ದರ್ಶನ್ ವಿರುದ್ಧದ ಪ್ರಮುಖ 5 ಸಾಕ್ಷಿಗಳು: ಬಚಾವ್ ಆಗುವುದು ಕಷ್ಟ!
ಬೆಂಗಳೂರಿನ ಪಟ್ಟಣಗೇರಿಯಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ನಡೆದಿದ್ದು, ಈ ಸಂಬಂಧ ನಟ ದರ್ಶನ್, ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ 18 ಜನರನ್ನು ಬಂಧಿಸಲಾಗಿದೆ. ಈ ಪ್ರಕರಣದ ವಿಚಾರಣೆ ತೀವ್ರವಾಗಿದೆ. ಪೊಲೀಸರು ಸತ್ಯದ ಶೋಧ ನಡೆಸಿದ್ದಾರೆ. ತನಿಖೆಯ ವೇಳೆ ಪೊಲೀಸರ ಕೈಗೆ ಹಲವು ಸಾಕ್ಷಿಗಳು ಸಿಕ್ಕಿ ಬಿದ್ದಿವೆ.
ಪೊಲೀಸ್ ತನಿಖೆಯ ವೇಳೆ ಸಿಕ್ಕಿ ಬಿದ್ದ ಸಾಕ್ಷ್ಯಗಳು ದರ್ಶನ್ ವಿರುದ್ಧ ಸಮರವನ್ನು ಸಾರಿವೆ. ಇದು ಅವರ ಮೇಲೆ ಪ್ರಕರಣ ಬಲವಾಗಲು ಸಹಾಯಕವಾಗುತ್ತಿವೆ ಎನ್ನಲಾಗುತ್ತಿದೆ. ಹಾಗಿದ್ದರೆ ಪೊಲೀಸರಿಗೆ ಸಿಕ್ಕ ಆ ಸಾಕ್ಷಿಗಳು ಯಾವವು ಎಂಬುದರ ಬಗ್ಗೆ ವರದಿ ಇಲ್ಲಿದೆ.

ಮೊಬೈಲ್ ಚಾಟ್, ಕಾಲ್ ಡಿಟೇಲ್ಸ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್, ಅವರೊಂದಿಗೆ ಉಳಿದ ಆರೋಪಿಗಳು ಮಾತನಾಡಿರುವ ಕಾಲ್ ಡಿಟೇಲ್ಸ್ ಪೊಲೀಸ್‌ರಿಗೆ ಸಿಕ್ಕಿದೆ. ಇದರಲ್ಲಿ ಕೆಲವು ಸಾಮಾನ್ಯ ಕರೆಗಳಾಗಿದ್ದು, ಇನ್ನು ಹಲವು ವಾಟ್ಸ್‌ಅಪ್ ಕರೆಗಳಾಗಿವೆ. ಈ ವೇಳೆ ನಡೆದ ಮಾತುಕತೆ ಪೊಲೀಸರ ಕೈಗೆ ಸಿಕ್ಕಿದೆ. ಇನ್ನು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ನ ಕರೆ ವಿವರಗಳನ್ನು ಆರೋಪಿಗಳೊಂದಿಗಿನ ಸಂಭಾಷಣೆಯ ಪುರಾವೆಯಾಗಿ ಪೊಲೀಸರು ಪಡೆದುಕೊಂಡಿದ್ದಾರೆ. ಇದು ಅಪರಾಧ ಮಾಡಿದ ನಂತರ ಮೃತ ದೇಹವನ್ನು ವಿಲೇವಾರಿ ಮಾಡಲು ಹಂತಕರು ಪೊಲೀಸರನ್ನು ಹೇಗೆ ಸಂಪರ್ಕಿಸಿದರು ಎಂಬುದನ್ನು ತಿಳಿಸುತ್ತದೆ.
ಸಿಸಿಟಿವಿ ದೃಶ್ಯ
ದರ್ಶನ್ ಹಾಗೂ ಗ್ಯಾಂಗ್ ರೇಣುಕಾಸ್ವಾಮಿ ಅವರನ್ನು ಹಲ್ಲೆ ಮಾಡಿದ ಸ್ಥಳದಲ್ಲಿಯ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ. ಇದರಲ್ಲಿ ದರ್ಶನ್ ಕಾರ್ ಬಂದಿದ್ದು ಹಾಗೂ ಹೋಗಿದ್ದನ್ನು ಕಾಣಬಹುದು. ಇನ್ನು ಘಟನೆಗೆ ಮುನ್ನ ನಡೆದ ಸಂಗತಿಗಳು, ಚಿತ್ರದುರ್ಗದಿಂದ ಬೆಂಗಳೂರಿನ ವರೆಗೆ ರೇಣುಕಾಸ್ವಾಮಿ ಪ್ರಯಾಣ, ಘಟನೆಯ ಬಳಿಕ ದರ್ಶನ್ ಮೈಸೂರಿಗೆ ಹೋಗಿದ್ದು, ಇಲ್ಲಿಯೂ ಖಾಕಿ ಪಡೆಗೆ ಅವಶ್ಯಕ ಸಾಕ್ಷ್ಯ ಸಿಗುವ ಸಾಧ್ಯತೆ ಇದೆ.

ಸ್ಥಳದಿಂದ ವಶಪಡಿಸಿಕೊಂಡ ವಸ್ತು
ಘಟನೆ ನಡೆದ ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ವೇಳೆ ಕೃತ್ಯಕ್ಕೆ ಬಳಸಾಗಿದ್ದ ದೊಣ್ಣೆ, ರಾಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ರೇಣುಕಾಸ್ವಾಮಿ ಅವರನ್ನು ಕಟ್ಟಲಾಗಿದ್ದ ಹಗ್ಗ ಸಹ ಸಿಕ್ಕಿದೆ ಎನ್ನಲಾಗಿದೆ.
ಬಟ್ಟೆ ವಶಕ್ಕೆ
ರೇಣುಕಾಸ್ವಾಮಿ ಕೊಲೆ ಆದಾಗ ಹಾಕಿಕೊಂಡಿದ್ದ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ.
ಹಣ ವಶ
ಇನ್ನು ದರ್ಶನ್ ನೀಡಿದ್ದಾರೆ ಎನ್ನಲಾದ 30 ಲಕ್ಷ ರೂಪಾಯಿ ಹಣದ ಜಾಡು ಕೂಡ ಸಿಕ್ಕಿದೆ.ಅಲ್ಲದೆ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಮೇಲಿನ ಎಲ್ಲ ಸಾಕ್ಷಿಗಳು ಸಹ ದರ್ಶನ್, ಆರೋಪದಲ್ಲಿ ಭಾಗಿಯಾಗಿದ್ದಾಗಿ ಸಾರಿ ಹೇಳುತ್ತಿವೆ. ದರ್ಶನ್ ಅವರು ಪೊಲೀಸರ ಎದುರು ತಾವು ಈ ಕೊಲೆಯನ್ನು ಮಾಡುವ ಉದ್ದೇಶ ಹೊಂದಿರಲಿಲ್ಲ, ಅವನಿಗೆ ಬುದ್ಧಿ ಮಾತು ಹೇಳಿ, ಊಟ ಮಾಡಿ ಹೋಗು ಎಂದು ಹೇಳಿದ್ದಾಗಿ ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications