ಬೆಂಗಳೂರಿಗರಿಗೆ ಮತ್ತೊಂದು ಸಂಕಷ್ಟ 8 ಠಾಣೆಗಳು ಸೀಲ್‌ಡೌನ್!
ಬೆಂಗಳೂರು, ಜೂ. 23: ಇಡೀ ಜಗತ್ತಿಗೆ ಕಂಟಕ ತಂದಿರುವ ಕೊರೊನಾ ವೈರಸ್ ಮಹಾಮಾರಿ, ಬೆಂಗಳೂರು ಪೊಲೀಸರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಪಾದರಾಯನಪುರದಲ್ಲಿ ಭದ್ರತೆ ಕೊಡುವಾಗ ಬೆಂಗಳೂರು ಪೊಲೀಸರಿಗೆ ಶುರುವಾದ ಸಂಕಷ್ಟ ಮುಂದುವರೆದಿದೆ. ಈ ವರೆಗೆ ಪೊಲೀಸ್ ಇಲಾಖೆಯ ಮೂವರು ಸಿಬ್ಬಂದಿ ಮಹಾಮಾರಿ ಕೋವಿಡ್ 19ಗೆ ಬಲಿಯಾಗಿದ್ದು, ಒಬ್ಬ ಸಿಬ್ಬಂದಿ ಅನ್ಯಕಾರಣದಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸಮುದಾಯಕ್ಕೆ ಹರಡಿರುವ ಆತಂಕ ಕಾಡುತ್ತಿದೆ. ಯಾಕೇಂದರೆ ಬೆಂಗಳೂರು ಮಹಾನಗರದಲ್ಲಿವೊಂದರಲ್ಲಿಯೇ ಈವರೆಗೆ 1405 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 67 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಆತಂಕದಲ್ಲಿಯೆ ಪೊಲೀಸ್ ಇಲಾಖೆಯ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಇಲಾಖೆಯ ಒಟ್ಟು 77 ಸಿಬ್ಬಂದಿಗೆ ಕೋವಿಡ್ 19 ದೃಢಪಟ್ಟಿದ್ದು, 8 ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಕೊವಿಡ್ 19 ಕೇಸ್ ಹೊಂದಿರುವ ಟಾಪ್ 10 ರಾಷ್ಟ್ರಗಳು
ಒಬ್ಬ ಪೊಲೀಸ್ ಸಿಬ್ಬಂದಿ ನಿನ್ನೆ ಸೋಮವಾರ (ಜೂನ್ 22) ಕೊರೊನಾ ವೈರಸ್ ತಗುಲಿದ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ತನಿಖೆ ನಡೆದಿದೆ. ಬೆಂಗಳೂರು ಪೊಲೀಸರಿಗೆ ಕಾಡುತ್ತಿರುವ ಕೊರೊನಾವೈರಸ್ ಮಹಾಮಾರಿಯ ಸಂಪೂರ್ಣ ವಿವರ ಇಲ್ಲಿದೆ.

ಪೊಲೀಸರಿಗೆ ಆತಂಕ
ಬೆಂಗಳೂರಿನಲ್ಲಿ ಕೊರೊನಾ ವೈರಸ್ ದೃಢಪಟ್ಟ ಪೊಲೀಸರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ. ಅವರ ಪೈಕಿ 7 ಸೋಂಕಿತರು ಮಾತ್ರ ಗುಣಮುಖರಾಗಿದ್ದಾರೆ. ಉಳಿದಂತೆ ಮೂವರು ಸಾವು ಕೋವಿಡ್‌ನಿಂದ ಮೃತಪಟ್ಟಿದ್ದು, ಮತ್ತೊಬ್ಬರು ಅನ್ಯಕಾರಣದಿಂದ ಮೃತಪಟ್ಟಿದ್ದಾರೆ. ಸೋಂಕಿತ 66 ಪೊಲೀಸರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಇವತ್ತು ಮಾರತಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು ಕಾಣಿಸಿಕೊಂಡಿದ್ದು, ಆ ಠಾಣೆಯನ್ನು ಇನ್ನಷ್ಟೇ ಸೀಲ್‌ಡೌನ್ ಮಾಡುತ್ತಾರೆ ಎಂಬ ಮಾಹಿತಿಯಿದೆ. ಬೆಂಗಳೂರಿನಲ್ಲಿ ಸೀಲ್‌ಡೌನ್ ಆಗಿರುವ ಠಾಣೆಗಳ ವಿವರ ಹೀಗಿದೆ.

ಠಾಣೆಗಳು ಸೀಲ್‌ಡೌನ್
ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ ಬೆಂಗಳೂರಿನಲ್ಲಿ ಈ ವರೆಗೆ 8 ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಆ ಎಂಟು ಪೊಲೀಸ್ ಠಾಣೆಗಳು ಹೀಗಿವೆ. ವಿವಿಪುರ ಸಂಚಾರ ಪೊಲೀಸ್ ಠಾಣೆ, ಕುಮಾರಸ್ವಾಮಿ ಸಂಚಾರ ಪೊಲೀಸ್ ಠಾಣೆ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ, ಹಲಸೂರ್ ಗೇಟ್ ಪೊಲೀಸ್ ಠಾಣೆ, ಮಾರತ್ ಹಳ್ಳಿ ಪೊಲೀಸ್ ಠಾಣೆ, ಕಲಾಸಿ ಪಾಳ್ಯ ಪೊಲೀಸ್ ಠಾಣೆ, ಕೋರಮಂಗಲ ಪೊಲೀಸ್ ಠಾಣೆ ಹಾಗೂ ತಿಲಕ್ ನಗರ ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಸಿಬ್ಬಂದಿಗೆ ಸೋಂಕು
ಬೆಂಗಳೂರಲ್ಲಿ ಇವರೆಗೂ ಕೊರೊನಾ ವೈರಸ್ ಸೋಂಕು 18 ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 77 ಸಿಬ್ಬಂದಿಗೆ ಸೋಂಕು ತಗುಲಿದೆ.
ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆಯ ಎಎಸ್ಐ 1, ಜೆ.ಜೆ. ನಗರದ 1 PC, ಹೆಣ್ಣೂರು ಠಾಣೆಯ 1 HPC, ಸೋಲದೇವನಹಳ್ಳಿಯ 1 PC, ಸಿಟಿ ಮಾರ್ಕೆಟ್ ಠಾಣೆಯ 1 PC, ಕಲಾಸಿ ಪಾಳ್ಯ ಠಾಣೆಯ ಒಬ್ಬ ಪಿಎಸ್‌ಐ, 3 ಎಎಸ್‌ಐ ಸೇರಿದಂತೆ ಒಟ್ಟು 24 ಸಿಬ್ಬಂದಿಗೆ, ಸಿಟಿ ಮಾರುಕಟ್ಟೆ ಸಂಚಾರಿ ಠಾಣೆಯ ASI-1, HPC-3, PC-1 ಸೇರಿದಂತೆ ಒಟ್ಟು 5 ಸಿಬ್ಬಂದಿಗೆ, ಕಬ್ಬನ್ ಪಾರ್ಕ್ ಠಾಣೆಯ PC-1, ವಿವಿ ಪುರ ಸಂಚಾರಿ ಪೊಲೀಸ್ ಠಾಣೆಯ ASI-2, HPC- 2, PC-2 ಸೇರಿದಂತೆ ಒಟ್ಟು 6 ಸಿಬ್ಬಂದಿಗೆ, ಅಶೋಕ್ ನಗರ ಸಂಚಾರಿ ಠಾಣೆ PC -3, WPC-2, WHC-1, ASI-1 ಸೇರಿದಂತೆ ಒಟ್ಟು 7 ಸಿಬ್ಬಂದಿಗೆ, ಸಿಸಿಬಿ ಕಚೇರಿಯ 5 ಸಿಬ್ಬಂದಿಗೆ, ಶಂಕರಪುರ ಠಾಣೆಯ PSI-1, ಪುಲಕೇಶಿನಗರ ಸಂಚಾರಿ ಠಾಣೆಯ- 1PC, ಡಿಜಿ ಕಚೇರಿಯ PC-2, ಸಂಪಂಗಿರಾಮ ನಗರ ಠಾಣೆಯ PC-1, ಕೆಎಸ್‌ಆರ್‌ಪಿಯ 8 ಸಿಬ್ಬಂದಿಗೆ, ಸಿಎಆರ್-1, ಕೋರಮಂಗಲ ಪೊಲೀಸ್ ಠಾಣೆಯ 1 PC, ಬಂಡೆಪಾಳ್ಯ ಠಾಣೆಯ 1PC, ಕುಮಾರಸ್ವಾಮಿ ಸಂಚಾರಿ ಠಾಣೆಯ 1 PC, ಹಲಸೂರ್ ಗೇಟ್ ಠಾಣೆಯ-1PC, ಮಾರತಹಳ್ಳಿ ಠಾಣೆಯ 4 PC, ಎಸಿಬಿ-1 ಹಾಗೂ ಬಿಡಿಎನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಒಬ್ಬ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ.

ಆತಂಕದಲ್ಲಿ ಜನತೆ
ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್ ಹೆಚ್ಚು ಮಾಡುತ್ತಿರುವುದು ಬೆಂಗಳೂರಿನ ಜನತೆಗೆ ಮತ್ತೊಂದು ಆತಂಕ ತಂದಿದೆ. ಎಂಥ ಕಷ್ಟದ ಪರಿಸ್ಥಿತಿತಿಯೇ ಇದ್ದರೂ ಪೊಲೀಸ್ ಠಾಣೆಗಳು ಬಂದ್ ಆಗುತ್ತಿರಲಿಲ್ಲ. ಇದೀಗ ಕಾಣದ ವೈರಿಯ ಹೊಡೆತಕ್ಕೆ ಪೊಲೀಸ್ ಠಾಣೆಗಳು ಸಿಲುಕಿವೆ. ಹೀಗಾಗಿ ಬೆಂಗಳೂರಿನಾದ್ಯಂತ 8 ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಜನರಿಗೆ ಭದ್ರತೆ ಕೊಡುವುದರೊಂದಿಗೆ ಕೊರೊನಾ ವೈರಸ್ ವಿರುದ್ಧವೂ ಹೋರಾಡಬೇಕಾದ ಅನಿವಾರ್ಯತೆ ಪೊಲೀಸರಿಗೆ ಎದುರಾಗಿದೆ. ಸೋಂಕಿತ ಪೊಲೀಸರೊಂದಿಗೆ ಅವರ ಕುಟುಂಬಗಳು ಇದೀಗ ಆತಂಕ್ಕೆ ಸಿಲುಕಿವೆ.