ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೇ. 57 ಮಂದಿಗೆ ಬಿಬಿಎಂಪಿ ಕಾರ್ಯವೈಖರಿ ತೃಪ್ತಿಯಿಲ್ಲ: ವರದಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್‌ 22: ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (B.PAC) ತನ್ನ ಬೆಂಗಳೂರು ನಾಗರಿಕ ಗ್ರಹಿಕೆ ಸಮೀಕ್ಷೆ 2022 ಅನ್ನು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 57% ರಷ್ಟು ಜನರು ನಗರದ ಒಟ್ಟಾರೆ ಆಡಳಿತದ ಬಗ್ಗೆ ತೃಪ್ತರಾಗಿಲ್ಲ ಎಂದು ಹೇಳಿದ್ದಾರೆ.

ಸಮೀಕ್ಷೆಯು ನಗರದ 8,405 ಜನರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಇದು ಫೆಬ್ರವರಿ ಮತ್ತು ಜೂನ್ ನಡುವೆ ಎಲ್ಲಾ ಎಂಟು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಲಯಗಳನ್ನು ಒಳಗೊಂಡಿದೆ ಎಂದು ವರದಿ ತಿಳಿಸಿದೆ. ಸಮೀಕ್ಷೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ನಾಗರಿಕ ಜಾಗೃತಿ ಮತ್ತು ಭಾಗವಹಿಸುವಿಕೆ (ಬಿಬಿಎಂಪಿ ವಾರ್ಡ್ ಸಂಬಂಧಿತ), ಆಡಳಿತ ಮತ್ತು ನಾಗರಿಕ ಸೌಕರ್ಯಗಳ ತೃಪ್ತಿ ಮಟ್ಟ, ಬಿಬಿಎಂಪಿ ಚುನಾವಣೆ ಹಾಗೂ ಒಟ್ಟು 23 ಪ್ರಶ್ನೆಗಳನ್ನು ಈ ಸಮೀಕ್ಷೆ ಹೊಂದಿತ್ತು.

ಬಾಗ್ಮನೆ ಟೆಕ್ ಪಾರ್ಕ್ ಒತ್ತುವರಿ ತೆರವು ಸ್ಥಗಿತ ಪ್ರಶ್ನಿಸಿ ಪಿಐಎಲ್ಬಾಗ್ಮನೆ ಟೆಕ್ ಪಾರ್ಕ್ ಒತ್ತುವರಿ ತೆರವು ಸ್ಥಗಿತ ಪ್ರಶ್ನಿಸಿ ಪಿಐಎಲ್

ಬೆಂಗಳೂರಿನ ಆಡಳಿತ ಮತ್ತು ನಾಗರಿಕ ಸೌಕರ್ಯಗಳ ಬಗ್ಗೆ ನಿವಾಸಿಗಳ ತೃಪ್ತಿಯ ಬಗ್ಗೆ ಎರಡನೇ ವಿಭಾಗದಲ್ಲಿ 57% ಒಟ್ಟಾರೆ ಆಡಳಿತವು ಅತೃಪ್ತಿಕರವಾಗಿದೆ ಎಂದು ಹೇಳಿದ್ದಾರೆ. ಕೇವಲ 14% ಜನರು ತೃಪ್ತಿ ಹೊಂದಿದ್ದಾರೆಂದು ಹೇಳಿದ್ದಾರೆ. 29% ಜನರು ಸ್ವಲ್ಪಮಟ್ಟಿಗೆ ತೃಪ್ತರಾಗಿದ್ದಾರೆ ಎಂದು ಹೇಳಿಕೆ ದಾಖಲಿಸಿದ್ದಾರೆ. ಹೊಂಡಗಳಿಂದ ಕೂಡಿದ ಹದಗೆಟ್ಟ ರಸ್ತೆಗಳು, ಕುಡಿಯುವ ನೀರು ಪೂರೈಕೆ, ಕಸ ಮತ್ತು ತ್ಯಾಜ್ಯ ವಿಲೇವಾರಿ, ಮತ್ತು ಚರಂಡಿ ನಿರ್ವಹಣೆ ಮತ್ತು ಸಾರ್ವಜನಿಕ ಶೌಚಾಲಯಗಳು ತಮ್ಮ ಮುಖ್ಯ ಕಾಳಜಿಗಳಾಗಿವೆ ಎಂದು ನಿವಾಸಿಗಳು ಹೇಳಿದ್ದಾರೆ.

ಸ್ಥಳೀಯರು ಪ್ರಯಾಣದ ಆಯ್ಕೆಗಳಲ್ಲಿ ಹೆಚ್ಚು ಅತೃಪ್ತರಾಗಿದ್ದಾಗಿ ತಿಳಿಸಿದ್ದಾರೆ. ಕೆರೆ ಅಭಿವೃದ್ಧಿ ಮತ್ತು ಪುನರುಜ್ಜೀವನದ ಬಗ್ಗೆ ತುಲನಾತ್ಮಕವಾಗಿ ಹೆಚ್ಚು ತೃಪ್ತರಾಗಿದ್ದರು. ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ ಸ್ಥಳೀಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದಾಗಿ ಇದು ಪ್ರಾಯಶಃ ಅಭಿಪ್ರಾಯ ಆಗಿರಬಹುದು ಎಂದು ಹೇಳಿದೆ.

ಸಮೀಕ್ಷೆಗೆ ಆಯ್ಕೆಯಾಗಿದ್ದ ವಲಯಗಳ ಪೈಕಿ ಮಹದೇವಪುರ ವಲಯದಲ್ಲಿ ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ನಗರದ ಚಲನಶೀಲತೆ ಮತ್ತು ರಸ್ತೆ ಪರಿಸ್ಥಿತಿಗಳ ಬಗ್ಗೆ ಅತೃಪ್ತರಾಗಿರುವುದಾಗಿ ಹೇಳಿದ್ದಾರೆ. ತುಲನಾತ್ಮಕವಾಗಿ ರಾಜರಾಜೇಶ್ವರಿ ನಗರ ವಲಯವು ಹೆಚ್ಚು ಪ್ರತಿಕ್ರಿಯಿಸಿದವರು ತಮಗೆ ತೃಪ್ತಕರವಾಗಿದೆ ಎಂಬ ದೃಢೀಕರಣ ನೀಡಿದರು.

ಆಯಾ ವಾರ್ಡ್‌ಗಳ ಬೆಳಕು ಮತ್ತು ಇತರ ಸುರಕ್ಷತಾ ಪರಿಸ್ಥಿತಿಗಳ ಕುರಿತು, ಬೊಮ್ಮನಹಳ್ಳಿ ವಲಯದ 16 ವಾರ್ಡ್‌ಗಳಲ್ಲಿ 11 ಮತ್ತು ರಾಜರಾಜೇಶ್ವರಿ ನಗರ ವಲಯದ 14 ರಲ್ಲಿ ಒಂಬತ್ತು ವಾರ್ಡ್‌ಗಳು 50% ಕ್ಕಿಂತ ಹೆಚ್ಚು ಮಂದಿ ಹೆಚ್ಚು ತೃಪ್ತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಶೇ. 93ರಷ್ಟು ಮಂದಿ ಮತದಾನ ಮಾಡುವುದಾಗಿ ಹೇಳಿದ್ದಾರೆ.

ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಮುಖ್ಯ ಸಮಸ್ಯೆ

ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಮುಖ್ಯ ಸಮಸ್ಯೆ

ಈ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 57 ರಷ್ಟು ಜನರು ನಗರದ ಒಟ್ಟಾರೆ ಆಡಳಿತವು ತೃಪ್ತಿಕರವಾಗಿಲ್ಲ ಎಂದು ಹೇಳಿದ್ದಾರೆ. ನಾಗರಿಕರು ಗಮನ ಹರಿಸಬೇಕಾದ ಪ್ರಮುಖ ಸಮಸ್ಯೆಗಳೆಂದರೆ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ, ಕುಡಿಯುವ ನೀರು, ಕಸ ತೆಗೆಯುವಿಕೆ ಮತ್ತು ಘನತ್ಯಾಜ್ಯ ನಿರ್ವಹಣೆ, ಚರಂಡಿ ನಿರ್ವಹಣೆ ಮತ್ತು ಸಾರ್ವಜನಿಕ ಶೌಚಾಲಯಗಳು ಎಂದು ವರದಿ ಹೇಳಿದೆ.

ಬೆಂಗಳೂರು: ಗುರುವಾರ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ-ಬೆಸ್ಕಾಂಬೆಂಗಳೂರು: ಗುರುವಾರ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ-ಬೆಸ್ಕಾಂ

ಸಮೀಕ್ಷೆಯಲ್ಲಿ 8,405 ಮಂದಿ ಭಾಗಿ

ಸಮೀಕ್ಷೆಯಲ್ಲಿ 8,405 ಮಂದಿ ಭಾಗಿ

ಬಿಬಿಎಂಪಿ ಆಡಳಿತ, ನಾಗರಿಕ ಸೌಲಭ್ಯಗಳು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗಿತ್ತು. ಫೆಬ್ರವರಿಯಿಂದ ಮೇ 2022ರ ಅವಧಿಯಲ್ಲಿ ಎಂಟು ಬಿಬಿಎಂಪಿ ವಲಯಗಳಲ್ಲಿ 8,405 (6,367 ಪುರುಷರು, 2,030 ಮಹಿಳೆಯರು ಮತ್ತು 8 ಇತರರು) ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗಿದೆ. ಪ್ರತಿಕ್ರಿಯೆ ಸಂಗ್ರಹವನ್ನು ಆನ್‌ಲೈನ್ ಮೂಲಕ ಮಾಡಲಾಯಿತು. ವಿದ್ಯಾರ್ಥಿಗಳು, ಆಟೋ ಚಾಲಕರು ಮತ್ತು ಹಾಲು ವಿತರಣಾ ಸಿಬ್ಬಂದಿಯನ್ನು ಒಳಗೊಂಡ ಸ್ವಯಂಸೇವಕರು ಈ ಕಾರ್ಯವನ್ನು ಕೈಗೊಂಡರು. ಈ ನಾಗರಿಕರಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗಿತ್ತು.

ನಾಗರಿಕರ ನೋವಿಗೆ ಸುಧಾರಣೆ ಅಗತ್ಯ

ನಾಗರಿಕರ ನೋವಿಗೆ ಸುಧಾರಣೆ ಅಗತ್ಯ

ಎರಡು ವರ್ಷಗಳ ಹಿಂದೆ ಬಿಬಿಎಂಪಿ ಕೌನ್ಸಿಲ್ ಅವಧಿ ಮುಗಿದಿದ್ದು, ಯಾವುದೇ ಚುನಾವಣೆಗಳು ನಡೆಯದ ಕಾರಣ ವಿವಿಧ ನಾಗರಿಕ ಸೇವೆಗಳ ವಿಷಯದಲ್ಲಿ ನಾಗರಿಕರು ಅನುಭವಿಸುತ್ತಿರುವ ನೋವನ್ನು ನಗರವು ತನ್ನ ನಾಗರಿಕರ ಜೀವನಮಟ್ಟವನ್ನು ಸುಧಾರಿಸಲು ಮಾಡಬೇಕಾದ ದೊಡ್ಡ ಸುಧಾರಣೆಗಳನ್ನು ತರಲು ಇಂತಹ ಅಧ್ಯಯನವು ಮುಖ್ಯವಾಗಿದೆ ಎಂದು ಬಿ ಪ್ಯಾಕ್‌ ಹೇಳಿದೆ.

ಬೆಂಗಳೂರಿಗರ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನ

ಬೆಂಗಳೂರಿಗರ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನ

ಈ ಸಮೀಕ್ಷೆಯು ಬಿಬಿಎಂಪಿಯ ಕಳೆದ ಐದು ವರ್ಷಗಳ ಸಾಧನೆಗಳು, ಸಮಸ್ಯೆಗಳು ಮತ್ತು ಮಾಡಬೇಕಿರುವ ಕೆಲಸಗಳ ಬಗ್ಗೆ ಬೆಂಗಳೂರಿಗರ ಅಭಿಪ್ರಾಯ ಮತ್ತು ದೃಷ್ಟಿಕೋನಗಳನ್ನು ಸಂಗ್ರಹಿಸುವ ಪ್ರಾಮಾಣಿಕ ಪ್ರಯತ್ನವಾಗಿದೆ. ನಾವು ಈ ಒಳನೋಟಗಳನ್ನು ಸರ್ಕಾರಕ್ಕೆ, ಅಧಿಕಾರಗಳಿಗೆ ತಿಳಿಸಲು ಉದ್ದೇಶಿಸಿದ್ದೇವೆ. ಇದರಿಂದ ಅವರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ಬೆಂಗಳೂರಿಗರ ನಿರೀಕ್ಷೆಗಳನ್ನು ಪೂರೈಸಬಹುದು ಎಂದು ಬಿ ಪ್ಯಾಕ್‌ ವ್ಯವಸ್ಥಾಪಕ ಟ್ರಸ್ಟಿ ಮತ್ತು ಸಿಇಒ ರೇವತಿ ಅಶೋಕ್ ಹೇಳಿದ್ದಾರೆ.

English summary
Bangalore Political Action Committee (B.PAC) has released its Bangalore Citizen Perception Survey 2022. Among those who participated in this survey, 57% said they were not satisfied with the overall governance of the city
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X