians for driving responsibly!, Wish you all a very happy, safe and prosperous New Year!
ಎಂದು ತಿಳಿಸಿದ್ದಾರೆ.

ಕಡಿಮೆ ಪ್ರಕರಣಗಳು ದಾಖಲು; ಕುಡಿದು ವಾಹನ ಚಾಲನೆ ಮಾಡದಂತೆ ಬೆಂಗಳೂರು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೂ ಸಹ ಹಲವಾರು ಜನರು ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಆದರೆ ಕ್ರಿಸ್‌ಮಸ್ ಸಮಯದಲ್ಲಿ ದಾಖಲಾದ ಪ್ರಕರಣಕ್ಕಿಂತ ಕಡಿಮೆ ಪ್ರಕರಣಗಳು ಹೊಸ ವರ್ಷದ ಸಂದರ್ಭದಲ್ಲಿ ದಾಖಲಾಗಿವೆ.

ಕ್ರಿಸ್‌ಮಸ್ ವಾರಾಂತ್ಯದಲ್ಲಿ ನಗರದಲ್ಲಿ ಒಂದೇ ದಿನ 146 ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು. ಆದರೆ ಡಿಸೆಂಬರ್ 31ರ ರಾತ್ರಿ ಕೇವಲ 78 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಕುಡಿದು ವಾಹನ ಚಾಲನೆ ಮಾಡುವುದರಿಂದಲೇ ಹೆಚ್ಚಿನ ಅಪಘಾತ ನಡೆಯುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿತ್ತು. ಆದ್ದರಿಂದ ಸಂಚಾರಿ ಪೊಲೀಸರು ನಿರಂತರವಾಗಿ ಡ್ರಂಕ್ ಅಂಡ್ ಡ್ರೈವ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

ಎಷ್ಟು ಪ್ರಕರಣಗಳು ದಾಖಲು; ಬೆಂಗಳೂರು ಸಂಚಾರಿ ಪೊಲೀಸರು ನೀಡಿದ ಮಾಹಿತಿಯಂತೆ ನಗರದಲ್ಲಿ 2022ರ ನವೆಂಬರ್ ತನಕ ನಗರದಲ್ಲಿ ಕುಡಿದು ವಾಹನ ಓಡಿಸಿದವರ ಸಂಖ್ಯೆ 26,017 ಆಗಿದೆ. ತಪಾಸಣೆ ವೇಳೆ ಕಟ್ಟಿದ ದಂಡದಿಂದಲೇ ಸುಮಾರು 26 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಬೆಂಗಳೂರು ನಗರದಲ್ಲಿ ಪ್ರತಿದಿನ ಕುಡಿದು ವಾಹನ ಓಡಿಸುವವರ ತಪಾಸಣೆ ನಡೆಸಲಾಗುತ್ತದೆ. ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನ ತಪಾಸಣೆ ನಡೆಸಲಾಗುತ್ತದೆ. ಈ ಬಾರಿ ಹೊಸ ವರ್ಷದ ಸಂಭ್ರಮ ವಾರಾಂತ್ಯದಲ್ಲೇ ಇದ್ದ ಕಾರಣ ಪೊಲೀಸರು ಸಹ ತಪಾಸಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.

Drunk And Drive

ಅಂದಹಾಗೆ ಅಂಕಿ-ಅಂಶಗಳ ಪ್ರಕಾರ 2022ರ ನವೆಂಬರ್ ತನಕ 26,017, 2021ರಲ್ಲಿ 4,144 ಪ್ರಕರಣ, 2020ರಲ್ಲಿ 5343 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ.

ಜನವರಿ 1ರ ತನಕ ನಗರದಲ್ಲಿ ಕುಡಿದು ವಾಹನ ಓಡಿಸುವವರ ವಿರುದ್ಧದ ವಿಶೇಷ ಕಾರ್ಯಾಚರಣೆ ಮುಂದುವರೆಸಲಾಗುತ್ತದೆ ಎಂದು ಸಂಚಾರಿ ಪೊಲೀಸರು ಹೇಳಿದ್ದರು. ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ನಗರದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

English summary
In a tweet Bengaluru traffic police said that 78 drunk and drive cases booked in city on December 31st night. Police also thanked people for driving responsibly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X