Gold-Jewellery Fair: ಇಂದಿನಿಂದ ಆಭರಣ ಮೇಳ, ಬೆಂಗಳೂರು 'ಜ್ಯುವೆಲ್ಲರಿ ಪಾರ್ಕ್' ನಿರ್ಮಾಣದ ಅಪ್ಡೇಟ್
ಬೆಂಗಳೂರು, ಮಾರ್ಚ್ 21: ಕರ್ನಾಟಕ ರಾಜ್ಯ ಸರ್ಕಾರಗಳು ಹಿಂದಿನಿಂದಲೂ ಆಭರಣ ರಫ್ತಿಗೆ ಉತ್ತೇಜನ ನೀಡಲು ಆದ್ಯತೆ ನೀಡಿವೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಮಾನ ನಿಲ್ದಾಣ ಸಮೀಪದಲ್ಲಿ ಜ್ಯುವೆಲ್ಲರಿ ಪಾರ್ಕ್ ನಿರ್ಮಾಣಕ್ಕೆ ಜಾಗ ನೀಡಲು ಸರ್ಕಾರ ಮುಕ್ತವಾಗಿದೆ. ಇದನ್ನು ಆಭರಣ ಉದ್ಯಮಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮುಕ್ತ ಆಹ್ವಾನ ನೀಡಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಶುಕ್ರವಾರ ಆರಂಭವಾದ 04 ದಿನಗಳ ಆಭರಣ ಪ್ರದರ್ಶನ ಮತ್ತು ವಾಣಿಜ್ಯ ಮೇಳಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಆಭರಣಗಳ ರಫ್ತಿಗೆ ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಮುಂದಾಗಬೇಕು. ಸುಸ್ಥಿರತೆಗೆ ಒತ್ತು ನೀಡುವ ದಿಸೆಯಲ್ಲಿ 'ನೆಟ್ ಜೀರೋ ಜ್ಯುವೆಲ್ಲರಿ ಪಾರ್ಕ್' ನಿರ್ಮಿಸಲು ಹಿತಾಸಕ್ತಿದಾರರು ಗಮನ ವಹಿಸಬೇಕು ಎಂದು ತಿಳಿಸಿದರು.

ದೇಶದ 3ನೇ ಅತಿದೊಡ್ಡ ಚಿನ್ನಾಭರಣ ಮೇಳ
ಇಂದಿನಿಂದ ಮಾರ್ಚ್ 24ರವರೆಗೆ ನಡೆಯಲಿರುವ ದೇಶದ ಮೂರನೇ ಅತಿದೊಡ್ಡ ಚಿನ್ನಾಭರಣ ಮೇಳವನ್ನು ಮುಂಬರುವ ಅಕ್ಷಯ ತೃತೀಯ ಹಿನ್ನೆಲೆಯಲ್ಲಿ 'ದಿ ಜೆಮ್ ಅಂಡ್ ಜ್ಯೂವೆಲರಿ ಎಕ್ಸ್ಪೋರ್ಟ್ ಪ್ರಮೋಶನ್ ಕೌನ್ಸಿಲ್ ಏರ್ಪಡಿಸಿದೆ ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದರು.
ವಿಶ್ವ ದರ್ಜೆಯ ಮೂಲಸೌಕರ್ಯ, ಪುರೋಗಾಮಿ ನೀತಿಗಳು ಮತ್ತು ಕೌಶಲ್ಯಪೂರ್ಣ ಕೆಲಸಗಾರರನ್ನು ಹೊಂದಿರುವ ರಾಜ್ಯವು ಆಭರಣ ತಯಾರಿಕೆ ಮತ್ತು ರಫ್ತು ವಹಿವಾಟಿಗೆ ಪ್ರಶಸ್ತ ತಾಣವಾಗಿದೆ. ಇದಕ್ಕೆ ಪೂರಕವಾಗಿ, ಉಡುಪಿಯಲ್ಲಿ ಇರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ ಅಂಡ್ ಜ್ಯೂವೆಲ್ಲರಿ ಸಂಸ್ಥೆಯು ಆಭರಣ ಕುಶಲಕರ್ಮಿಗಳನ್ನು ಸಜ್ಜುಗೊಳಿಸುತ್ತಿದೆ ಎಂದರು.

ವಾರ್ಷಿಕ 32 ಬಿಲಿಯನ್ ಡಾಲರ್ ಆಭರಣ ವಹಿವಾಟು
ದೇಶದಲ್ಲಿ ವಾರ್ಷಿಕ 32 ಬಿಲಿಯನ್ ಡಾಲರ್ ಮೊತ್ತದ ಆಭರಣ ವಹಿವಾಟು ನಡೆಯುತ್ತಿದೆ. ಮುಖ್ಯವಾಗಿ ಇಲ್ಲಿಂದ ಅಮೆರಿಕ, ಅರಬ್ ಸಂಯುಕ್ತ ಸಂಸ್ಥಾನ, ರಷ್ಯಾ, ಸಿಂಗಪುರ್ ಮತ್ತು ಹಾಂಕಾಂಗ್ ಮಾರುಕಟ್ಟೆಗೆ ಹೆಚ್ಚಿನ ಆಭರಣಗಳನ್ನು ಕಳುಹಿಸಲಾಗುತ್ತಿದೆ. ಉಡುಪಿಯಲ್ಲಿರುವ ಕಾಮನ್ ಫೆಸಿಲಿಟಿ ಸೆಂಟರ್ ಐದು ವರ್ಷಗಳ ಹಿಂದೆ 55 ವಿದ್ಯಾರ್ಥಿಗಳನ್ನು ಹೊಂದಿತ್ತು. ಈಗ ಅಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅವರಿಗೆ ಹೊಸ ಬಗೆಯ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಯುವಜನರಿಗೆ ಆದ್ಯತೆ ನೀಡಲಾಗಿದೆ.
ಪ್ರಸ್ತುತ ಮೇಳದಲ್ಲಿ ಆಭರಣ ವಲಯದ 80 ಪ್ರಮುಖ ಕಂಪನಿಗಳು ಪಾಲ್ಗೊಂಡಿವೆ. ಇವು ಹೊಸ ಬಗೆಯ ಯಂತ್ರೋಪಕರಣಗಳು, ತಂತ್ರಜ್ಞಾನ ಮತ್ತು ಪ್ಯಾಕೇಜಿಂಗ್ ಬಗ್ಗೆ ಗಮನ ಕೇಂದ್ರೀಕರಿಸಿವೆ. ಜತೆಗೆ ಭಾರತದ 15 ಸಾವಿರ ಮತ್ತು ವಿದೇಶಗಳ 300ಕ್ಕೂ ಹೆಚ್ಚು ಆಭರಣ ಖರೀದಿದಾರರು ಭಾಗವಹಿಸುತ್ತಿದ್ದಾರೆ. ಈಗ ಹೊಸ ಬಗೆಯ ವಿನ್ಯಾಸಗಳ ಆಭರಣಗಳಿಗೆ ಇರುವ ಬೇಡಿಕೆಯನ್ನು ತಿಳಿಸಿದರೆ, ಅಂತಹ ವಿನ್ಯಾಸಗಳನ್ನು ಅಕ್ಷಯ ತೃತೀಯ ವೇಳೆಗೆ ಸಿದ್ಧಪಡಿಸಿ, ವ್ಯಾಪಾರಿಗಳಿಗೆ ಪೂರೈಸಲಾಗುವುದು ಎಂದು ತಿಳಿಸಿದರು.
ರಾಜ್ಯವು ಉದ್ಯಮ ಸ್ನೇಹಿ ಮತ್ತು ರಫ್ತು ಕೇಂದ್ರಿತ ಹೊಸ ಕೈಗಾರಿಕಾ ನೀತಿಯನ್ನು ಹೊಂದಿದೆ. ವಿದೇಶಿ ಹೂಡಿಕೆಯಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿರುವ ಕರ್ನಾಟಕವು ಜಿ.ಎಸ್.ಟಿ. ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಇದಲ್ಲದೆ, ಉದ್ಯಮ ಬೆಳವಣಿಗೆಗೆ ಸಂಬಂಧಿಸಿದ ಇನ್ನೂ ಕೆಲವಾರು ಸೂಚ್ಯಂಕಗಳಲ್ಲಿ ರಾಜ್ಯವು ಮೇಲ್ಪಂಕ್ತಿಯಲ್ಲಿದೆ.
2033ರ ವೇಳೆಗೆ ಬೆಂಗಳೂರಲ್ಲಿ ಎರಡನೇ ವಿಮಾನ ನಿಲ್ದಾಣ?
2033ರ ವೇಳೆಗೆ ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಲಿದೆ. ಅದಕ್ಕಾಗಿ ಈಗಾಗಲೇ ಕಾರ್ಯ ಆರಂಭವಾಗಿದೆ. ಹೀಗಾಗಿ, ಆಭರಣ ಉದ್ದಿಮೆದಾರರು ರಾಜ್ಯದಲ್ಲಿ ಹೂಡಿಕೆ ಮಾಡುವತ್ತ ಗಮನ ಹರಿಸಬೇಕು. ಈ ವಲಯದ ಬೆಳವಣಿಗೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಸರ್ಕಾರ ಒದಗಿಸಲಿದೆ ಎಂದು ಬೆಂಬಲದ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ ಕಿರೀಟ್ ಭನ್ಸಾಲಿ, ಸಂಚಾಲಕ ನೀರವ್ ಭನ್ಸಾಲಿ, ದಕ್ಷಿಣ ಭಾರತದ ಅಧ್ಯಕ್ಷ ಮಹೇಂದ್ರ ತಾಯಲ್, ಕಾರ್ಯಕಾರಿ ನಿರ್ದೇಶಕ ಸವ್ಯಸಾಚಿ ರಾಯ್, ಚೇತನ್ ಮೆಹತಾ, ಶ್ರೀಕಾಂತ್ ಕಾರಿ, ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ, ಪ್ರಮುಖ ಆಭರಣೋದ್ಯಮಿಗಳು ಪಾಲ್ಗೊಂಡಿದ್ದರು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್












Click it and Unblock the Notifications