ಕರ್ನಾಟಕದಲ್ಲಿ ಇಂದು 149 ಕೊರೊನಾ ಕೇಸ್: ಮಂಡ್ಯದಲ್ಲಿ 71
ಬೆಂಗಳೂರು, ಮೇ 19: ಕರ್ನಾಟಕದಲ್ಲಿ ಇಂದು ಒಂದೇ ದಿನ ಬರೋಬ್ಬರಿ 149 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆಗಿಂತ ಇಂದು ಕೊರೊನಾ ಕೇಸ್‌ಗಳು ಹೆಚ್ಚಾಗಿದ್ದು, ಈವರೆಗೆ ಒಂದು ದಿನದಲ್ಲಿ ಪತ್ತೆಯಾದ ಅತಿ ಹೆಚ್ಚು ಕೇಸ್‌ಗಳಾಗಿವೆ.
Recommended Video
ನಿನ್ನೆ ಸಂಜೆ 5 ಗಂಟೆಯಿಂದ, ಇಂದು ಸಂಜೆ 5 ಗಂಟೆಗೆ 149 ಕೊರೊನಾ ಪ್ರಕರಣಗಳು ದಾಖಲಾಗಿವೆ. ಮಂಡ್ಯದಲ್ಲಿ ಇಂದು ಕೊರೊನಾ ಅಟ್ಟಹಾಸ ನಡೆಸಿದ್ದು, ಒಂದೇ ದಿನ 71 ಜನರಿಗೆ ಕೊರೊನಾ ಸೋಂಕು ತಲುಪಿದೆ. ಮಂಡ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 160ಕ್ಕೆ ಏರಿಕೆಯಾಗಿದೆ. ಮುಂಬೈನಿಂದ ರಾಜ್ಯಕ್ಕೆ ಮರಳುತ್ತಿರುವವರಿಂದ ಸೋಂಕು ಈ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಇಂದು ಬೆಂಗಳೂರು ನಗರ 6, ಕಲಬುರಗಿ 13, ದಾವಣಗರೆ 22, ಬಾಗಲಕೋಟೆ 5, ಉತ್ತರ ಕನ್ನಡ 4, ಹಾಸನ 3, ಶಿವಮೊಗ್ಗ 10, ಉಡುಪಿ 4 ಕೇಸ್‌ಗಳು ಇಂದು ಪತ್ತೆಯಾಗಿದೆ. ಇಂದು ಅತಿ ಹೆಚ್ಚು ಪ್ರಕರಣಗಳು ಈ ಜಿಲ್ಲೆಗಳಲ್ಲಿ ಕಂಡು ಬಂದಿದೆ.

ಇಂದಿಗೆ ರಾಜ್ಯದಲ್ಲಿನ ಒಟ್ಟು ಸೋಂಕಿರ ಸಂಖ್ಯೆ 1395ಕ್ಕೆ ತಲುಪಿದೆ. 40 ಸೋಂಕಿತರು ಸಾವನಪ್ಪಿದ್ದಾರೆ. 543 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 811 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ನಿನ್ನೆಯಿಂದ ಕರ್ನಾಟಕದಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ಒಂದೇ ದಿನ ಕಂಡು ಬರುತ್ತಿವೆ.












Click it and Unblock the Notifications