ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ಓಡಲಿವೆ 6 ರೈಲು, ಪಟ್ಟಿ
ಬೆಂಗಳೂರು ಜು.4: ಬೆಂಗಳೂರಿನ ಯಶವಂತಪುರ ಹಾಗೂ ಕಂಟೋನ್ಮೆಂಟ್ ನಿಲ್ದಾಣಗಳಿಂದ ಸಂಚರಿಸುತ್ತಿದ್ದ 6 ಜೋಡಿ ರೈಲುಗಳು ಇನ್ನು ಮುಂದೆ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ನಿಂದ ಸಂಚರಿಸಲಿವೆ.
ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣಗಳಲ್ಲಿನ ಜನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಯಶವಂತಪುರ ಹಾಗೂ ಕಂಟೋನ್ಮೆಂಟ್ ನಿಲ್ದಾಣಗಳಲ್ಲಿನ 6 ಜೋಡಿ ರೈಲುಗಳನ್ನು ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಸ್ಥಳಾಂತರಿಸಲು ನೈಋತ್ಯ ನಿರ್ಧರಿಸಿದೆ.
ಇದರಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ, ದಂಡು ರೈಲು ನಿಲ್ದಾಣಗಳಲ್ಲಿ ಪ್ರಯಾಣಕರ ಓಡಾಟ ಕಡಿಮೆಯಾಗಿ ಜನದಟ್ಟಣೆ ಕಡಿಮೆ ಆಗಲಿದೆ. ನೈಋತ್ಯ ರೈಲ್ವೆ ಕಳೆದ ಜೂನ್ 6ರಂದು ದೂರದ ಮೂರು ಜೋಡಿ ರೈಲುಗಳ ಸಂಚಾರವನ್ನು ಟರ್ಮಿನಲ್‌ನಿಂದ ಆರಂಭಿಸಿತ್ತು.
ಇದೀಗ ಪುನಃ 6 ಜೋಡಿ ರೈಲುಗಳನ್ನು ಬೈಯಪ್ಪನಹಳ್ಳಿ ಟರ್ಮಿನಲ್‌ಗೆ ಸ್ಥಳಾಂತಸಲಿದೆ. ಇನ್ನು ಮುಂದೆ ಯಶವಂತಪುರ, ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಡುತ್ತಿದ್ದ ರೈಲುಗಳು ಬೈಯಪ್ಪನಹಳ್ಳಿಯಿಂದ ಹೊರಡುತ್ತವೆ. ರೈಲುಗಳ ಪಟ್ಟಿ ಇಲ್ಲಿದೆ.

ಆರು ರೈಲು ಸೇವೆಗಳ ಮಾಹಿತಿ ಹೀಗಿದೆ
ಬೈಯಪ್ಪನಹಳ್ಳಿ ಟರ್ಮಿನಲ್ ನಿಂದ-ಹತಿಯಾ (18637/18638), ಟರ್ಮಿನಲ್- ಭುಬನೇಶ್ವರ (12845/2846), ಟರ್ಮಿನಲ್ - ಹೌರಾಹ್ (22887/22888), ಟರ್ಮಿನಲ್ - ಹತಿಯಾ (12835/12836), ಟರ್ಮಿನಲ್ -ಟಾಟಾನಗರ (12889/12890) ಮತ್ತು ಟರ್ಮಿನಲ್ -ಮುಜಾಫರ್ ನಗರ (15228/15227) ಸಂಚರಿಸಲಿವೆ. ಇದರಲ್ಲಿ ಟರ್ಮಿನಲ್ - ಹತಿಯಾ (12835/12836) ಮಾತ್ರ ವಾರಕ್ಕೆ ಎರಡು ಬಾರಿ ಸಂಚರಿಸಿದರು. ಉಳಿದ ರೈಲುಗಳು ವಾರಕ್ಕೊಮ್ಮೆ ಮಾತ್ರ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಜುಲೈ 16 ರಿಂದ 6 ಜೋಡಿ ರೈಲುಗಳು ಸೇವೆ
ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಶ್ಯಾಮ್ ಸಿಂಗ್, "ರೈಲು ಸೇವೆಗಳ ಸ್ಥಳಗಳನ್ನು ಬೈಯಪ್ಪನಹಳ್ಳಿ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಬದಲಾಯಿಸುವುದರಿಂದ ಯಶವಂತಪುರ ಹಾಗೂ ಕಂಟೋನ್ಮೆಂಟ್ ರೈಲು ನಿಲ್ದಾಣಗಳಲ್ಲಿನ ಜನದಟ್ಟಣೆ ಕಡಿಮೆ ಆಗುತ್ತದೆ. ಇದರಿಂದ ಪರಿಣಾಮಕಾರಿ ಸೇವೆ ಸಾಧ್ಯವಾಗುತ್ತದೆ" ಎಂದರು.
ಸ್ಥಳಾಂತರ ಮಾಡಲಾದ 6 ಜೋಡಿ ರೈಲುಗಳು ಜುಲೈ 16 ರಿಂದ ಟರ್ಮಿನಲ್ ನಿಂದ ಸೇವೆ ಆರಂಭಿಸಲಿವೆ. ಟರ್ಮಿನಲ್ ನಿಂದ ಹೊರಡುವ ರೈಲುಗಳ ಸೇವೆ, ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಟರ್ಮಿನಲ್ ನಲ್ಲಿ ಇನ್ನಷ್ಟು ರೈಲು ಸೇವೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

314ಕೋಟಿ ವೆಚ್ಚದಲ್ಲಿ ನಿರ್ಮಾಣ
ಬೈಯಪ್ಪನಹಳ್ಳಿ ಸರ್. ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಇದು ಭಾರತದ ರೈಲು ನಿಲ್ದಾಣ ಎಂದು ನಂಬದ ರೀತಿಯಲ್ಲಿ ಅಭಿವೃದ್ಧಿ ಕಂಡಿದೆ. ಒಟ್ಟು 314 ಕೋಟಿ ವೆಚ್ಚದಲ್ಲಿ ಸುವ್ಯವಸ್ಥಿತವಾಗಿ ವಿಮಾನ ನಿಲ್ದಾಣ ರೀತಿಯಲ್ಲಿ ನಿರ್ಮಿಸಲಾಗಿದೆ. ನಗರದ ಇತರ ನಿಲ್ದಾಣಗಳಲ್ಲಿ ಜನದಟ್ಟಣೆ ಮಾಡುವ ಪ್ರಮುಖ ಉದ್ದೇಶದಿಂದ ಬೈಯಪ್ಪನಹಳ್ಳಿಯಲ್ಲಿ ಇಂಥದ್ದೊಂದು ನಿಲ್ದಾಣ ನಿರ್ಮಿಸಲಾಗಿದೆ. ಕಳೆದ ಜೂ.20ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟರ್ಮಿನಲ್ ಗೆ ಅಧಿಕೃತ ಚಾಲನೆ ನೀಡಿದ್ದರು.

ಮೂರನೇ ದೊಡ್ಡ ನಿಲ್ದಾಣ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಯಶವಂತಪುರ ರೈಲು ನಿಲ್ದಾಣ ಬಳಿಕ ಮೂರನೇ ಕೋಚಿಂಗ್ ಟರ್ಮಿನಲ್ ರೈಲು ನಿಲ್ದಾಣ ಇದಾಗಿದೆ. ಏಳು ಫ್ಲಾಟ್ ಫಾರ್ಮ್ ಮತ್ತು ಏಳು ಸ್ಟಾಬ್ಲಿಂಗ್ ಗಳು ಇವೆ. ಪ್ರತಿ ಫ್ಲಾಟ್ ಫಾರ್ಮ್ ಗಳು 15ಮೀಟರ್ ಅಗಲ 600ಮೀಟರ್ ಉದ್ದ ಇವೆ. ಎಲ್ಲ ಫ್ಲಾಟ್ ಫಾರ್ಮ್ ಗಳನ್ನು ಸಂಪರ್ಕಿಸಲು ಸಬ್ ವೇ ಅಳವಡಿಸಲಾಗಿದ್ದು, ಮಳೆನೀರು ಕೊಯ್ಲು ಅಳವಡಿಕೆ ಮಾಡಲಾಗಿದೆ. ದೇಶದಲ್ಲೇ ಇದೊಂದು ಅತ್ಯುತ್ತಮ ಮಾದರಿಯ ರೈಲು ನಿಲ್ದಾಣವಾಗಿದೆ.
Recommended Video
-
ದ್ವಿತೀಯ ಪಿಯುಸಿ 'ಕಲಾ' ವಿಭಾಗದಲ್ಲಿ ಶೇ.72.86 ರಷ್ಟು ಫಲಿತಾಂಶ: ಟಾಪರ್ಸ್ ಲಿಸ್ಟ್ ಇಲ್ಲಿದೆ -
2nd PUC ಫಲಿತಾಂಶದಲ್ಲಿ ಶೇ. 13ರಷ್ಟು ಏರಿಕೆ; ಕಲಿಕೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಫಸ್ಟ್: ಮಧು ಬಂಗಾರಪ್ಪ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ











Click it and Unblock the Notifications