ಬೆಳ್ಳಂದೂರಿನಲ್ಲಿ 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಪ್ರೀ ಸ್ಕೂಲ್ ನಲ್ಲಿ ಓದುತ್ತಿದ್ದ ಸಿಬ್ಬಂದಿಯಿಂದಲೇ ಲೈಂಗಿಕ ಕಿರುಕುಳ ಆರೋಪ; ಪೋಷಕರ ದೂರಿಗೆ ಸ್ಪಂದಿಸಿದ ಶಾಲಾ ಸಿಬ್ಬಂದಿ; ಆಸ್ಪತ್ರೆಯಲ್ಲೂ ಪ್ರಕರಣದ ದಾಖಲಿಸಲು ಹಿಂದೇಟು; ಬೇಸತ್ತ ಪೋಷಕರಿಂದ ಪೊಲೀಸರಿಗೆ ದೂರು

ಬೆಂಗಳೂರು, ಫೆಬ್ರವರಿ 20: ನಗರದಲ್ಲಿ ಪದೇ ಪದೇ ಹೆಚ್ಚಾಗುತ್ತಿರುವ ಲೈಂಗಿಕ ಆಕ್ರಮಣ ಪ್ರಕರಣಗಳು ನಾಗರಿಕರ ತಲೆ ತಗ್ಗಿಸುವಂತೆ ಮಾಡುತ್ತಿರುವ ಬೆನ್ನಲ್ಲೇ ಮೂರು ವರ್ಷದ ಬಾಲಕಿಯ ಮೇಲೆ ಪ್ರೀ ನರ್ಸರಿ ಶಾಲೆಯಲ್ಲೇ ಕಾಮುಕನೊಬ್ಬ ತನ್ನ ಕ್ರೂರ ಕಾಮಚೇಷ್ಟೆ ಮೆರೆದಿರುವ ವಿಕೃತ ಘಟನೆಯೊಂದು ಬೆಳ್ಳಂದೂರಿನಲ್ಲಿ ನಡೆದಿದೆ.

ಈ ಘಟನೆಯು ಶುಕ್ರವಾರವೇ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಮಂಜು ಎಂಬ ವ್ಯಕ್ತಿಯು ತಮ್ಮ ಮಗಳ ಮೇಲೆ ಲೈಂಗಿಕ ಆಕ್ರಮಣ ನಡೆಸಿರುವುದಾಗಿ ಹೇಳಿದ್ದಾರೆ.[ಬೆಂಗಳೂರಿನಲ್ಲಿ ಗಗನಸಖಿ ಮೇಲುಡುಪು ಹರಿದು ದುರುಳ ಪರಾರಿ]

3-year-old sexually assaulted in Bengaluru pre-school

ಶುಕ್ರವಾರ ಎಂದಿನಂತೆ ಶಾಲೆ ಮುಗಿಸಿ ಬಂದ ಬಾಲಕಿಯು ತನ್ನ ದೇಹದಲ್ಲಿ ನೋವು ಉಂಟಾಗಿದೆಯೆಂದು ಹೇಳಿರುವುದನ್ನು ಗಮನಿಸಿ ಅನುಮಾನಪಟ್ಟ ಬಾಲಕಿಯ ಪೋಷಕರು, ತಕ್ಷಣವೇ ಶಾಲೆಗೆ ಹೋಗಿ ಅಲ್ಲಿನ ಶಿಕ್ಷಕರನ್ನು ಭೇಟಿಯಾಗಿದ್ದಾರೆ. ಆದರೆ, ಪೋಷಕರು ದೂರು ನೀಡಿದರೂ ಅದನ್ನು ಗಂಭೀರವಾಗಿ ಪರಿಗಣಿಸದ ಶಾಲಾ ಸಿಬ್ಬಂದಿ, ತಕ್ಷಣವೇ ಈ ಪ್ರಕರಣವನ್ನು ತಣ್ಣಗಾಗಿಸಲು ಯತ್ನಿಸಿದ್ದು ಪೋಷಕರ ಅನುಮಾನ ಮತ್ತಷ್ಟು ಬಲಗೊಳ್ಳಲು ಕಾರಣವಾಗಿದೆ.[ಲೈಂಗಿಕ ಕಿರುಕುಳ ಕೇಸ್ : ಬೆಂಗಳೂರು 3ನೇ ಸ್ಥಾನದಲ್ಲಿದೆ]

ಹಾಗಾಗಿ, ಅಲ್ಲಿಂದ ಸೀದಾ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ, ಅಲ್ಲಿಯೂ ಸಿಬ್ಬಂದಿಯಿಂದ ಅಸಹಕಾರ ಸಿಕ್ಕಿದೆ. ಪ್ರಕರಣವನ್ನು ದಾಖಲಿಸಿಕೊಳ್ಳಲೂ ಅವರು ನಿರಾಕರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಂತರ ಅವರು ಪೊಲೀಸರನ್ನು ಸಂಪರ್ಕಿಸಿ ತಮಗಾದ ತೊಂದರೆಗಳ ಬಗ್ಗೆ ದೂರು ದಾಖಲಿಸಿದ್ದಾರೆ.[ಖ್ಯಾತ ಮಲಯಾಳಂ ನಟಿಯ ಅಪಹರಣ, ಲೈಂಗಿಕ ಕಿರುಕುಳ?]

ದೂರಿನ ಆಧಾರದ ಮೇಲೆ ಬಾಲಕಿ ಕಲಿಯುತ್ತಿದ್ದ ಪ್ರೀ ಸ್ಕೂಲ್ ನ ಸಿಬ್ಬಂದಿಯಾದ ಮಂಜು ಎಂಬ ಯುವಕನನ್ನು ಬಂಧಿಸಲಾಗಿದ್ದು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ವಿದ್ಯಾರ್ಥಿನಿ ವಾಟ್ಸಾಪ್ ಗೆ ಅಶ್ಲೀಲ ಚಿತ್ರ ಕಳುಹಿಸುತ್ತಿದ್ದವನ ಬಂಧನ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+