ದೀಪಾವಳಿ ಪಟಾಕಿ ಮಾಲಿನ್ಯ ಅಳೆತೆಗೆ ಮಾಪನ ರೆಡಿ
Recommended Video

ಬೆಂಗಳೂರು, ನವೆಂಬರ್ 5: ದೀಪಾವಳಿ ದಿನ ಪಟಾಕಿಯಿಂದ ಉಂಟಾಗುವ ಮಾಲಿನ್ಯವನ್ನು ಅಳೆಯಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 21 ವಾಯುಗುಣಮಟ್ಟ ಮಾಪನಗಳನ್ನು ಸಿದ್ಧಪಡಿಸಿದೆ. ಈ ಮಾಪನಗಳನ್ನು ನಗರದ 21 ಕಡೆಗಳಲ್ಲಿ ಇರಿಸಲಾಗುತ್ತದೆ.
ಬೆಂಗಳೂರಲ್ಲಿ ಪ್ರತಿವರ್ಷ ದೀಪಾವಳಿ ಹಬ್ಬದಂದು ವಾಯುಮಾಲಿನ್ಯ ಶೇ.52ರಷ್ಟು ಹೆಚ್ಚಾಗುತ್ತದೆ. ಅದನ್ನು ಅಳತೆಮಾಡುವ ಸಲುವಾಗಿ 13 ಕಡೆಗಳಲ್ಲಿ ವಾಯುಗುಣಮಟ್ಟ ಪರಿವೇಷ್ಟಕ ತಪಾಸಣೆ ನಡೆಸಲಾಗಿತ್ತು. ಈ ಬಾರಿ 21 ವಾಯುಮಾಲಿನ್ಯ ಮಾಪನಗಳನ್ನು ಅಳವಡಿಸಲಾಗುತ್ತಿದೆ.
ವಾಯು ಮಾಲಿನ್ಯ ಮಾಪನ ಘಟಕಗಳಲ್ಲಿ ಹಾಗೂ ಮಂಡಳಿಯ ಎರಡು ಮೊಬೈಲ್ ಕೇಂದ್ರಗಳ ಮೂಲಕ ತಪಾಸಣೆ ನಡೆಸಲಾಗುತ್ತದೆ. ಹಬ್ಬಕ್ಕೆ ಮುನ್ನ ಹಾಗೂ ಹಬ್ಬದ ದಿನಗಳಲ್ಲಿ ಮಾಲಿನ್ಯ ತಪಾಸಣೆ ನಡೆಸಲಾಗುತ್ತದೆ ಹಾಗೆಯೇ ಮಾರಕ ಅಂಶಗಳ ಕುರಿತು ಅಧ್ಯಯನ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದ್ದಾರೆ. ಬೆಂಗಳೂರಲ್ಲಿ ಕೇವಲ ಬಿಬಿಎಂಪಿ ಮೈದಾನಗಳಲ್ಲಿ ಮಾತ್ರ ಪಟಾಕಿ ಮಾರಾಟ ಮಾಡಲಾಗುತ್ತದೆ.

ಉಳಿದಂತೆ ಬೇರೆ ಪ್ರದೇಶಗಳಲ್ಲಿ ಮಾರಾಟ ಮಾಡಿದರೆ ಅವರಿಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ ನವೆಂಬರ್ 5ರಿಂದ 8ರವರೆಗೆ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿಯನ್ನು ಸಿಡಿಸಲು ಅನುಮತಿ ನೀಡಲಾಗಿದೆ.












Click it and Unblock the Notifications