ಮದರಸಾದ 200 ಹುಡುಗರನ್ನು ತಡೆ ಹಿಡಿದ ಬೆಂಗಳೂರು ರೈಲ್ವೇ ಪೊಲೀಸ್
ಬೆಂಗಳೂರು, ಜುಲೈ 12: ಮದರಸಾದಲ್ಲಿ ಓದುತ್ತಿರುವ 8-13 ವರ್ಷದ 200 ಬಾಲಕರನ್ನು ಮತ್ತು 20 ಶಿಕ್ಷಕರನ್ನು ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ಸ್ಟೇಶನ್ನಿನಲ್ಲಿ ತಡೆ ಹಿಡಿದ ಘಟನೆ ಜಿಲೈ 11 ರಂದು ನಡೆದಿದೆ.
ಮಾನವ ಕಳ್ಳಸಾಗಣೆಯ ಅನುಮಾನದ ಮೇಲೆ ಈ ಎಲ್ಲರನ್ನೂ ತಡೆಹಿಡಿದಿದ್ದ ರೈಲ್ವೇ ಪೊಲೀಸರು, ಅವರ ಗುರುತಿನ ಚೀಟಿಯನ್ನೆಲ್ಲ ಕೂಲಂಕಷವಾಗಿ ತಪಾಸಣೆ ಮಾಡಿದ ಮೇಲೆ ಅವರನ್ನು ಬಿಟ್ಟಿದ್ದಾರೆ. ಗುವಾಹಟಿ ಎಕ್ಸ್ ಪ್ರೆಸ್ ನಲ್ಲಿ ಬಂದಿಳಿದಿದ್ದ 200 ಮಕ್ಕಳು ಮದರಸಾದಲ್ಲಿ ಓದುತ್ತಿದ್ದವರು.
ಇವರೊಂದಿಗಿದ್ದ 20 ಶಿಕ್ಷಕರ ಗುರುತಿನ ಚೀಟಿಯನ್ನೂ ಕೂಲಂಕಷವಾಗಿ ಪರೀಕ್ಷಿಸಲಾಗಿದೆ.













Click it and Unblock the Notifications