ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಒಂದೇ ಕುಟುಂಬದ 6 ಮಂದಿಗೆ ಕೊರೊನಾ ಸೋಂಕು

|
Google Oneindia Kannada News

ಬೆಂಗಳೂರು, ಜೂನ್ 13: ನಗರದಲ್ಲಿ ಒಂದೇ ಕುಟುಂಬದ 6 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಶುಕ್ರವಾರ ಒಂದೇ ದಿನ 36 ಪ್ರಕರಣಗಳು ಪತ್ತೆಯಾಗಿವೆ.

Recommended Video

Haveri people neglect all the rules and participate in Bandi Run | Haveri | Oneindia Kannada

ಸಂಪಂಗಿರಾಮನಗರದಲ್ಲಿ ವಾಸವಿದ್ದ ಒಂದೇ ಕುಟುಂಬದ ಆರು ಮಂದಿಗೆ ಶುಕ್ರವಾರ ಸೋಂಕು ತಗಲಿರುವುದು ದೃಢಪಟ್ಟಿದೆ. ಇತ್ತೀಚೆಗೆ ವೃದ್ಧರೊಬ್ಬರಲ್ಲಿ (ರೋಗಿ 4851) ಸೋಂಕು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರೆಲ್ಲರನ್ನೂ ಅವರ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಐದು ದಿನದ ಬಳಿಕ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದಾಗ ಆರು ಮಂದಿಯ ವರದಿಯು ಪಾಸಿಟಿವ್‌ ಬಂದಿದೆ.

coronavirus

ಅದರಲ್ಲಿ ಇಬ್ಬರು ವೈದ್ಯ ವಿದ್ಯಾರ್ಥೀಗಳಿಗೂ ಸೋಂಕು ತಗುಲಿದೆ. ಕೊವಿಡ್‌-19 ರೋಗಕ್ಕೆ ಮೂವರು ಮಹಿಳೆಯರು ಸೇರಿ ಒಟ್ಟು ನಾಲ್ಕು ಮಂದಿ ಬಲಿಯಾಗಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಒಟ್ಟು 27 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕ: ಇಂದು ಕೊರೊನಾ ಪ್ರಕರಣಗಳಿಗಿಂತ ಡಿಸ್ಚಾರ್ಜ್ ಆದವರೇ ಹೆಚ್ಚುಕರ್ನಾಟಕ: ಇಂದು ಕೊರೊನಾ ಪ್ರಕರಣಗಳಿಗಿಂತ ಡಿಸ್ಚಾರ್ಜ್ ಆದವರೇ ಹೆಚ್ಚು

ಬೆಂಗಳೂರಿನಲ್ಲಿ ಒಟ್ಟು 617 ಮಂದಿಗೆ ಸೋಂಕು ಬಂದಿದ್ದು, ಸದ್ಯ 290 ಸಕ್ರಿಯ ಪ್ರಕರಣಗಳಿದ್ದು, 299 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಆನೇಕಲ್ 46 ವರ್ಷದ ಮಹಿಳೆಯೊಬ್ಬರು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಸಂಬಂಧ ಆಸ್ಪತ್ರೆ ತೆರಳಿದ್ದರು.

8 ಮಂದಿ ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳ ಜೊತೆ 3 ಮಂದಿ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಅಂತೆಯೇ ಕೊಮ್ಮಘಟ್ಟದಲ್ಲಿ 56 ವರ್ಷದ ಮಹಿಳೆಗೆ ಸೊಂಕು ಬಂದಿದೆ.

ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ 25 ವರ್ಷದ ವೈದ್ಯ ವಿದ್ಯಾರ್ಥಿನಿಗೆ ಸೋಂಕು ತಗಲಿದ್ದು, ಈಕೆ ಆಸ್ಪತ್ರೆಯ ಕ್ವಾರ್ಟರ್ಸ್‌ನಲ್ಲೇ ವಾಸವಿದ್ದಳು ಎನ್ನಲಾಗಿದೆ.

ಕೊಮ್ಮಘಟ್ಟದ ಬಿಡಿಎ ಅಪಾರ್ಟ್‍ಮೆಂಟ್ ನಲ್ಲಿದ್ದ ಮಹಿಳೆ ಡಯಾಲಿಸಿಸ್ ಸಂಬಂಧ ಆಸ್ಪತ್ರೆಗೆ ತೆರಳುತ್ತಿದ್ದರು. ಈಗ ಅವರಿಗೆ ಕೊವಿಡ್‌ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಈಗ ಈಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ನಾಲ್ವರು ಮತ್ತು 8 ಮಂದಿ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.

English summary
In Bengaluru 6 Members of a same family infected by Coronavirus, on June 12, 36 more cases are found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X