ಬೆಂಗಳೂರಿನಲ್ಲಿ ಡಿಸೆಂಬರ್ ನಲ್ಲಿ ವೈನ್ ವೈಭೋಗ

ಗುರುವಾರ ಕರ್ನಾಟಕ ವೈನ್ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ. ಕೃಷ್ಣ ಈ ಕುರಿತು ಮಾಹಿತಿ ನೀಡಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ದ್ವಿತೀಯ ವರ್ಷದ ವೈನ್ ಮೇಳ ಆಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಬಾರಿಯ ಮೇಳೆದಲ್ಲಿ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ರಾಜ್ಯದ ದ್ರಾಕ್ಷಿ ಬೆಳೆಗಾರರಿಗೆ ಮಾಹಿತಿ ನೀಡುವ ಕಾರ್ಯಾಗಾರಗಳನ್ನು ವೈನ್ ಮೇಳದಲ್ಲಿ ಆಯೋಜಿಸಲಾಗುವುದು ಎಂದು ಕೃಷ್ಣ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ವೈನ್ ಮೇಳಕ್ಕಿಂತ ಮೊದಲು, ಮಂಗಳೂರು, ಬೆಳಗಾವಿ ಮತ್ತು ಮೈಸೂರಿನಲ್ಲಿಯೂ ವೈನ್ ಮೇಳ ಆಯೋಜಿಸಲು ಕರ್ನಾಟಕ ವೈನ್ ಮಂಡಳಿ ಯೋಜನೆ ರೂಪಿಸಿದೆ ಎಂದರು.(ಶುಕ್ರವಾರದಿಂದ ಮೈಸೂರಿನಲ್ಲಿ ವೈನ್ ಮೇಳ)
ಮೊಟ್ಟಮೊದಲ ಬಾರಿಗೆ ಕರ್ನಾಟಕ ವೈನ್ ಮಂಡಳಿ, ಅ.18ರಿಂದ 20ರ ವೆರೆಗೆ ಮೈಸೂರಿನಲ್ಲಿ ವೈನ್ ಮೇಳವನ್ನು ಆಯೋಜಿಸಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ 16ಕ್ಕೂ ಹೆಚ್ಚು ಕಂಪನಿಗಳು ಇದರಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.
ಹಾಪ್ ಕಾಮ್ಸ್ ನಲ್ಲಿ ವೈನ್ : ಬೆಂಗಳೂರಿನ ಹಾಪ್ ಕಾಮ್ಸ್ ಗಳಲ್ಲಿ ವೈನ್ ಮಾರಾಟ ಮಾಡಲು ಕರ್ನಾಟಕ ವೈನ್ ಮಂಡಳಿ ಸಿದ್ಧತೆ ನಡೆಸಿದೆ. ಕೆಲವೇ ದಿನಗಳಲ್ಲಿ ನಗರದ ಆಯ್ದ ಹಾಪ್ ಕಾಮ್ಸ್ ಗಳಲ್ಲಿ ವೈನ್ ದೊರೆಯಲಿದೆ ಎಂದರು. (ಐದು ಹಾಪ್ ಕಾಮ್ಸ್ ಗಳಲ್ಲಿ ವೈನ್ ಸಿಗುತ್ತೆ)
ತೋಟಗಾರಿಕಾ ಇಲಾಖೆಯ ಜೊತೆ ಹಾಪ್ ಕಾಮ್ಸ್ ಗಳಲ್ಲಿ ವೈನ್ ಮಾರಾಟ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ. ನಗರದ ಐದು ಹಾಪ್ ಕಾಮ್ಸ್ ಗಳಲ್ಲಿ ವೈನ್ ಮಾರಾಟ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.












Click it and Unblock the Notifications