ಬೆಂಗಳೂರಲ್ಲಿ ಈ ಕಾರಣಕ್ಕೆ ಉದ್ಯಮ ಕಷ್ಟ, ನಾವು ಇಲ್ಲಿ ಇರಲ್ಲ: ಉದ್ಯಮಿ ಪೋಸ್ಟ್ ವೈರಲ್
ಬೆಂಗಳೂರು: ಬೆಂಗಳೂರಿನಲ್ಲಿ ಮೌಲಸೌಕರ್ಯ ಕೊರತೆ ಸೇರಿದಂತೆ ವಿವಿಧ ಕಾರಣಗಳಿಗೆ ಕೆಲವು ಕಂಪನಿಗಳು ಬೆಂಗಳೂರು ಬಿಟ್ಟು ಹೋಗುವುದಾಗಿ ಈಚೆಗೆ ಹೇಳಿದ್ದವು. ಇದೀಗ ಬೆಂಗಳೂರಿನ ರಸ್ತೆಗುಂಡಿ, ಕಸದ ಸಮಸ್ಯೆ ಸೇರಿದಂತೆ ಇನ್ನೊಂದಷ್ಟು ಕಾರಣಗಳಿಗೆ ಬೆಂಗಳೂರು ಮಾತ್ರವಲ್ಲ. ದೇಶವನ್ನೇ ಬಿಟ್ಟು ಹೋಗುತ್ತಿದ್ದೇನೆ ಎಂದು ಉದ್ಯಮಿಯೊಬ್ಬರು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೋಟಿ ಕೋಟಿ ಟ್ಯಾಕ್ಸ್ ಪೇ ಮಾಡಿ ಬೆಂಗಳೂರಿನಲ್ಲಿ ಇರುವ ಅವಶ್ಯಕತೆಯಾದರೂ ಏನಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನ ಯುವ ಉದ್ಯಮಿಯೊಬ್ಬರು ಬೆಂಗಳೂರು ವ್ಯವಸ್ಥೆ ಹಾಗೂ ಭಾರತದಲ್ಲಿ ಉದ್ಯಮ ನಡೆಸುವುದಕ್ಕೆ ಇರುವ ಸವಾಲುಗಳ ಬಗ್ಗೆ ಪೋಸ್ಟ್ ಮಾಡಿದ್ದು. ಭಾರತದಲ್ಲಿ ಉದ್ಯಮ ಪ್ರಾರಂಭಿಸುವುದು ಸುಲಭದ ಕೆಲಸವಲ್ಲ ಇದಕ್ಕಿಂತ ವಿದೇಶಕ್ಕೆ ಹೋಗುವುದೇ ಉತ್ತಮ ಎಂದು ಹೇಳಿದ್ದಾರೆ. ಅಫ್ಲಾಗ್ ಗ್ರೂಪ್ (Aflog Group) ಕಂಪನಿಯ ಮುಖ್ಯಸ್ಥ ರೋಹಿತ್ ಶ್ರಾಫ್ ತಮ್ಮ ಲಿಂಕ್ಡ್ಇನ್ನಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ಕೋಟಿ ಕೋಟಿ ತೆರಿಗೆ ಪಾವತಿ ಮಾಡಿದರೂ ನೆಮ್ಮದಿಯಾಗಿ ನೆಲೆಸುವುದು ಹಾಗೂ ಉದ್ಯಮ ನಡೆಸುವುದು ಕಷ್ಟ ಎಂದು ಅವರು ಹೇಳಿಕೊಂಡಿದ್ದಾರೆ.

ಕಳೆದ 12-18 ತಿಂಗಳುಗಳಲ್ಲಿ ನನ್ನ ಎಲ್ಲಾ ವ್ಯವಹಾರಗಳಲ್ಲಿ GST ಮತ್ತು ಆದಾಯ ತೆರಿಗೆಯಲ್ಲಿ ನಾನು ಸರಿಸುಮಾರು ₹4 ಕೋಟಿ ($500,000) ರೂಪಾಯಿ ಪಾವತಿ ಮಾಡಿದ್ದೇನೆ. ನಾನು ಇಲ್ಲಿ ನಿಯತ್ತಿನಿಂದ ತೆರಿಗೆ ಕಟ್ಟುತ್ತಿದ್ದೇನೆ ಆದರೆ ವಿವಿಧ ಇಲಾಖೆಗಳಿಂದ ಪದೇ ಪದೇ ನೋಟಿಸ್ ಜಾರಿ ಮಾಡಲಾಗುತ್ತಿದೆ. ಭಾರತದಲ್ಲಿ ಕೇವಲ 4ರಿಂದ 5% ಜನಸಂಖ್ಯೆ ಮಾತ್ರ ಆದಾಯ ತೆರಿಗೆ ಪಾವತಿಸುತ್ತಾರೆ. ಆದರೂ ನೋಟಿಸ್ಗಳನ್ನು ಕಳುಹಿಸಿದಾಗ ಸ್ಪಷ್ಟೀಕರಣಗಳನ್ನು ಪಡೆದಾಗ ಮತ್ತು ಪರಿಶೀಲನೆ ತೀವ್ರಗೊಂಡಾಗ, ಅದೇ ಸಣ್ಣ ಗುಂಪನ್ನು ಗುರಿಯಾಗಿಸುತ್ತಲೇ ಇರುತ್ತಾರೆ. ಈಗಾಗಲೇ ವ್ಯವಸ್ಥೆಯೊಳಗೆ ಇರುವವರನ್ನೇ ಗುರಿ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಪರಿಶೀಲನೆಯು ಹಲವು ಹಂತಗಳಲ್ಲಿ ಕೂಡಿದೆ. ಸ್ಥಳೀಯ GST ತಂಡಗಳು, ರಾಷ್ಟ್ರೀಯ ಆದಾಯ ಮತ್ತು ತೆರಿಗೆ ಸ್ಪಷ್ಟೀಕರಣಗಳು ಸೇರಿವೆ. ಪ್ರತಿ ತಿಂಗಳು GST, ಪ್ರತಿ ತ್ರೈಮಾಸಿಕಕ್ಕೆ TDS ಮತ್ತು ಪ್ರತಿ ವರ್ಷ ಆದಾಯ ತೆರಿಗೆಯನ್ನು ಸಲ್ಲಿಸಲು ತಂಡಗಳನ್ನು ನೇಮಿಸಿಕೊಳ್ಳುತ್ತಾರೆ. ವ್ಯವಸ್ಥೆಯ ವಿರುದ್ಧ ಹೋರಾಡುವುದು ಅದಕ್ಕೆ ಸಲ್ಲಿಸುವುದಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಆದ್ದರಿಂದ ಹೆಚ್ಚಿನವರು ವಿರೋಧಿಸುವುದಿಲ್ಲ. ಅವರು ಪಾವತಿಸುತ್ತಾರೆ, ಪ್ರತಿಕ್ರಿಯಿಸುತ್ತಾರೆ ಮತ್ತು ಮುಂದುವರಿಯುತ್ತಾರೆ. ಇದು ವ್ಯವಹಾರದ ಮೇಲೆ ಭಾರಿ ಹೊಡೆತ ಕೊಡುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಉದ್ಯಮಗಳಿಗೆ ಪ್ರೋತ್ಸಾಹ ಇಲ್ಲ
ಇನ್ನು ಬೆಂಗಳೂರು ಸೇರಿದಂತೆ ಭಾರತದಲ್ಲಿ ಉದ್ಯಮಗಳಿಗೆ ಪ್ರೋತ್ಸಾಹ ಇಲ್ಲ ಎಂದು ರೋಹಿತ್ ಶ್ರಾಫ್ ಅಭಿಪ್ರಾಯಪಟ್ಟಿದ್ದಾರೆ. ಈ ವ್ಯವಸ್ಥೆಯು ಬಹುಸಂಖ್ಯಾತರ ವಿಶ್ವಾಸವನ್ನು ಗೆಲ್ಲಲು ವಿನ್ಯಾಸಗೊಳಿಸಲಾಗಿದೆ. ಸಣ್ಣ ಕಂಪನಿಗಳು ಅಥವಾ ಸಣ್ಣ ಉದ್ಯಮಗಳಿಗೆ ಪೂರಕವಾಗಿ ಇಲ್ಲ. ನಮ್ಮಂತಹ ಜನರು ದೇಶಾದ್ಯಂತ ದುರ್ಬಲರಾಗಿದ್ದಾರೆ, ರಾಜಕೀಯವಾಗಿಯೂ ಬೆಂಬಲಿತರಲ್ಲ. ಆದ್ದರಿಂದ ನಿರ್ಲಕ್ಷಿಸಲು ಅಥವಾ ವ್ಯವಸ್ಥೆಯಿಂದ ಹೊರತೆಗೆಯಲು ಸುಲಭ.
ಭಾರತೀಯರಿಗೆ ಸಾಮರ್ಥ್ಯದ ಕೊರತೆಯಿಲ್ಲ. ಅವರು ಯುಎಇ, ಯುಎಸ್ ಮತ್ತು ಪ್ರಪಂಚದಾದ್ಯಂತ ದೊಡ್ಡ ವ್ಯವಹಾರಗಳನ್ನು ನಡೆಸುತ್ತಾರೆ. ಅವರು ಹೊರಟುಹೋದಾಗ, ಅವರು ದೇಶವನ್ನು ದ್ವೇಷಿಸುವುದರಿಂದ ಅಲ್ಲ. ಏಕೆಂದರೆ ವ್ಯವಸ್ಥೆಯು ಬೆಳವಣಿಗೆಗೆ ಪ್ರತಿಫಲ ನೀಡುವುದಿಲ್ಲ. ಅದು ಉದ್ಯಮವನ್ನು ದಂಡಿಸುತ್ತದೆ. ಉದ್ಯಮಗಳ ಪ್ರಗತಿಯನ್ನು ನಿಧಾನಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನು ಈ ಪಯಣ ಮುಗಿಸುತ್ತಿದ್ದೇನೆ
ನಾನು ಭಾರತದಲ್ಲಿ ಉದ್ಯಮ ಕಟ್ಟುವ ಹಾಗೂ ಬೆಳೆಸುವ ಯೋಚನೆಗೆ ಗುಡ್ಬಾಯ್ ಹೇಳುತ್ತಿದ್ದೇನೆ. 2026 ರ ಗುರಿ ಸರಳವಾಗಿದೆ: ದೇಶದಿಂದ ಹೊರಗೆ ಹೋಗಿ ಬೇರೆಡೆ ಉದ್ಯಮ ಸ್ಥಾಪನೆ ಮಾಡುವುದು. ನೋವಿನಿಂದಲೇ ಇದನ್ನು ನಾನು ಹೇಳುತ್ತಿದ್ದೇನೆ. ಕೆಲವು ಹಂತದಲ್ಲಿ ಸ್ವಯಂ ಸಂರಕ್ಷಣೆ ಘೋಷಣೆಗಳಿಗಿಂತ ಮುಖ್ಯವಾಗಿದೆ. ಇದು ದೇಶಭಕ್ತಿಯ ಬಗ್ಗೆ ಅಲ್ಲ, ವಾಸ್ತವದ ಬಗ್ಗೆ. ವ್ಯವಸ್ಥೆಯು ದೋಷಪೂರಿತವಾಗಿದೆ. ನಿಜವಾದ ಅಭಿವೃದ್ಧಿ ಇಲ್ಲ ಮತ್ತು ಇಲ್ಲಿ ವ್ಯಾಪಾರ ಮಾಡುವ ನಿಜವಾಗಿಯೂ ಸುಲಭದ ಮಾತಲ್ಲ ಎಂದು ಅವರು ಹೇಳಿದ್ದಾರೆ. ಲಿಂಕ್ಡ್ಇನ್ನಲ್ಲಿ ಅವರು ಮಾಡಿರುವ ಪೋಸ್ಟ್ ಇದೀಗ ವಿವಿಧ ಸೋಷಿಯಲ್ ಮೀಡಿಯಾಗಳಲ್ಲೂ ವೈರಲ್ ಆಗುತ್ತಿದೆ.
-
Swachh Survey: ಬೆಂಗಳೂರು ಸ್ವಚ್ಛ ಸರ್ವೇಕ್ಷಣ 2025-26: 38 ಉದ್ಯಾನವನ, 11 ಮೈದಾನಗಳ ಸ್ವಚ್ಛತೆ: ರಾಜೇಂದ್ರ ಚೋಳನ್ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
Viral Post: ವಿಮಾನದ ಸೀಟುಗಳ ತುಂಬಾ ಕಸದ ರಾಶಿ: ಪ್ರಯಾಣಿಕರ 'ಸಿವಿಕ್ ಸೆನ್ಸ್' ಪ್ರಶ್ನಿಸಿದ ಮಹಿಳೆ -
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ











Click it and Unblock the Notifications