ಬಿಎಂಟಿಸಿ 500 ಬಸ್‌ಗಳಲ್ಲಿ ಹೊಸ ಸಾಧನ: ದೃಷ್ಟಿಹೀನರಿಗೆ ವರದಾನ... BMTC OnBoard
ಬೆಂಗಳೂರು, ಜುಲೈ 13: ರಾಜಧಾನಿಯ ನಿವಾಸಿಗಳಿಗೆ ಜೀವನಾಡಿಯಾಗಿರುವ ಬೆಂಗಳುರು ಮಹಾನಗರ ಸಾರಿಗೆ ಸಂಸ್ಥೆ (BMTC) ಕೊನೆ ಮೈಲಿವರೆಗೂ ಸೇವೆ ನೀಡುತ್ತಿದೆ. ಎಲ್ಲ ವರ್ಗ, ಸಮುದಾಯದವರಿಗೆ ಸಾರಿಗೆ ಸೌಕರ್ಯ ಒದಗಿಸುತ್ತಿದೆ. ಇದೀಗ ದೃಷ್ಟಿಹೀನರಿಗಾಗಿ ತಂತ್ರಜ್ಞಾನ ಆಧಾರಿತ ಸೌಲಭ್ಯವೊಂದನ್ನು ನೀಡಲು ಮುಂದಾಗಿದೆ. 'ಆನ್‌ಬೋರ್ಡ್' ಹೆಸರಿನಲ್ಲಿ ತಂತ್ರಜ್ಞಾನ ಪರಿಹಾರ ಒದಗಿಸುತ್ತಿದೆ.
ಹೌದು ದೃಷ್ಟಿ ಸಮಸ್ಯೆ ಉಳ್ಳವರಿಗೂ ಜೀವನ ಇದೆ. ಅವರು ಸಹ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುತ್ತಾರೆ. ಅವರಿಗೆ ತಂತ್ರಜ್ಞಾನ ಸಹಾಯದಿಂದ ತಯಾರಿಸಿದ ವಿಶೇಷ ಸಾಧನವೊಂದನ್ನು ಬಿಎಂಟಿಸಿ ಬಸ್‌ಗಳಲ್ಲಿ ಬಳಕೆ ಮಾಡುವ, ಇಲ್ಲವೇ ಅಳವಡಿಕೆ ಮಾಡುವ ಸಾಧನ ಇದಾಗಿದೆ.

ಈ ಮೂಲಕ ಸಾರ್ವಜನಿಕ ಸಾರಿಗೆಯಲ್ಲಿ ಎಲ್ಲರನ್ನೂ ಒಳಗೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC) ತಂತ್ರಜ್ಞಾನ ಕಂಪನಿ ಕಾಂಟಿನೆಂಟಲ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ತಂತ್ರಜ್ಞಾನ ಪರಿಹಾರವನ್ನು ದೃಷ್ಟಿ ಇಲ್ಲದವರಿಗೆ ನೀಡಿ ನೆರವಾಗುತ್ತಿದೆ.
ಈ ಸೇವೆನಯನ್ನು ಕಾಂಟಿನೆಂಟಲ್ ಕಂಪನಿಯು ತನ್ನ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅಡಿಯಲ್ಲಿ ಮಾಡುತ್ತಿದೆ. 2023 ರಲ್ಲಿ 25 ಬಸ್‌ಗಳಲ್ಲಿ ಯಶಸ್ವಿ ಪ್ರಾಯೋಗಿಕ ಪರಿಚಯ ಆಗಿದೆ. ಇದಿಗ ಆ ಯೋಜನೆಯನ್ನು ಸುಮಾರು 100ಕ್ಕೂ ಹೆಚ್ಚು ಬಸ್‌ಗಳಿಗೆ ವಿಸ್ತರಿಸಲಾಗಿದೆ. ಈ ವಿಸ್ತರಿಸಿದ ಸೌಲಭ್ಯಕ್ಕೆ ಇತ್ತೀಚೆಗೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದ್ದಾರೆ.
ಈ ಸಾಧನಗಳಿಗೆ ದೃಷ್ಟಿಹೀನರಿಗೆ ಏನೆಲ್ಲ ಪ್ರಯೋಜನ?
ದೆಹಲಿಯ ಐಐಟಿಯಲ್ಲಿ ಅಭಿವೃದ್ಧಿಪಡಿಸಲಾದ ಸಾಧನ ಇದಾಗಿದೆ. ಇದರ ಬಳಕೆ ಬಿಎಂಟಿಸಿಯಲ್ಲಿ ಮಾಡಲಾಗುತ್ತಿದೆ. ಇದರಿಂದ ಈ ವಿಶೇಷಚೇತನರಿಗೆ ವ್ಯಕ್ತಿಗಳು ಬಸ್ ನಲ್ಲಿ ಈಸಾಧನ ಬಳಸುವುದರಿಂದ ಬಸ್ ಮಾರ್ಗ, ಸಂಖ್ಯೆ ಗುರುತಿಸುತ್ತಾರೆ. ಬಸ್-ಮೌಂಟೆಡ್ ಸ್ಪೀಕರ್‌ನಿಂದ ಆಡಿಯೊ ಸೂಚನೆ ಬಳಸಿಕೊಂಡು ಪ್ರವೇಶ ದ್ವಾರದ ಯಾವ ಕಡೆ ಇದೆ. ಹತ್ತುವುದು, ಇಳಿಯುವುದು ಸುಲಭವಾಗುತ್ತದೆ. ಇತರರ ಮೇಲಿನ ಅವಲಂಬನೆ ಕಡಿಮೆ ಮಾಡಲಿದೆ. ದೆಹಲಿ ಲಾಭರಹಿತ ಸಂಸ್ಥೆ ರೈಸ್ಡ್ ಲೈನ್ಸ್ ಫೌಂಡೇಶನ್ ಸಾಧನ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದೆ.

500 ಬಿಎಂಟಿಸಿ ಬಸ್‌ಗಳಲ್ಲಿ ಈ ಸಾಧನ ಬಳಕೆ
ಸದ್ಯ ಈ ಸಾಧವನ್ನು 100 ಕ್ಕೂ ಹೆಚ್ಚು ಬಸ್‌ಗಳು ಪಡೆದುಕೊಂಡಿವೆ. ಮುಂದಿನ ತಿಂಗಳ ಆಗಸ್ಟ್ 2025ಕ್ಕೆ ಒಟ್ಟು 500 ಬಿಎಂಟಿಸಿ ಬಸ್‌ಗಳು ಈ ಸಾಧನ ಪಡೆಯಲಿವೆ. ಜುಲೈ ಅಂತ್ಯದ ಹೊತ್ತಿಗೆ 400 ಬಸ್‌ಗಳಲ್ಲಿ 'ಆನ್‌ಬೋರ್ಡ್'ಸಾಧನೆ ಲಭ್ಯವಾಗಲಿದೆ. ಸದ್ಯ ಈ ಸಾಧನವನ್ನು ಪ್ರಸ್ತುತ 401K ಮತ್ತು 401R ಮಾರ್ಗಗಳ ಬಸ್‌ಗಳಲ್ಲಿ ಅಳವಡಿಕೆ ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೆ ವಿಚಾರವಾಗಿ ಮಾತನಾಡಿದ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್, ಬಸ್‌ಗಳಲ್ಲಿ ಈ ಸಾಧನ ಅಳವಡಿಕೆಯಿಂದ ಸಾರಿಗೆ ಸೇವೆಯಲ್ಲಿ ಬೆಂಗಳೂರಿನಲ್ಲಿ ಎಲ್ಲ ವಿಧದ ಪ್ರಯಾಣಿಕರನ್ನು ಒಳಗೊಂಡಂತಾಗುತ್ತದೆ. ಇದರ ಅಳವಡಿಕೆಗೆ ನಾವು ಸಿದ್ಧವಾಗಿದ್ದೇವೆ ಎಂದು ಅವರು ಹೇಳಿದರು.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications