ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ 21 ಕೋವಿಡ್ ಪಾಸಿಟಿವ್; ಮತ್ತೊಂದು ಕ್ಲಸ್ಟರ್ ರಚನೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 28: ಕಳೆದ ಒಂದು ವಾರದ ಅವಧಿಯಲ್ಲಿ ರಾಜಧಾನಿ ಬೆಂಗಳೂರಿನ ರಾಜಾಜಿನಗರದ ಅಪಾರ್ಟ್‌ಮೆಂಟ್‌ ಒಂದರಲ್ಲಿ 21 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ನಗರದಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್ ಅನ್ನು ರಚಿಸಲಾಗಿದೆ.

ರಾಜಾಜಿನಗರದ ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್‌ನ ಕೊರೊನಾ ವೈರಸ್ ಪಾಸಿಟವ್ ಪರೀಕ್ಷೆ ಹೊಂದಿರುವ ಕೆಲವು ನಿವಾಸಿಗಳು ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತ (ಆರೋಗ್ಯ) ಡಾ. ತ್ರಿಲೋಕ್ ಚಂದ್ರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ನಾವು ಅವರ ಪ್ರಯಾಣದ ಇತಿಹಾಸವನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಅಪಾರ್ಟ್‌ಮೆಂಟ್‌ನ ಮೇಲೆ ಮತ್ತು ಕೆಳಗಿನ ಮಹಡಿಯ ಫ್ಲಾಟ್‌ಗಳನ್ನು ಪರಿಶೀಲಿಸಿದ್ದೇವೆ ಎಂದರು.

21 Covid-19 Test Positive in Rajajinagar Apartment; Another Cluster in Bengaluru

ನಾವು ಎಲ್ಲಾ ಇತರ ನಿವಾಸಿಗಳನ್ನು ಸಹ ಪರೀಕ್ಷಿಸುತ್ತಿದ್ದೇವೆ. ಯಾವ ರೂಪಾಂತರ ವೈರಸ್ ಕ್ಲಸ್ಟರ್‌ಗೆ ಕಾರಣವಾಯಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾದರಿಗಳನ್ನು ಜೀನೋಮಿಕ್ ಪರೀಕ್ಷೆಗಾಗಿ ಕಳುಹಿಸಲಾಗಿದೆ," ಎಂದು ಬಿಬಿಎಂಪಿ ವಿಶೇಷ ಆರೋಗ್ಯ ಆಯುಕ್ತ ಡಾ.ತ್ರಿಲೋಕ್ ಚಂದ್ರ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಪ್ರಸ್ತುತ 98 ಸಕ್ರಿಯ ಕಂಟೈನ್‌ಮೆಂಟ್ ವಲಯಗಳನ್ನು ಹೊಂದಿದ್ದು, ಅವುಗಳಲ್ಲಿ 31 ಬೊಮ್ಮನಹಳ್ಳಿ ವಲಯದಲ್ಲಿವೆ. ಇದರ ನಂತರ ದಕ್ಷಿಣ ವಲಯದಲ್ಲಿ 19, ಮಹದೇವಪುರದಲ್ಲಿ 14, ಪೂರ್ವ ವಲಯದಲ್ಲಿ 13, ಪಶ್ಚಿಮ ವಲಯದಲ್ಲಿ 10, ಯಲಹಂಕದಲ್ಲಿ 6 ಮತ್ತು ರಾಜರಾಜೇಶ್ವರಿ ನಗರದಲ್ಲಿ ಐದು ಮತ್ತು ದಾಸರಹಳ್ಳಿಯಲ್ಲಿ ಯಾವುದೇ ಕಂಟೈನ್‌ಮೆಂಟ್ ವಲಯಗಳಿಲ್ಲ.

English summary
21 Covid- 19 positive cases have been reported in an apartment in Rajajinagar in the capital of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X