ಸೆ.25, 26ರಂದು ಬೆಂಗಳೂರಿನಲ್ಲಿ ಪವರ್ ಕಟ್

ಬೆಂಗಳೂರು, ಸೆ. 24 : ಬೆಂಗಳೂರು ವಿದ್ಯುತ್ ಸರಬರಾಜು ಮಂಡಳಿ (ಬೆಸ್ಕಾಂ)ನಿಮ್ಹಾನ್ಸ್‌ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಗುರುವಾರ ವಿವಿಧ ಪ್ರದೇಶದಲ್ಲಿ ಆರು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಸ್ಕಾಂ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಸೆ.25ರ ಗುರುವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದೆ. ಸೆ.26ರ ಗುರುವಾರವೂ ಸಹ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ವಿರುತ್ತದೆ.

BESCOM

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ : ವಿಲ್ಸನ್ ಗಾರ್ಡನ್ ಅಪಾರ್ಟ್‌ಮೆಂಟ್‌ನಿಂದ 13ನೇ ಅಡ್ಡರಸ್ತೆ ಎದುರು, 1, 2 ಮತ್ತು 3ನೇ ಅಡ್ಡರಸ್ತೆ, ಎ.ಕೆ ಹಳ್ಳಿ, ಎಸ್.ಎಂ ನಗರ, 1 ನೇ ಬಡಾವಣೆ ಜಯನಗರ, ಕಿದ್ವಾಯಿ ಆಸ್ಪತ್ರೆ, ನಿಮ್ಹಾನ್ಸ್ ಆಸ್ಪತ್ರೆ, 8ನೇ ಮುಖ್ಯರಸ್ತೆ ಭೈರಸಂದ್ರ ಭಾಗ, ಟಿಪ್ಪು ಕಾನ್ವೆಂಟ್, ಭೈರಸಂದ್ರ 8ನೇ ಮುಖ್ಯರಸ್ತೆ, ಜಯನಗರ 2ನೇ ಬ್ಲಾಕ್, ಅಶೋಕ ಪಿಲ್ಲರ್, ಲಾಲ್ ಬಾಗ್ ಸಿದ್ದಾಪುರ, ಡಾಸ್ ಕಾಂಪೌಂಡ್, ಗರುಡ ಸ್ವಾಗತ್, ಮಂತ್ರಿ ಗಾರ್ಡನ್ಸ್, ಆರ್‌ವಿ ಟೀಚರ್ಸ್ ಕಾಲೇಜು, ಗೀತಾ ಕಾಲೋನಿ, ಯಡಿಯೂರು.

26ರಂದು ವಿದ್ಯುತ್ ವ್ಯತ್ಯಯ : ಆಡುಗೋಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದುರಸ್ತಿ ಕಾರ್ಯವಿರುವ ಹಿನ್ನಲೆಯಲ್ಲಿ ಸೆ.26ರ ಶುಕ್ರವಾರ ಬೆ.11 ರಿಂದ 4ರವರೆಗೆ ಆಡುಗೋಡಿ, ವಿಲ್ಸನ್ ಗಾರ್ಡನ್, ಚಂದ್ರಪ್ಪನಗರ, ಬಿ.ಜಿ.ರಸ್ತೆ, ಹೊಸೂರು ರಸ್ತೆ, ಮೈಕೊ, ಲಾಲಾಜಿನಗರ, ಚಿನ್ನಯ್ಯನ ಪಾಳ್ಯದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+