ಸ್ವಾತಂತ್ರ್ಯ ಹೋರಾಟಗಾರ ಎಚ್‌ಎಸ್ ದೊರೆಸ್ವಾಮಿ ಕೊರೊನಾ ಸೋಂಕಿನಿಂದ ಗುಣಮುಖ
ಬೆಂಗಳೂರು, ಮೇ 12: ಸ್ವಾತಂತ್ರ್ಯ ಹೋರಾಟಗಾರ 104 ವರ್ಷದ ಹಿರಿಯ ಜೀವ ಎಚ್‌ಎಸ್ ದೊರೆಸ್ವಾಮಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.
ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ವೈದ್ಯರು ಮತ್ತು ಸಿಬ್ಬಂದಿ ದೊರೆಸ್ವಾಮಿ ಅವರ ಆರೈಕೆ ಮಾಡಿದ್ದಾರೆ.
ಕೊರೊನಾ ಅಲೆ ಆರ್ಭಟ ನಿಧಾನವಾಗಿ ತಗ್ಗುತ್ತಿದೆ, ದೇಶದಲ್ಲಿ ಮೂರು ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ.

ನಾಡಿನ ಹಿರಿಯ ಚೇತನ, ಸ್ವಾತಂತ್ರ್ಯ ಹೋರಾಟಗಾರ, ಎಚ್.ಎಸ್. ದೊರೆಸ್ವಾಮಿ ಅವರು ತಮ್ಮ 104ನೇ ವಯಸ್ಸಿನಲ್ಲೂ ಕೊರೊನಾ ಗೆದ್ದು, ಮಾದರಿಯಾಗಿದ್ದಾರೆ. ಅವರ ಈ ಭರವಸೆ ಎಲ್ಲರಿಗೂ ಸ್ಪೂರ್ತಿ ಆಗಲಿ. ಶುಭ ಹಾರೈಕೆಗಳು ಹಿರಿಯ ಜೀವಕ್ಕೆ.
ಕೋವಿಡ್‌ಗೆ ಭಯ ಪಡದಿರಿ. ಚಿಕಿತ್ಸೆಯ ಜತೆಗೆ ಆತ್ಮ ವಿಶ್ವಾಸ ನಿಮ್ಮೊಂದಿಗಿರಲಿ ಎಂದು ಸಂಸದೆ ಸುಮಲತಾ ಅಂಬರೀಶ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
Recommended Video
#Covid19Updates Karnataka: ರಾಜ್ಯದಲ್ಲಿ ಇಂದು 39998 ಜನರಿಗೆ ಸೋಂಕು- 24ಗಂಟೆಯಲ್ಲಿ 517 ಜನರು ಮಹಾಮಾರಿಗೆ ಬಲಿ | Oneindia Kannada












Click it and Unblock the Notifications