47,00,00,000 ಬ್ಯಾಂಕ್‌ನ ಹಣ ಸೈಬರ್ ವಂಚನೆ: ಬೆಂಗಳೂರು ಪೊಲೀಸರ ರೋಚಕ ಕಾರ್ಯಾಚರಣೆ!
Bengaluru Cyber Fraud: ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲೇ ನಡೆದಿರುವ ಅತೀ ದೊಡ್ಡ ಹಾಗೂ ಭಯಾನಕವಾದ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇದು ಒಂದು ಕೋಟಿ ಎರಡು ಕೋಟಿ ರೂಪಾಯಿ ಮಾತಲ್ಲ. ಬರೋಬ್ಬರಿ 47 ಕೋಟಿ ರೂಪಾಯಿ ವಂಚನೆಯ ಪ್ರಕರಣ. ಈ ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಕೊಂಡಿರುವ ಬೆಂಗಳೂರು ಪೊಲೀಸರು ರೋಚಕ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಇದರ ಸಂಪೂರ್ಣ ವಿವರ ನೋಡೋಣ.
ವಿಜ್ಡಯ್ ಫೈನಾನ್ ಪ್ರೈವೇಟ್ ಲಿಮಿಟೆಡ್‌ನ ಬ್ಯಾಂಕ್ ಖಾತೆಗಳನ್ನು API breach ಮೂಲಕ ಹ್ಯಾಕ್ ಮಾಡಿ ಬರೋಬ್ಬರಿ 47 ಕೋಟಿ ಹಣವನ್ನು ವಂಚನೆ ಮೂಲಕ ವಿದೇಶಿ IP ಅಡ್ರೆಸ್‌ಗಳನ್ನು ಬಳಸಿ ದುರುಪಯೋಗ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ.

ಕಂಪನಿಯ ಆಂತರಿಕ ತನಿಖೆಯಿಂದ ತಿಳಿದುಬಂದಂತೆ ಈ ವ್ಯವಹಾರಗಳು ಕಂಪನಿಯ ಅಧಿಕೃತ ಸಿಸ್ಟಂ ಅಥವಾ whitelisted IP ಅಡ್ರೆಸ್‌ಗಳ ಮೂಲಕ ನಡೆದದ್ದಲ್ಲ; ಬದಲಾಗಿ ಇವು ಭಾರತದ ಹೊರಗಿನ IP ಅಡ್ರೆಸ್‌ಗಳ ಮೂಲಕ ನಡೆದಿದ್ದು, ಸುಮಾರು - 47 ಕೋಟಿ (47,00,00,000) ಹಣವನ್ನು ಕಂಪನಿಯ ಖಾತೆಗಳಿಂದ ಅನಧಿಕೃತವಾಗಿ ಇತರ ಖಾತೆಗಳಿಗೆ ವರ್ಗಾಯಿಸಿರುವುದು ತನಿಖೆಯಿಂದ ಪತ್ತೆಯಾಯಿತು ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.
ತನಿಖೆ ಮುಂದುವರಿಸಿದ ಪೊಲೀಸರು, ವಿಜ್ಡಯ್ ಫೈನಾನ್ ಪ್ರೈವೇಟ್ ಲಿಮಿಟೆಡ್ ಬ್ಯಾಂಕ್ ಖಾತೆಗಳಿಂದ 1782 ವ್ಯವಹಾರಗಳ ಮೂಲಕ 656 ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ ಎಂಬುದು ತಿಳಿದು ಬಂದಿದೆ. ಆದರಲ್ಲಿ 27,39,000 ಹಣ ನೇರವಾಗಿ ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲ್ಪಟ್ಟಿದ್ದು, ಆತನನ್ನು ದಿನಾಂಕ: 25,09,2025 ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.
ಮುಂದುವರಿದು ತನಿಖೆಯಲ್ಲಿ ಕಂಪನಿಯ ಖಾತೆಯಿಂದ 5.5 ಕೋಟಿ ಹಣವನ್ನು Echelon Science Tech Pvt. Ltd., ಹೈದರಾಬಾದ್ ಖಾತೆಗೆ ವರ್ಗಾಯಿಸಿ, ನಂತರ Flipo Pay (ಮತ್ತೊಂದು ಬ್ಯಾಂಕ್ ಖಾತೆಗೆ) ವರ್ಗಾಯಿಸಿರುವುದು ಪತ್ತೆಯಾಯಿತು. Echelon Science Tech Pvt. Ltd. ಕಂಪನಿಯು WEBYNE Data Center ಗೆ ಸೇರಿದ IP ಅಡ್ರೆಸ್‌ಗಳ ಮೂಲಕ ವ್ಯವಹಾರಗಳನ್ನು ನಡೆಸಿದ್ದು, IP ಅಡ್ರೆಸ್ ಅನ್ನು ಮತ್ತೋರ್ವ ವ್ಯಕ್ತಿಯು ಖರೀದಿಸಿರುವುದು ಖಚಿತವಾಗಿದೆ.
ದಿನಾಂಕ:09/10/2025 ರಂದು ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದುಬೈನಲ್ಲಿ ವಾಸಿಸುತ್ತಿರುವ ಇಬ್ಬರು ವ್ಯಕ್ತಿಗಳು ಈತನ ಸಹಯೋಗದಲ್ಲಿ 5 ಸರ್ವ‌್ರಗಳನ್ನು ಬಾಡಿಗೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ತನಿಖೆಯಲ್ಲಿ ದುಬೈ ಮೂಲದ ಇಬ್ಬರು ವ್ಯಕ್ತಿಗಳು ಹಾಂಗ್ ಕಾಂಗ್ ಆಧಾರಿತ ಪ್ಯಾಕರ್‌ರನ್ನು ನೇಮಿಸಿ, ಬ್ಯಾಂಕ್‌ನ API ಗಳನ್ನು ಬದಲಾಯಿಸಿ ಬ್ಯಾಂಕ್‌ನ ಭದ್ರತಾ ಸಾಫ್ಟ್‌ವೇರ್‌ಗಳನ್ನು ತಪ್ಪಿಸಲು ಪ್ರಯತ್ನಿಸಿದ್ದು.
ಹಾಂಗ್‌ಕಾಂಗ್ ಮತ್ತು ಲಿತುವೇನಿಯಾ ಆಧಾರಿತ IP ಅಡ್ರೆಸ್‌ಗಳ ಮೂಲಕ ವಿಜ್ಡಮ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಖಾತೆಗಳಿಂದ ಅನಧಿಕೃತ ಹಣ ವರ್ಗಾವಣೆಗಳನ್ನು ಮಾಡಿದ್ದಾರೆ ಎಂಬುದು ದೃಢಪಟ್ಟಿದೆ, ಈ IP ಅಡ್ರೆಸ್‌ಗಳು 5 ಸರ್ವ‌್ರಗಳ ಭಾಗವಾಗಿದ್ದವು ಎಂಬುದೂ ಬಹಿರಂಗವಾಗಿದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ: ವಿಜ್ಡಮ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್‌ನ ಸೀನಿಯರ್ ಮ್ಯಾನೇಜರ್ ದಿನಾಂಕ:07/08/2025 ರಂದು. ಬೆಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದರು. ದೂರಿನಲ್ಲಿ ಕಂಪನಿಯಲ್ಲಿ ದಿನಾಂಕ:06,08/2025 ಮತ್ತು ದಿನಾಂಕ:07/08/2025 ರ ಮಧ್ಯರಾತ್ರಿ ಅನಧಿಕೃತ ಹಾಗೂ ಅನುಮಾನಾಸ್ಪದ ಹಣ ವರ್ಗಾವಣೆಗಳು ಹಲವು ಖಾತೆಗಳಲ್ಲಿ ನಡೆದಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ, ತನಿಖೆ ಪ್ರಾರಂಭಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications