ಸೆಮಿನರಿಯಲ್ಲಿ ರೇಪ್ : ಬಾಲಕಿ ಹೇಳಿಕೆ ಪಡೆದ ಪೊಲೀಸ್

ಬೆಂಗಳೂರು, ಜು. 18 : ಕ್ರೈಸ್ತ ಸನ್ಯಾಸಿನಿ ತರಬೇತಿಗಾಗಿ ಬಂದಿದ್ದ 15 ವರ್ಷದ ಬಾಲಕಿ ಮೇಲೆ ಬೆಂಗಳೂರಿನ ಹೆಣ್ಣೂರಿನಲ್ಲಿ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ. ಗುರುವಾರ ರಾತ್ರಿ ಹೆಣ್ಣೂರು ಪೊಲೀಸರು ಸೆಮಿನರಿಗೆ ಭೇಟಿ ನೀಡಿ, ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಬಾಲಕಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದ್ದು ಅತ್ಯಾಚಾರ ನಡೆದಿರುವುದು ಧೃಡಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ರೈಸ್ತ ಸನ್ಯಾಸಿನಿ ತರಬೇತಿಗಾಗಿ ಬಂದಿದ್ದ ಆಂಧ್ರಪ್ರದೇಶ ಮೂಲದ 15 ವರ್ಷದ ಬಾಲಕಿ ಮೇಲೆ ಪೆಪ್ಪರ್ ಸ್ಪ್ರೇ ಎರಚಿದ್ದ ದುಷ್ಕರ್ಮಿ­ಗಳು ಆಕೆಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾದ ಘಟನೆ ಗುರುವಾರ ಸಂಜೆ ಬೆಳಕಿಗೆ ಬಂದಿತ್ತು.

rape

ಆಂಧ್ರ ಪ್ರದೇಶದಿಂದ ಕ್ರೈಸ್ತ ಸನ್ಯಾಸಿನಿ ತರಬೇತಿಗಾಗಿ ಬಂದಿದ್ದ ಬಾಲಕಿ ಹೆಣ್ಣೂರು ಸಮೀಪದ ಸಿಸ್ಟರ್‌ ಆಫ್‌ ಹೋಲಿ ನೇಟಿವಿಟಿ' ಸೆಮಿನರಿಯಲ್ಲಿ ಮೂವರು ಸನ್ಯಾಸಿ­ಯರ ಜತೆ ಉಳಿದು­ಕೊಂಡಿದ್ದಳು. ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಸನ್ಯಾಸಿನಿಯರು ಬಟ್ಟೆ ತೊಳೆಯಲು ಮಹಡಿಗೆ ಹೋಗಿದ್ದ ಸಂದರ್ಭದಲ್ಲಿ ಸೆಮಿನರಿಗೆ ಬಂದ ದುಷ್ಕರ್ಮಿ­ಗಳು, ಬಾಗಿಲು ಬಡಿದ್ದಾರೆ. [ವಿಬ್ ಗಯಾರ್ ಪ್ರಕರಣ ವರದಿ ಕೇಳಿದ ಕೇಂದ್ರ]

ಬಾಗಿಲು ತೆಗೆಯುತ್ತಿದ್ದಂತೆ ಬಾಲಕಿ ಮುಖಕ್ಕೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿದ ಆರೋಪಿ­ಗಳು, ಆಕೆಯನ್ನು ಕಟ್ಟಡದ ನೆಲ­ಮಹಡಿಗೆ ಎಳೆದೊಯ್ದು ಅತ್ಯಾಚಾರ ಎಸಗಿ ಪರಾರಿಯಾಗಿದ್ದರು. ಅರ್ಧ ತಾಸಿನ ನಂತರ ಸನ್ಯಾಸಿನಿ­ಯರು ಕೆಳಗೆ ಬಂದಾಗ, ಬಾಲಕಿ ಅರೆಬೆತ್ತಲಾಗಿ ಪ್ರಜ್ಞಾಹೀನ ಸ್ಥಿತಿ­ಯಲ್ಲಿ ಬಿದ್ದಿದ್ದಳು. ಮುಖಕ್ಕೆ ನೀರು ಸಿಂಪಡಿಸಿ ಎಚ್ಚರಿಸಿ­ದಾಗ ಆಕೆ ಘಟನೆ ಬಗ್ಗೆ ವಿವರ ನೀಡಿದ್ದಳು.

ಗುರುವಾರ ಬಾಲಕಿ ಹೆಣ್ಣೂರು ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿತ್ತು. ತಕ್ಷಣ ಪೊಲೀಸರು ಬಾಲಕಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದರು, ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಮಿನರಿಗೆ ಭದ್ರತಾ ಸಿಬ್ಬಂದಿ ಇಲ್ಲ, ಸಿಸಿಟಿವಿ ಸಹ ಅಳವಡಿಸಿಲ್ಲ. ಆದ್ದರಿಂದ ಆರೋಪಿಗಳ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+