12 ವರ್ಷದ ಬಾಲಕ, ವಿವಿಪುರಂ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌

ಬೆಂಳೂರು, ಜು.24: ನಗರದ ವಿವಿಪುರಂ ಪೊಲೀಸ್‌ ಠಾಣೆಗೆ 12 ವರ್ಷದ ಬಾಲಕ ಇನ್‌ಸ್ಪೆಕ್ಟರ್‌ ಆಗಿ ಮಂಗಳವಾರ ನೇಮಕಗೊಂಡಿದ್ದಾರೆ. ಏನಪ್ಪಾ ಈ ಪುಟ್ಟ ಬಾಲಕ ಹೇಗೆ ಇನ್‌ಸ್ಪೆಕ್ಟರ್‌ ಆದ ಅಂತ ಎಲ್ಲರೂ ಯೋಚನೆ ಮಾಡುತ್ತಿರಬಹುದು.ಅದು ಹೇಗೆ ಎಂದು ಮುಂದೆ ಓದಿ..

12 ವರ್ಷದ ಪುಟ್ಟ ಬಾಲಕ ಶಶಾಂಕ್‌ ಇದೀಗ ವಿವಿಪುರಂ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌, ಶಶಾಂಕ್‌ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ, ಆತನ ಮಹದಾಸೆ ಆತ ಪೊಲೀಸ್‌ ಆಗಬೇಕು ಎಂದು, ಮನೆಯಲ್ಲಾಗಲಿ, ಸಂಬಂಧಿಕರಾಗಲಿ ಯಾರೇ ಕೇಳಿದರು ತಾನು ದೊಡ್ಡವನಾದ ಮೇಲೆ ಪೊಲೀಸ್‌ ಆಗುತ್ತೇನೆ ಅಂತಿದ್ದ ಬಾಲಕ, ಆದರೆ ದುರ್ವಿಧಿ ನೋಡಿ ಹೇಗಿದೆ, ಆತನಿಗೆ ಮಾರಣಾಂತಿಕ ಕಾಯಿಲೆಯನ್ನು ನೀಡಿ ಆತನ ಕನಸನ್ನು ಭಗ್ನಗೊಳಿಸಿದೆ.

ಆದರೆ ಅತನ ಬೇಡಿಕೆ ಇದೀಗ ನೆರವೇರಿದೆ, ಆತನ ಒಂದು ಗಂಟೆಯ ವಿವಿಪುರಂ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಆಗಿ ಅಧಿಕಾರ ಸ್ವೀಕರಿಸಿದ್ದಾನೆ.ಆರೋಗ್ಯ ಸಮಸ್ಯೆಯಿಂದಾಗಿ ಸರಿಯಾಗಿ ಶಾಲೆಗೆ ಹೋಗಲೂ ಆಗುತ್ತಿಲ್ಲ. ಹೀಗಾಗಿ ಆತನ ಬಹುದಿನಗಳ ಕನಸನ್ನು ನನಸಾಗಿಸಲು ಮೇಕ್‌ ಎ ವಿಶ್‌ ಫೌಂಡೇಷನ್‌ ಹಾಗೂ ವಾಣಿವಿಲಾಸ ಆಸ್ಪತ್ರೆ ಮುಂದಾಗಿದ್ದು, ಬಾಲಕನಿಗೆ ತನ್ನ ಆಸೆಯಂತೆ ಇನ್ಸ್‌ಪೆಕ್ಟರ್‌ ಆಗುವ ಅವಕಾಶ ದೊರಕಿದೆ.

12 year old boy became PoLice Inspector

ಬಾಲಕ ಶಶಾಂಕ್‌ಗೆ ಸೋಮವಾರವೇ ಬ್ಯಾಜ್ಡ್‌ನೊಂದಿಗೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಮವಸ್ತ್ರ ನೀಡಲಾಗಿದೆ. ಬೆಳಗ್ಗೆ ಇನ್ಸ್‌ಪೆಕ್ಟರ್‌ ಸಮವಸ್ತ್ರ ಧರಿಸಿ ಕರ್ತವ್ಯಕ್ಕೆ ಹಾಜರಾಗಲು ಸಜ್ಜಾಗಿರುವ ಬಾಲಕನನ್ನು ಠಾಣೆಗೆ ಕರೆದೊಯ್ಯಲು 8.30ರ ಸುಮಾರಿಗೆ ವಾಣಿವಿಲಾಸ ಆಸ್ಪತ್ರೆಗೆ ಪೊಲೀಸ್‌ ಜೀಪ್‌ ಬಂದಿತ್ತು.

ಜೀಪ್‌ ಏರಿ ಸಾಗುವ ಇನ್ಸ್‌ಪೆಕ್ಟರ್‌ ಶಶಾಂಕ್‌ ನೇರ ಸೆಂಟ್ರಲ್‌ ಪೊಲೀಸ್‌ ಠಾಣೆಗೆ ಆಗಮಿಸಿದ್ದರು. ಈ ವೇಳೆ ಠಾಣೆಯ ಪೊಲೀಸ್‌ ಸಿಬ್ಬಂದಿ ಸೆಲ್ಯೂಟ್‌ ಹೊಡೆಯುವ ಮೂಲಕ ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ.

ಚಿಂತಾಮಣಿ ಮೂಲದ ಮುನಿರಾಜ್‌ ಮತ್ತು ಸುಜಾತ ದಂಪತಿಗೆ ಶಶಾಂಕ್‌ ಒಬ್ಬನೇ ಮಗ. ಸ್ಥಳೀಯ ಸರಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಬಾಲಕನಿಗೆ 5 ತಿಂಗಳ ಮಗುವಿರುವಾಗಲೇ ತಲಸ್ಸೇಮಿಯಾ ಸಮಸ್ಯೆ ಕಾಣಿಸಿಕೊಂಡಿತು. ಕಳೆದ ಎರಡು ವರ್ಷಗಳಿಂದ ಮಧುಮೇಹವೂ ಕಾಣಿಸಿಕೊಂಡಿದ್ದು, ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್‌ಸ್ಪೆಕ್ಟರ್‌ ಆಗುವ ಕನಸನ್ನು ಹೊಂದಿದ್ದ ಈತ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸುವ ಬಯಕೆ ಹೊಂದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+