7 ಲಕ್ಷದಲ್ಲಿ 21% ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ; ಬಿಬಿಎಂಪಿ

ಬೆಂಗಳೂರು, ಸೆಪ್ಟೆಂಬರ್ 08: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣ ದೃಷ್ಟಿಯಿಂದ ಬಿಬಿಎಂಪಿ ಕೊರೊನಾ ಲಸಿಕೆ ನೀಡುವ ಸಂಬಂಧ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಲಸಿಕಾ ಕಾರ್ಯವನ್ನು ಚುರುಕುಗೊಳಿಸಿದೆ. ಲಸಿಕಾ ಕಾರ್ಯಾಚರಣೆ ಕುರಿತು ವಿಶ್ಲೇಷಣೆ ನಡೆಸಲು ಈಚೆಗೆ ಸಮೀಕ್ಷೆಯೊಂದನ್ನು ಹಮ್ಮಿಕೊಂಡಿದ್ದು, ಅದರ ಫಲಿತಾಂಶವನ್ನು ಪ್ರಕಟಿಸಿದೆ.

ಬೆಂಗಳೂರು ನಗರದಲ್ಲಿ ಸಮೀಕ್ಷೆ ಕೈಗೊಂಡಿದ್ದ ಬಿಬಿಎಂಪಿ, ಸುಮಾರು ಏಳು ಲಕ್ಷ ಮಂದಿಯಲ್ಲಿ 21% ಮಂದಿ ಎರಡೂ ಡೋಸ್‌ಗಳ ಕೊರೊನಾ ಲಸಿಕೆಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದೆ.

ಸೆಪ್ಟೆಂಬರ್ 5ರವರೆಗೆ, ಸಮೀಕ್ಷೆಗೆ ಒಳಪಟ್ಟ ಏಳು ಲಕ್ಷ ಮಂದಿಯಲ್ಲಿ 21% ಮಂದಿ ಎರಡೂ ಡೋಸ್‌ಗಳ ಲಸಿಕೆ ಪಡೆದಿದ್ದಾರೆ. 62% ಮಂದಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದೆ.

21 Percent Of Over 7 Lakh Surveyed Got Both Dose Of Corona Vaccine Says BBMP

ಬಿಬಿಎಂಪಿಯ ಮನೆ ಬಾಗಿಲಿಗೆ ವೈದ್ಯರು ಕಾರ್ಯಕ್ರಮದಡಿಯಲ್ಲಿ, ಕಳೆದ ಮೂರು ವಾರಗಳಲ್ಲಿ 2,48,280 ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿದ್ದು, 7,11,48 ಮಂದಿಯಿಂದ ಮಾಹಿತಿ ಕಲೆ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದು, ಅವರಿಗೆ ಲಸಿಕೆ ನೀಡುವ ಸಂಬಂಧ ಈ ಸಮೀಕ್ಷೆ ಹಲವು ವಿಷಯಗಳನ್ನು ಹೊರಹಾಕಿದೆ.

ನಗರದಲ್ಲಿ ಸಮೀಕ್ಷೆಗೆ ಒಳಪಟ್ಟವರಲ್ಲಿ ಸುಮಾರು 22 ಪ್ರತಿಶತದಷ್ಟು (22,362) ಮಂದಿ ಈ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು ಎಂಬುದು ತಿಳಿದುಬಂದಿದೆ. ಇತರೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ 57,528 ಮಂದಿಯಲ್ಲಿ ಶೇ 50.8 ಮಂದಿಗೆ ಮಧುಮೇಹ, ಶೇ 35.82ರಷ್ಟು ಮಂದಿಗೆ ರಕ್ತದೊತ್ತಡ, ಶೇ 2.48 ಮಂದಿಗೆ ಹೃದಯ ಸಂಬಂಧಿ ಸಮಸ್ಯೆಗಳು, ಶೇ 2.99 ಮಂದಿಗೆ ಥೈರಾಯ್ಡ್‌ ಸಮಸ್ಯೆಗಳು ಇರುವುದಾಗಿ ಸಮೀಕ್ಷೆ ತಿಳಿಸಿದೆ.

21 Percent Of Over 7 Lakh Surveyed Got Both Dose Of Corona Vaccine Says BBMP

ಬಿಬಿಎಂಪಿ ಅಧೀಕೃತ ಮಾಹಿತಿ ಪ್ರಕಾರ, ನಗರದಲ್ಲಿ ಒಂದು ಕೋಟಿ ಡೋಸ್ ಲಸಿಕೆಗಳನ್ನು (ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಎರಡೂ ಒಳಗೊಂಡಂತೆ) ನೀಡಲಾಗಿದೆ. 4,39,777 (62%) ಮಂದಿ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರೆ, 1,67,081(21%) ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.

ಸಮೀಕ್ಷೆಯಲ್ಲಿ ಶೇ 90ರಷ್ಟು ಗುರಿಯನ್ನು ಸಾಧಿಸಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಆಗಸ್ಟ್‌ 16ರಂದು ಬೆಂಗಳೂರಿನ ನಿವಾಸಿಗಳ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವ ಗುರಿಯೊಂದಿಗೆ ಮನೆ ಮನೆ ಸಮೀಕ್ಷೆಯನ್ನು ಆರಂಭಿಸಲಾಯಿತು. ಕೊರೊನಾ ಮೂರನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಸಮೀಕ್ಷೆ ಹಮ್ಮಿಕೊಳ್ಳಲಾಗಿತ್ತು.

ಆರೋಗ್ಯ ಹಾಗೂ ಲಸಿಕೆ, ವಿಳಾಸ, ಕುಟುಂಬದ ಸದಸ್ಯರ ವಿವರಗಳನ್ನು ಸಮೀಕ್ಷೆಯಲ್ಲಿ ಕೇಳಲಾಗಿತ್ತು. ಆರೋಗ್ಯ ಸಮಸ್ಯೆಗಳು ಹಾಗೂ ಕೊರೊನಾ ಲಕ್ಷಣಗಳ ಕುರಿತು ಮಾಹಿತಿ ಸಂಗ್ರಹಿಸಲು ಒಬ್ಬರು ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

100% ಜನರಿಗೆ ಕೊರೊನಾ ಲಸಿಕೆ ಮೊದಲ ಡೋಸ್ ನೀಡಲು ಯೋಜನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 100% ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡುವ ಯೋಜನೆಯನ್ನು ಬಿಬಿಎಂಪಿ ಹಮ್ಮಿಕೊಂಡಿದೆ. ಮುಂದಿನ 45 ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನವನ್ನು ವೇಗಗೊಳಿಸಲು ಹಾಗೂ 100% ಮೊದಲ ಡೋಸ್ ಲಸಿಕೆ ಗುರಿಯನ್ನು ಸಾಧಿಸಲು ಕ್ರಿಯಾಯೋಜನೆ ಹೊರತಂದಿದೆ. ತನ್ನ ವ್ಯಾಪ್ತಿಯ ಶೇ 100ರಷ್ಟು ಮಂದಿಗೆ ಕೊರೊನಾ ಮೊದಲ ಡೋಸ್ ಲಸಿಕೆ ನೀಡಲು ಬಿಬಿಎಂಪಿ ಗುರಿ ಹೊಂದಿರುವುದಾಗಿ ತಿಳಿಸಿದೆ.

'ಈಗ ಪ್ರತಿದಿನ ಒಂದು ಲಕ್ಷ ಲಸಿಕೆ ಪೂರೈಕೆ ಲಭ್ಯವಿದೆ. ಮುಂದಿನ 45 ದಿನಗಳಲ್ಲಿ ಉದ್ದೇಶಿತ ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ನೀಡಲು ಗುರಿ ಹೊಂದಲಾಗಿದೆ. ಈಗ ನಮಗೆ ಸಾಕಷ್ಟು ಲಸಿಕೆಗಳ ಲಭ್ಯವಿದೆ. ಈ ಮುನ್ನ ದಿನನಿತ್ಯ ಲಸಿಕೆಗಳ ಪೂರೈಕೆ 35-50 ಸಾವಿರ ಇದ್ದದ್ದು ಈಗ ಒಂದು ಲಕ್ಷಕ್ಕೆ ಏರಿಕೆಯಾಗಿದೆ. ಹೀಗಾಗಿ ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ' ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಈಚೆಗೆ ಮಾಹಿತಿ ಒದಗಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+