ಬೆಂಗಳೂರಲ್ಲಿ 406 ಕೋಟಿ ರೂ. ಆಸ್ತಿ ತೆರಿಗೆ ಬಾಕಿ: ಬಿಬಿಎಂಪಿಯಿಂದ ಆಸ್ತಿದಾರರಿಗೆ ಕಾದಿದೆ ಶಾಕ್‌!

Bengaluru Property tax arrears: ಬೆಂಗಳೂರಲ್ಲಿ ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಖಡಕ್‌ ಎಚ್ಚರಿಕೆಯನ್ನು ನೀಡಿದೆ. ಬಿಬಿಎಂಪಿಯು ಈಗಾಗಲೇ ಐತಿಹಾಸಿಕ ಒಂದು ಬಾರಿ ಪರಿಹಾರ(OTS) ಯೋಜನೆಯಡಿ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಿದೆ. ಆದರೆ, ಇದನ್ನು ಬೆಂಗಳೂರಿನ ಆಸ್ತಿ ಮಾಲೀಕರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಬಿಬಿಎಂಪಿ ಹೇಳಿದೆ. ಅಲ್ಲದೇ..

ಆಸ್ತಿ ತೆರಿಗೆ ಬಾಕಿ ಇರುವವರು ಇದರ ಲಾಭವನ್ನು ಸರಿಯಾಗಿ ಪಡೆಯುತ್ತಿಲ್ಲ. 250 ಕೋಟಿ ರೂಪಾಯಿಗಿಂತಲೂ ಹೆಚ್ಚು ಬಾಕಿ ಇರುವ 1,6000ಕ್ಕೂ ಹೆಚ್ಚು ಪ್ರಕರಣಗಳು ಹಾಗೂ 400 ಕೋಟಿ ರೂಪಾಯಿಗಿಂತ ಹೆಚ್ಚು ಬಾಕಿ ಇರುವ ಸುಮಾರು 2.4 ಲಕ್ಷ ಆಸ್ತಿದಾರರು ಪಾವತಿಸುವುದು ಬಾಕಿ ಇದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ.

406 crore in Bengaluru Property tax arrears Shock awaits property owners from BBMP

Bengaluru property tax payers: ಈ ನಡುವೆ ಬೆಂಗಳೂರಿಲ್ಲಿ ಆಸ್ತಿ ಮಾಲೀಕರು ಇನ್ನೂ 406 ಕೋಟಿ ರೂಪಾಯಿ ಬಾಕಿ ಉಳಿದಿದೆ. ರಾಜ್ಯದಲ್ಲಿ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಬಡ್ಡಿ ಹಾಗೂ ಅದಕ್ಕೆ ವಿಧಿಸಿದ್ದ ದಂಡವನ್ನು ಮನ್ನಾ ಮಾಡುವ ಉದ್ದೇಶದಿಂದ ಸರ್ಕಾರವು ಒಟಿಎಸ್‌ ಎನ್ನುವ ಮಹತ್ವದ ಯೋಜನೆಯನ್ನು ಪರಿಚಯಿಸಿದೆ. ಅಲ್ಲದೇ ಈ ಯೋಜನೆಯು ಉಪಯೋಗಿಸಿಕೊಳ್ಳಿ ಎಂದು ಬಿಬಿಎಂಪಿಯು ಬೆಂಗಳೂರು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ಇನ್ನೊಂದು ತಿಂಗಳು ಮಾತ್ರ ಬಾಕಿ: ಇನ್ನು ಈ ಯೋಜನೆಗೆ ಸಂಬಂಧಿಸಿದಂತೆ ಇನ್ನೊಂದು ತಿಂಗಳು ಮಾತ್ರ ಆಸ್ತಿದಾರರಿಗೆ ಅವಕಾಶ ಇದೆ. ಬೆಂಗಳೂರಲ್ಲಿ ಬಾಕಿ ಆಸ್ತಿ ತೆರಿಗೆಯನ್ನು ನವೆಂಬರ್‌ 30ರ ಒಳಗಾಗಿ ಪಾವತಿ ಮಾಡಬೇಕು. ಒಂದೊಮ್ಮೆ ಪಾವತಿ ಮಾಡದೆ ಇದ್ದರೆ, ಡಿಸೆಂಬರ್‌ 1ರಿಂದ ಬಾಕಿ ಆಸ್ತಿ ತೆರಿಗೆಯ ಮೊತ್ತವನ್ನು ಡಬಲ್‌ ಮಾಡುವುದಾಗಿ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಬಿಬಿಎಂಪಿಯಿಂದ ಅಭಿಯಾನ: ಬೆಂಗಳೂರಲ್ಲಿ ಬಿಬಿಎಂಪಿಯು ಬಾಕಿ ಆಸ್ತಿ ತೆರಿಗೆ ಸಂಗ್ರಹ ಮಾಡುವುದಕ್ಕೆ ಹೊಸ ಪ್ಲಾನ್‌ ಮಾಡಿದೆ. ಬೆಂಗಳೂರಲ್ಲಿ ಇನ್ನೂ ಹಲವರು ಆಸ್ತಿ ತೆರಿಗೆ ಪಾವತಿಯನ್ನು ಬಾಕಿ ಉಳಿಸಿಕೊಂಡಿದ್ದಾರೆ. ಇವರೆಲ್ಲರೂ ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿಸುವ ನಿಟ್ಟಿನಲ್ಲಿ ಹೊಸ ಅಭಿಯಾನವನ್ನೇ ಶುರು ಮಾಡುತ್ತಿದೆ.

ಒಟಿಎಸ್ ಯೋಜನೆಯನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಿಬಿಎಂಪಿಯು ಒಟಿಎಸ್‌ ಅಭಿಯಾನ ಉಪಯೋಗಿಸಿಕೊಂಡು ಕಾಲಮಿತಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿ ಎಂದು ಜಾಗೃತಿ ಮೂಡಿಸುತ್ತಿದೆ. ಅಲ್ಲದೇ ಎಚ್ಚರಿಕೆಯ ಸಂದೇಶವನ್ನೂ ಬಿಬಿಎಂಪಿ ನೀಡುತ್ತಿದೆ. ನವೆಂಬರ್‌ 30ರ ಒಳಗಾಗಿ ಎಲ್ಲರೂ ತಪ್ಪದೇ ಆಸ್ತಿ ತೆರಿಗೆಯನ್ನು ಪಾವತಿ ಮಾಡಬೇಕು. ಇಲ್ಲದಿದ್ದರೆ ದುಪ್ಪಟ್ಟು ಇಲ್ಲವೇ ಅದಕ್ಕಿಂತಲೂ ಹೆಚ್ಚು ತೆರಿಗೆ ಪಾವತಿ ಮಾಡಬೇಕಾಗುತ್ತದೆ ಎಂದು ಬಿಬಿಎಂಪಿಯು ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರಕ್ಕೆ ಬೆಂಗಳೂರಿನಿಂದ ಗಣನೀಯ ಪ್ರಮಾಣದಲ್ಲಿ ಆದಯ ಬರುತ್ತದೆ. ಅದರಲ್ಲಿ ಬೆಂಗಳೂರು ಸಹ ಒಂದಾಗಿದೆ. ಇನ್ನು ಬೃಹತ್‌ ಬೆಂಗಳೂರು ಮಹಾಗನಗರ ಪಾಲಿಕೆಗೂ ಸಹ ಆಸ್ತಿ ತೆರಿಗೆಯಿಂದಲೇ ಬೃಹತ್‌ ಪ್ರಮಾಣದ ಆದಾಯ ಬರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಬೆಂಗಳೂರಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+