ದರ್ಶನ್ ವಿದ್ಯಾಸಂಸ್ಥೆಗಳ ರಜತ ಮಹೋತ್ಸವಕ್ಕೆ ಸ್ವಾಗತ
ಬೆಂಗಳೂರು, ಡಿ.17 : ದರ್ಶನ್ ವಿದ್ಯಾಸಂಸ್ಥೆ ಮತ್ತು ನಾಡಪ್ರಭು ಶಾಲಾಕಾಲೇಜಿಗಳ ರಜತ ಮಹೋತ್ಸವ ಮತ್ತು ನಾಡಪ್ರಭು ಕೆಂಪೇಗೌಡರ ಪುಸ್ತಕ ಬಿಡುಗಡೆ ಸಮಾರಂಭ ಮಂಗಳವಾರ ಸಂಜೆ 4.30ಕ್ಕೆ ಕೆ.ಜಿ.ರಸ್ತೆಯಲ್ಲಿರುಯವ ಶಿಕ್ಷಕರ ಸದನದಲ್ಲಿ ನಡೆಯಲಿದೆ.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.ನಾಡಪ್ರಭು ಕೆಂಪೇಗೌಡ ಪುಸ್ತಕವನ್ನು ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರಾದ ವೈ.ಕೆ.ಪುಟ್ಟಸೋಮೇಗೌಡರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಸಂಜೆ 4.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.
ರಜತಮಹೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ, ಮಹಾಲಕ್ಮೀಪುರ ಶಾಸಕ ಗೋಪಾಲಯ್ಯ ಮತ್ತು ಖ್ಯಾತ ನೇತ್ರ ತಜ್ಞರಾದ ಡಾ.ಅಪ್ಪಾಜಿ ಗೌಡರು ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಪಕರಾದ ಪ್ರೊ.ಟಿ.ಶಿವಣ್ಣ ವಹಿಸಲಿದ್ದಾರೆ.
ಡಾ.ಸಿ.ಡಿ.ವೆಂಕಟೇಶ್ ಬರೆದಿರುವ ನಾಡಪ್ರಭು ಕೆಂಪೇಗೌಡ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಲಿದ್ದಾರೆ ಎಂದು ದರ್ಶನ್ ವಿದ್ಯಾಸಂಸ್ಥೆ ಹಾಗೂ ನಾಡಪ್ರಭು ಶಾಲಾ ಕಾಲೇಜುಗಳ ಕಾರ್ಯದರ್ಶಿ ಅ.ದೇವೇಗೌಡ ತಿಳಿಸಿದ್ದು, ಸರ್ವರಿಗೂ ಸ್ವಾಗತ ಕೋರಿದ್ದಾರೆ.












Click it and Unblock the Notifications