New Railway Projects: ಕರ್ನಾಟಕದಲ್ಲಿ 5 ಪ್ರಮುಖ ರೈಲ್ವೆ ಯೋಜನೆ: ಈ ಭಾಗಗಳಲ್ಲಿ 16,554 ಎಕರೆ ಭೂಸ್ವಾಧೀನ
ಬೆಂಗಳೂರು: ಕರ್ನಾಟಕದಲ್ಲಿ ಐದು ಪ್ರಮುಖ ರೈಲ್ವೆ ಯೋಜನೆಗಳನ್ನು ಜಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಹೊಸ ರೈಲ್ವೆ ಮಾರ್ಗಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ಭೂಸ್ವಾಧೀನಗೆ ಸಂಬಂಧಿಸಿದಂತೆ ಸೂಚನೆ ನೀಡಲಾಗಿದೆ. ಐದು ಹೊಸ ರೈಲು ಮಾರ್ಗಗಳು ಯಾವುವು ಹಾಗೂ ಎಲ್ಲೆಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ ಎನ್ನುವುದು ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಸಭೆ ನಡೆದಿದ್ದು ರೈಲ್ವೆ ಯೋಜನೆಗಳು ಹಾಗೂ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಹತ್ವದ ಚರ್ಚೆಗಳು ನಡೆದಿವೆ.

ಕರ್ನಾಟಕದಲ್ಲಿ ಐದು ಪ್ರಮುಖ ರೈಲು ಯೋಜನೆಗಳು
1. ಬೇಲೂರು- ಹಾಸನ (27 ಕಿ. ಮೀ) ಮಾರ್ಗ: ಹಾಸನ- ಆಲೂರು- ಬೇಲೂರು (ಹಾಸನದಿಂದ ಚಿಕ್ಕಮಗಳೂರಿಗೆ ನೇರ ಮಾರ್ಗ ಇರಲಿದೆ)
2. ಧಾರವಾಡ - ಬೆಳಗಾವಿ (79 ಕಿ.ಮೀ) ಮಾರ್ಗ: ಮಮ್ಮಿಗಟ್ಟಿ- ತೇಗೂರು- ಕಿತ್ತೂರು- ಎಂ.ಕೆ.ಹುಬ್ಬಳ್ಳಿ
3. ಶಿವಮೊಗ್ಗ- ರಾಣಿಬೆನ್ನೂರು (103 ಕಿ. ಮೀ) ಮಾರ್ಗ: ಶಿಕಾರಿಪುರ - ಮಾಸೂರು - ರಟ್ಟಿಹಳ್ಳಿ - ಹಲಗೇರಿ.
4. ಕುಡಚಿ- ಬಾಗಲಕೋಟೆ (142 ಕಿ.ಮೀ) ಮಾರ್ಗ: ಯಾದವಾಡ - ಮುಧೋಳ - ಜಮಖಂಡಿ - ರಬಕವಿ - ತೇರದಾಳ.
5. ತುಮಕೂರು-ದಾವಣಗೆರೆ (202 ಕಿ.ಮೀ) ಮಾರ್ಗ: ಸಿರಾ- ಹಿರಿಯೂರು- ಐಮಂಗಲ- ಭರಮಸಾಗರ- ತೋಳಹುಣಸೆ.
ಕರ್ನಾಟದಲ್ಲಿ ರೈಲ್ವೆ ಯೋಜನೆಗಳಿಗೆ ಒಟ್ಟು 16,554 ಎಕರೆ ಭೂಸ್ವಾಧೀನ
ಇನ್ನು ಕರ್ನಾಟಕದಲ್ಲಿ ಐದು ಪ್ರಮುಖ ರೈಲ್ವೆ ಯೋಜನೆಗಳು ಸೇರಿದಂತೆ ವಿವಿಧ ರೈಲ್ವೆ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಒಟ್ಟು 16,554 ಎಕರೆ ಭೂಮಿ ಅವಶ್ಯಕತೆ ಇದೆ. ಇದರ ಪೈಕಿ ಶೇಕಡಾ 84% ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ನೂ ಅಂದಾಜು 2,685 ಎಕರೆಗಳಷ್ಟು ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಪ್ರಗತಿಯಲ್ಲಿರುವ ವಿವಿಧ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ನಿರ್ಮಾಣ ಕಾಮಗಾರಿಗಳಿಗೆ 2,581.67 ಕೋಟಿ ರೂಪಾಯಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ 2950.22 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಸೂಚನೆ
ಕರ್ನಾಟಕದ ಐದು ಪ್ರಮುಖ ರೈಲ್ವೆ ಯೋಜನೆಗಳು ಸೇರಿದಂತೆ ರಾಜ್ಯದಲ್ಲಿ ಜಾರಿ ಮಾಡುವುದಕ್ಕೆ ಉದ್ದೇಶಿಸಲಾಗಿರುವ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗಳನ್ನು ಚುರುಕುಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರೈಲ್ವೆ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನ ಮಾಡುವುದಕ್ಕೆ ಭೂಸ್ವಾಧೀನ ಪ್ರಕ್ರಿಯೆಯು ಪ್ರಮುಖವಾಗಿದೆ. ಬಾಕಿಯಿರುವ ಭೂಸ್ವಾಧೀನ ಪ್ರಕ್ರಿಯೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದ್ದಾರೆ.
5 ರೈಲ್ವೆ ಯೋಜನೆಗಳ ಪೂರ್ಣಕ್ಕೆ ಕಾಲಮಿತಿ ನಿಗದಿ
ಇನ್ನು ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಐದು ಪ್ರಮುಖ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ. ಈ ಐದು ಯೋಜನೆಗಳಲ್ಲಿ ಬಹುತೇಕ ಯೋಜನೆಗಳನ್ನು 2027ರ ಜನವರಿ 31ರೊಳಗೆ ಮುಗಿಸಬೇಕು ಎನ್ನುವ ಗುರಿಯನ್ನು ಹಾಕಿಕೊಂಡಿದೆ. ಕೆಲವು ಯೋಜನೆಗಳಲ್ಲಿ ಭಾಗಶಃ ಕಾಮಗಾರಿ ನಡೆದಿದ್ದು, ಕೆಲವು ಕಡೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಲವು ಭಾಗದಲ್ಲಿ ಭೂಸ್ವಾಧೀನ ಬಾಕಿ ಉಳಿದಿದ್ದು ತೊಡಕಾಗಿದೆ. ತಾಂತ್ರಿಕ ಸಮಸ್ಯೆಗಳಿಂದಲೂ ತುಸು ಹಿನ್ನಡೆ ಆಗಿದೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳಿಂದ ಮಾಹಿತಿ ನೀಡಿದ್ದಾರೆ.












Click it and Unblock the Notifications