Bengaluru Rent Houses: ಬೆಂಗಳೂರಿನಲ್ಲಿ ಕಡಿಮೆ ಬಾಡಿಗೆ ಮನೆ ಸಿಗುವ 5 ಪ್ರಮುಖ ಪ್ರದೇಶಗಳು
Bengaluru Rent Houses: ಬೆಂಗಳೂರಿನಲ್ಲಿ ದಿನದಿಂದ ಪ್ರಾಪರ್ಟಿ ಹಾಗೂ ಆಸ್ತಿಗಳ ಬೆಲೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಬೆಂಗಳೂರಿನ ಹೃದಯಭಾಗ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದೆ. ಆದರೆ ಇಂದಿಗೂ ಮಧ್ಯಮ ವರ್ಗದವರು ಹಾಗೂ ಬಡವರಿಗೆ ಬೆಂಗಳೂರು ತೀರ ದುಬಾರಿ ಎನಿಸದಂತೆ ಹಾಗೂ ಕೈಗೆಟುಕುವ ಬೆಲೆಯಲ್ಲೂ ಬೆಂಗಳೂರಿನ ವಿವಿಧ ಭಾಗದಲ್ಲಿ ಬಾಡಿಗೆ ಮನೆಗಳು ಸಿಗುತ್ತಿವೆ. ಬೆಂಗಳೂರಿನಲ್ಲಿ ಕಡಿಮೆ ಬಾಡಿಗೆ ಬೆಲೆಗೆ ಮನೆಗಳು ಸಿಗುವ 5 ಪ್ರಮುಖ ಪ್ರದೇಶಗಳ ವಿವರ ಇಲ್ಲಿದೆ.
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಒಂದು ಬಿಎಚ್‌ಕೆ ಮನೆಯು 8,000 ಸಾವಿರ ರೂಪಾಯಿಯಿಂದ 10,000 ಸಾವಿರ ರೂಪಾಯಿಯ ವರೆಗೆ ಇದೆ. ಇನ್ನು 2ಬಿಎಚ್‌ಕೆ ಮನೆಗಳು 15,000 ಸಾವಿರ ರೂಪಾಯಿ ಹಾಗೂ ಅದರ ಮೇಲೆ ಇದೆ. ಬೆಂಗಳೂರಿನ ಹೃದಯಭಾಗವನ್ನು ಹೊರತುಪಡಿಸಿ ಹಾಗೂ ಬೆಂಗಳೂರಿನ ಹೊರ ವಲಯದ ಪ್ರದೇಶಗಳಲ್ಲಿ ಬಾಡಿಗೆ ಮನೆಗಳ ಬಾಡಿಗೆ ದರವು ತುಸು ಕಡಿಮೆ ಇದೆ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕಡಿಮೆ ಬೆಲೆಗೆ ಮನೆಗಳು ಸಿಗುತ್ತವೆ ಎನ್ನುವ ವಿವರ ನೋಡೋಣ.

ಬೆಂಗಳೂರಿನ ಹೊರ ವಲಯಗಳಲ್ಲಿ ಮನೆ ಬಾಡಿಗೆ ಬೆಲೆ ಸಾಧಾರಣ ಮೊತ್ತದಲ್ಲಿ ಇದೆ. ಬೆಂಗಳೂರಿನಲ್ಲಿ ಹೊರ ವಲಯ ಹಾಗೂ ಬೆಂಗಳೂರಿನ ಸಮೀಪದ ಪ್ರದೇಶಗಳಲ್ಲಿ ಮನೆಗಳು ಕಡಿಮೆ ಬಾಡಿಗೆ ಬೆಲೆಗೆ ಸಿಗುತ್ತವೆ. ಕೆಂಗೇರಿ, ಯಲಹಂಕ, ಹೊಸಕೋಟೆ, ಕನಕಪುರ ರಸ್ತೆ ಹಾಗೂ ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತವೆ. ಈ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮನೆಗಳು ಸಿಗುತ್ತವೆ. ಬೆಂಗಳೂರಿನ ಒಳ ಅಥವಾ ಬೆಂಗಳೂರು ಕೇಂದ್ರ ಪ್ರದೇಶದಲ್ಲಿ ಮನೆಗಳ ಬಾಡಿಗೆ ಬೆಲೆಯು ದುಬಾರಿಯಾಗಿದೆ.
ಬೆಂಗಳೂರಿನಲ್ಲಿ 5 ಕೈಗೆಟುಕುವ ಬಾಡಿಗೆ ಮನೆಗಳು ಸಿಗುವ ಪ್ರದೇಶಗಳ ವಿವರ
1. ಕೆಂಗೇರಿ (ನೈಋತ್ಯ): ಬೆಂಗಳೂರು - ಮೈಸೂರು ರಸ್ತೆಯ ಭಾಗದಲ್ಲಿ ಮನೆಗಳ ಬಾಡಿಗೆ ಬೆಲೆ ಬೆಂಗಳೂರಿನ ಉಳಿದ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಇದೆ. ಈ ಪ್ರದೇಶವು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳ ಸಾಲಿನಲ್ಲಿ ಇದೆ. ಮೆಟ್ರೋದಿಂದ ಉತ್ತಮ ಸಂಪರ್ಕ ಹಾಗೂ ಹೆಚ್ಚು ಸದ್ದು ಗದ್ದಲಗಳು ಇಲ್ಲದ ಪ್ರದೇಶ ಇದಾಗಿದೆ. ಈ ಭಾಗದಲ್ಲಿ 1 ಬಿಎಚ್‌ಕೆ ಮನೆಗಳು 4,000 ಸಾವಿರ ರೂಪಾಯಿಯಿಂದ 7,000 ಸಾವಿರ ರೂಪಾಯಿಯ ವರೆಗೆ ಇದೆ.
2. ಯಲಹಂಕ (ಉತ್ತರ): ಇನ್ನು ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ ಪ್ರದೇಶಗಳಲ್ಲಿ ಯಲಹಂಕ ಉತ್ತರ ಎರಡನೇ ಸ್ಥಾನದಲ್ಲಿದೆ. ಈ ಉಪನಗರ ಪ್ರದೇಶದಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತಿವೆ. ಈ ಪ್ರದೇಶಗಳಲ್ಲಿ 1 ಬಿಎಚ್‌ಕೆ ಮನೆಗಳು ಸಾಮಾನ್ಯವಾಗಿ 7,500 ಸಾವಿರದಿಂದ 10,000 ಸಾವಿರ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಸಿಗುತ್ತಿವೆ.
3. ಹೊಸಕೋಟೆ (ಪೂರ್ವ): ಬೆಂಗಳೂರಿನ ಪೂರ್ವ ಪ್ರದೇಶವಾಗಿರುವ ಹೊಸಕೋಟೆಯಲ್ಲೂ ಅತ್ಯಂತ ಅಗ್ಗದ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತವೆ. ಬಾಡಿಗೆ ಹಾಗೂ ಅಡ್ವಾನ್ಸ್ ಮೊತ್ತವು ಈ ಭಾಗದಲ್ಲಿ ಕಡಿಮೆ ಇದೆ. ಈ ಭಾಗದಲ್ಲಿ ಒಂದು ಬಿಎಚ್‌ಕೆ ಬಾಡಿಗೆ ಮನೆಗಳು 5,500 ಸಾವಿರ ರೂಪಾಯಿಯಿಂದ 8,000 ಸಾವಿರ ರೂಪಾಯಿಯ ವರೆಗೂ ಇದೆ.
4. ಕನಕಪುರ ರಸ್ತೆ (ದಕ್ಷಿಣ): ಬೆಂಗಳೂರು ದಕ್ಷಿಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತವೆ. ಒಂದು ಬಿಎಚ್‌ಕೆ ಮನೆಗಳು ಸಾಮಾನ್ಯವಾಗಿ 6,000 ಸಾವಿರ ರೂಪಾಯಿಯಿಂದ 8,500 ಸಾವಿರ ರೂಪಾಯಿಯ ವರೆಗೂ ಇದೆ.
5. ಎಲೆಕ್ಟ್ರಾನಿಕ್ ಸಿಟಿ (ಆಗ್ನೇಯ): ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪ್ರದೇಶವು ಐಟಿ ಕೇಂದ್ರವಾಗಿದ್ದರೂ, ಅದರ ಹೊರವಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ಬೊಮ್ಮಸಂದ್ರ ಹಾಗೂ ಚಂದಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಒಂದು ಬಿಎಚ್‌ಕೆ ಬಾಡಿಗೆ ಮನೆಗಳ ಬೆಲೆಯು 10,000 ಸಾವಿರ ರೂಪಾಯಿಯಿಂದ 12,000 ಸಾವಿರ ರೂಪಾಯಿಯ ವರೆಗೂ ಇದೆ.
ಇನ್ನು ಬೆಂಗಳೂರಿನ ಒಳ ಪ್ರದೇಶಗಳನ್ನು ಹೊರತುಪಡಿಸಿ ಇನ್ನುಳಿದ ಪ್ರದೇಶಗಳಲ್ಲೂ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಲಭ್ಯವಿವೆ.












Click it and Unblock the Notifications