ಡ್ರೋನ್ ಪ್ರತಾಪ್ ವಿರುದ್ಧ 2ನೇ ಎಫ್‌ಐಆರ್ ದಾಖಲು
ಬೆಂಗಳೂರು, ಆಗಸ್ಟ್ 03 : ಸಾಂಸ್ಥಿಕ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಡ್ರೋನ್ ಪ್ರತಾಪ್ ವಿರುದ್ಧ 2ನೇ ಎಫ್‌ಐಆರ್ ದಾಖಲಾಗಿದೆ. ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಮೊದಲ ಎಫ್‌ಐಆರ್ ದಾಖಲಾಗಿತ್ತು.
Recommended Video
ಜೂನ್ 20ರಂದು ಡ್ರೋನ್ ಪ್ರತಾಪ್‌ರನ್ನು ಬೆಂಗಳೂರಿನ ರಿಚ್‌ಮಂಡ್ ಸರ್ಕಲ್ ಸಮೀಪದ ಹೋಟೆಲ್‌ನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಹಾಕಲಾಗಿತ್ತು. ಆದರೆ, ಕ್ವಾರಂಟೈನ್ ಅವಧಿ ಮುಗಿಯುವ ಮೊದಲೇ ವಕೀಲರನ್ನು ಹೋಟೆಲ್ ರೂಂಗೆ ಪ್ರತಾಪ್ ಕರೆಸಿಕೊಂಡಿದ್ದಾರೆ.
ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವವರು ಯಾರನ್ನೂ ಭೇಟಿ ಮಾಡುವಂತಿಲ್ಲ. ಹೋಟೆಲ್ ರೂಂಗೆ ಯಾರನ್ನೂ ಕರೆಸಿಕೊಳ್ಳುವಂತಿಲ್ಲ. ವಕೀಲರನ್ನು ಕರೆಸಿಕೊಂಡು 1 ತಾಸಿಗೂ ಅಧಿಕ ಕಾಲ ಚರ್ಚೆ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

ಆದ್ದರಿಂದ, ಬೆಂಗಳೂರು ಪೊಲೀಸರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಸೆಕ್ಷನ್ 51ಬಿ ಅಡಿಯಲ್ಲಿ ಐಪಿಸಿ ಸೆಕ್ಷನ್ 188, 269, 270 ಹಾಗೂ 271 ಅಡಿ ಡ್ರೋನ್ ಪ್ರತಾಪ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಕಾರಣಕ್ಕೆ ಡ್ರೋನ್ ಪ್ರತಾಪ್ ವಿರುದ್ಧ ಪೊಲೀಸರು ಮೊದಲ ಎಫ್‌ಐಆರ್ ದಾಖಲು ಮಾಡಿದ್ದರು. ಬಳಿಕ ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಹಾಕಲಾಗಿತ್ತು.
ಕ್ವಾರಂಟೈನ್ ನಿಯಮ ಉಲ್ಲಂಘನೆಗೆ ಜಾಮೀನು ನೀಡುವ ಷರತ್ತುಗಳ ಬಗ್ಗೆ ಚರ್ಚಿಸಲು ವಕೀಲರನ್ನು ಕರೆಸಿದ್ದಾಗಿ ಡ್ರೋನ್ ಪ್ರತಾಪ್ ಹೇಳಿದ್ದಾರೆ. ಆದರೆ, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವಾಗ ಜಾಮೀನಿನ ಪ್ರಶ್ನೆ ಬರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications