ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರು ಲಾಕ್ ಮಾಡಿದ್ದೇನೆ, ಕೀ ನನ್ನ ಬಳಿಯೇ ಇದೆ ಎಂದು ಖುಷಿ ಪಡಬೇಡಿ

|
Google Oneindia Kannada News

ಬೆಂಗಳೂರು, ಜುಲೈ 4:ಕಾರು ಲಾಕ್ ಮಾಡಿದ್ದೇನೆ, ಕೀ ನನ್ನ ಬಳಿಯೇ ಇದೆ ಎಂದು ಖುಷಿ ಪಡಬೇಡಿ, ಆ್ಯಪ್‌ಗಳ ಮೂಲಕವೂ ಕಾರನ್ನು ಕಳ್ಳತನ ಮಾಡುತ್ತಿದ್ದಾರೆ.

ಹೌದು ಆ್ಯಪ್‌ಗಳ ಮೂಲಕವೇ ಕಾರಿನ ಡೋರ್ ಓಪನ್ ಮಾಡಿ ಕಳ್ಳತನ ಮಾಡುತ್ತಿರುವ ಪ್ರಕರಣಗಳು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿವೆ. ಇಬ್ಬರು ಕಳ್ಳರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕಾರು ಚಾಲಕರೇ ಎಚ್ಚರ, ಎಂತೆಂಥಾ ಕಳ್ಳರಿರ್ತಾರೆ ನೋಡಿಕಾರು ಚಾಲಕರೇ ಎಚ್ಚರ, ಎಂತೆಂಥಾ ಕಳ್ಳರಿರ್ತಾರೆ ನೋಡಿ

ಚೆನ್ನೈ ಶಂಕರನಗರದ ಸದ್ದಾಂ ಹುಸೇನ್‌ ಮತ್ತು ವೆಲ್ಲೂರಿನ ಬಾಬು ಬಂಧಿತರು. ಇವರಿಂದ 1 ಕೋಟಿ ರೂ. ಮೌಲ್ಯದ ಮಾರುತಿ ಸ್ವಿಫ್ಟ್‌, ಡಿಜೈರ್‌ ಮತ್ತು ಎರ್ಟಿಗಾ ಮಾಡೆಲ್‌ನ 15 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

 2 people arrested for allegedly stealing cars

ಕಳ್ಳತನ ಮಾಡಲೆಂದೇ ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದರು. ಬೆಳಗಿನ ಜಾವ ನಗರಕ್ಕೆ ಆಗಮಿಸುತ್ತಿದ್ದ ಸದ್ದಾಂ ಹುಸೇನ್‌ ಹಾಗೂ ಬಾಬು, ಕೆಲವೇ ಗಂಟೆಗಳಲ್ಲಿ ದುಬಾರಿ ಮೌಲ್ಯದ ಕಾರುಗಳನ್ನು ಸರಳವಾಗಿ ಕದ್ದು ಪರಾರಿಯಾಗುತ್ತಿದ್ದರು ಎಂದು ಅಧಿಕಾರಿ ವಿವರಿಸಿದರು.

ಆ್ಯಪ್‌ ಮೂಲಕ ವಾಹನದ ಸಮಸ್ಯೆ ಪತ್ತೆ ಹಚ್ಚಿ, ರಿಪೇರಿ ಮಾಡುತ್ತಾರೆ. ಈ ರೀತಿಯ ಆ್ಯಪ್‌ ಅನ್ನು ತಮ್ಮ ಟ್ಯಾಬ್‌ಗೆ ಅಳವಡಿಸಿಕೊಂಡಿದ್ದ ಆರೋಪಿಗಳು, ಅದನ್ನು ಬಳಸಿ ಕಾರುಗಳ ಲಾಕ್‌ ತೆರೆದು ಕದಿಯುತ್ತಿದ್ದರು.

ಹಗಲಿನಲ್ಲಿ ಸಾಚಾ ಚಾಲಕರು, ರಾತ್ರಿ ಹೊತ್ತು ಭಯಂಕರ ದರೋಡೆಕೋರರುಹಗಲಿನಲ್ಲಿ ಸಾಚಾ ಚಾಲಕರು, ರಾತ್ರಿ ಹೊತ್ತು ಭಯಂಕರ ದರೋಡೆಕೋರರು

ಇತ್ತೀಚಿನ ಮಾದರಿಯ ಕೆಲವು ಕಾರುಗಳ ರಿಪೇರಿಗೆ ಸರ್ವಿಸ್‌ ಸೆಂಟರ್‌ಗಳಲ್ಲಿ ಆ್ಯಪ್‌ ಬಳಸುತ್ತಾರೆ. ಆಗ್ನೇಯ ವಿಭಾಗದ ಮಡಿವಾಳ ಮತ್ತು ಆಡುಗೋಡಿ ಠಾಣೆ ಪೊಲೀಸರು ಒಬ್ಬ ಬಾಲಕ ಹಾಗೂ ನಾಲ್ವರು ಕಳ್ಳತನ ಆರೋಪಿಗಳನ್ನು ಬಂಧಿಸಿ 49 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಸರ್ವೀಸ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಲ್ಮಾನ್ ಎನ್ನುವವನಿಗೆ ಆ್ಯಪ್‌ ಬಳಸಿ ಲಾಕ್‌ ಓಪನ್‌ ಮಾಡುವುದು ಕರಗತವಾಗಿದೆ. ಆತನೇ ಟ್ಯಾಬ್‌ಗೆ ಆ್ಯಪ್‌ ಇನ್‌ಸ್ಟಾಲ್‌ ಮಾಡಿಸಿ ಲಾಕ್‌ ಓಪನ್‌ ಮಾಡುವುದು ಮತ್ತು ಲಾಕ್‌ ಮಾಡುವುದು ಸೇರಿದಂತೆ ಇನ್ನಿತರ ಕಳ್ಳತನದ ಕಲೆಗಳನ್ನು ಹೇಳಿಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

English summary
Bommanahalli police arrested two people in connection with car stole case. They used to stole the car by using mobile apps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X