18 ಲಕ್ಷ ಮನೆ ನಿರ್ಮಾಣ ಪ್ರಗತಿ, 5 ಲಕ್ಷ ಮನೆ ಮಂಜೂರು: ಬಸವರಾಜ ಬೊಮ್ಮಾಯಿ

ಬೆಂಗಳೂರು, ನವೆಂಬರ್ 14: ಕರ್ನಾಟಕ ರಾಜ್ಯದಲ್ಲಿ ಎಲ್ಲರಿಗೂ ವಸತಿ ಕಲ್ಪಿಸಲು ಬಹಳ ದೊಡ್ಡ ಪ್ರಮಾಣದಲ್ಲಿ ನಾವು ಕ್ರಮ ತೆಗೆದುಕೊಂಡಿದ್ದೇವೆ. 18 ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಐದು ಲಕ್ಷ‌ ಮನೆ ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.

ಭಾನುವಾರ ವಸತಿ ಇಲಾಖೆಯ ಕರ್ನಾಟಕ ಗೃಹ ಮಂಡಳಿ ವತಿಯಿಂದ ಕೆಂಗೇರಿ ವಲಗೇರಹಳ್ಳಿಯಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಹಿಂದಿನ ಕಾಂಗ್ರೆಸ್ ಸರ್ಕಾರ 2018 ರಲ್ಲಿ ಸರ್ಕಾರದ ಕೊನೆಯ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ಘೋಷಣೆ ಮಾಡಿತ್ತು.‌ 15 ಲಕ್ಷ ಮನೆ ಘೋಷಿಸಿ, 2,500 ಕೋಟಿ ರೂ. ನೀಡಿತ್ತು. ಅದರಲ್ಲಿ 1,000 ಕೋಟಿ ಖರ್ಚು ಮಾಡಿದ್ದೇನೆಂದು ಘೋಷಣೆ ಮಾಡಿತ್ತು. ಅಲ್ಲದೆ ಪ್ರಧಾನಮಂತ್ರಿ ಯೋಜನೆಯನ್ನೂ ಜನರಿಂದ ದೂರ ಇಟ್ಟಿತ್ತು. ಸ್ವಪ್ರತಿಷ್ಠೆಗಾಗಿ ಒಂದು ಸರ್ಕಾರ ಜನರ ಹಿತ ಕಾಯದೇ ಅನ್ಯಾಯ ಮಾಡಿತ್ತು ಎಂದು ಕಾಂಗ್ರೆಸ್‌ ವಿರುದ್ಧ ಬಸವರಾಜ ಬೊಮ್ಮಾಯಿ‌ ವಾಗ್ದಾಳಿ ನಡೆಸಿದರು.

ಬಿಜೆಪಿಯಿಂದ 18 ಲಕ್ಷ ಮನೆ ನಿರ್ಮಾಣ

ಬಿಜೆಪಿಯಿಂದ 18 ಲಕ್ಷ ಮನೆ ನಿರ್ಮಾಣ

ನಮ್ಮ ಸರ್ಕಾರ ಬಂದ ಮೇಲೆ 18 ಲಕ್ಷ ಮನೆ ನಿರ್ಮಾಣ ಕಾರ್ಯ ನಡೆಸಿದೆ. ಒಟ್ಟು 5 ಲಕ್ಷ ಮನೆಗಳನ್ನು ನಾನು ನೀಡಿದ್ದೇನೆ.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ (ಸ್ಲಂ ಬೋರ್ಡ್) ನಿಂದ 80 ಸಾವಿರ ಮನೆ ಮಂಜೂರು ಮಾಡಲಾಗಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ 1 ಲಕ್ಷ ಮನೆ‌ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು ಈಗಾಗಲೇ 40 ಸಾವಿರ ಮನೆಗಳ ಹಂಚಿಕೆ ಮಾಡಿ ಚಾಲನೆ ನೀಡಲಾಗಿದೆ. ಇದು ಕ್ರಿಯಾಶೀಲ ವಸತಿ ಸಚಿವ ವಿ.ಸೋಮಣ್ಣ ಅವರಿಂದ ಸಾಧ್ಯವಾಗಿದೆ ಎಂದರು.

ಬೆಂಗಳೂರಿನ ಸಮಗ್ರ ಅಭಿವೃದ್ದಿಗೆ 8,000 ಕೋಟಿ

ಬೆಂಗಳೂರಿನ ಸಮಗ್ರ ಅಭಿವೃದ್ದಿಗೆ 8,000 ಕೋಟಿ

ಮತ್ತೊಬ್ಬ ಕ್ರಿಯಾಶೀಲ ಸಹಕಾರ ಸಚಿವರ ಎಸ್.‌ಟಿ ಸೋಮಶೇಖರ್ ಬಹಳ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಸಮಗ್ರ ಅಭಿವೃದ್ದಿಗೆ 8,000 ಕೋಟಿ ನೀಡಲಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಮಳೆಯಿಂದ ಸ್ವಲ್ಪ ರಸ್ತೆ ಕಾಮಗಾರಿ ವಿಳಂಬವಾಗುತ್ತಿದೆ. ಮಳೆ ನಿಂತರೆ ಎಲ್ಲ ಕಾಮಗಾರಿಯ ಕೆಲಸಗಳಿಗೆ ವೇಗವಾಗಿ ನಡೆಯುತ್ತವೆ. ಒಂದು ತಿಂಗಳಲ್ಲಿ ನಗರದಲ್ಲಿ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡುವ ಕೆಲಸ ವೇಗ ಸಿಗಲಿದೆ ಎಂದು ಅವರು ಹೇಳಿದರು.

ಬೆಂಗಳೂರನ್ನು ಡಿ ಕಂಜೆಸ್ಡೆಡ್ ಮಾಡಬೇಕಿದೆ

ಬೆಂಗಳೂರನ್ನು ಡಿ ಕಂಜೆಸ್ಡೆಡ್ ಮಾಡಬೇಕಿದೆ

ದೇಶದಲ್ಲಿ ಅತೀ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು. ಹೊಟ್ಟೆಪಾಡಿಗಾಗಿ ದುಡಿಯಲು, ವೃತ್ತಿ ಅರಸಿ, ಇಲ್ಲಿ ಸುವ್ಯವಸ್ಥೆ, ವಾತಾವರಣ ಹೀಗೆ ಒಂದಲ್ಲ ಒಂದು ಕಾರಣಗಳಿಗೆ ಅತೀ ಹೆಚ್ಚು ಜನರು ರಾಜ್ಯದ ರಾಜಧಾನಿ ಬೆಂಗಳೂರು ನಗರಕ್ಕೆ ಅಗಮಿಸುತ್ತಿದ್ದಾರೆ. ಹೀಗಾಗಿ ನಗರದ ಜನಸಂಖ್ಯೆ ದಿನೇ ದಿನೆ ಬೆಳೆಯುತ್ತಿದೆ. ಇಲ್ಲಿ ಪ್ರತಿ ದಿನ 5,000 ವಾಹನಗಳ ನೋಂದಣಿ ಆಗುತ್ತಿದೆ. ಹೀಗೆ ಮುಂದುವರೆದರೆ ಮುಂದಿನ ಕೆಲವೇ ದಿನಗಳಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರರನ್ನು ಡಿ ಕಂಜೆಸ್ಡೆಡ್ ಮಾಡುವ ಅಗತ್ಯವಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.

ಜನರ ಮುಂದೆ ಅಭಿವೃದ್ಧಿಯ ಪ್ರಸ್ತಾವನೆ

ಜನರ ಮುಂದೆ ಅಭಿವೃದ್ಧಿಯ ಪ್ರಸ್ತಾವನೆ

ಆದಷಟು ಶೀಘ್ರವೇ ಬೆಂಗಳೂರಿನ ಅಭಿವೃದ್ಧಿ ಕುರಿತಾದ ಹೊಸ ಪ್ರಸ್ತಾವನೆಯೊಂದನ್ನು ಜನರ ಮುಂದೆ ಇಡುತ್ತೇವೆ. ಹಿಂದಿನ ಸರ್ಕಾರ ನಾಲ್ಕು ಅಂತಸ್ತಿನ ಮನೆ ಕಟ್ಟಿದರೆ ಅಕುಪೆನ್ಸಿ ಸರ್ಟಿಫಿಕೆಟ್ ಪಡೆಯಲು ಆಳುವವರ ಮನೆಗೆ ಹೋಗುವಂತೆ ಮಾಡಿದ್ದರು. ಬಿಜೆಪಿ ಅದನ್ನು ತೆಗೆದು ಹಾಕಿದೆ. ಮುಂದಿನ ದಿನಗಳಲ್ಲಿ ‌ಬೆಂಗಳೂರಿನ ಸಮಗ್ರ ಅಭಿವೃದ್ಧಿ ಚಿತ್ರಣ ಇಡುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ವಸತಿ ಸಚಿವ ವಿ.‌ಸೋಮಣ್ಣ, ಸಹಕಾರ ಸಚಿವ ಎಸ್. ಟಿ.‌ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+