Inspiring Journey: ಇದು ರವೆ ಇಡ್ಲಿ ಸೃಷ್ಟಿಸಿದ ಬೆಂಗಳೂರಿನ ಹೆಮ್ಮೆಯ MTR ಬ್ರ್ಯಾಂಡ್‌ನ 100 ವರ್ಷಗಳ ಯಶೋಗಾಥೆ

ಬೆಂಗಳೂರಿನ ಇತಿಹಾಸದ ಪುಟಗಳನ್ನ ಒಮ್ಮೆ ತಿರುವಿ ಹಾಕಿದರೆ, ಅದರಲ್ಲಿ ಮಾವಳ್ಳಿ ಟಿಫಿನ್ ರೂಮ್ಸ್ ಅಂದರೆ ಎಂಟಿಆರ್ ಚಾಪ್ಟರ್‌ ಕೂಡ ಕಾಣಸಿಗುತ್ತದೆ. 1924ರಲ್ಲಿ ಉಡುಪಿ ಸಮೀಪದ ಸಣ್ಣ ಹಳ್ಳಿಯಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದ ಮೂವರು ಸಹೋದರರಾದ ಪರಮೇಶ್ವರ, ಗಣಪ್ಪಯ್ಯ ಮತ್ತು ಯಜ್ಞನಾರಾಯಣ ಮಯ್ಯ ಅವರು ಸೇರಿ ಲಾಲ್‌ಬಾಗ್ ಕೋಟೆ ರಸ್ತೆಯಲ್ಲಿ ಪುಟ್ಟದೊಂದು ಹೋಟೆಲ್‌ ಪ್ರಾರಂಭಿಸಿದ್ರು.

ಕೇವಲ ಕಾಫಿ ಮತ್ತು ಇಡ್ಲಿ ಮಾರಾಟ ಮಾಡುತ್ತಿದ್ದ ಆ ಪುಟ್ಟ ಹೋಟೆಲ್‌ನ ಹೆಸರು ಬ್ರಾಹ್ಮಿನ್ ಕಾಫಿ ಕ್ಲಬ್. ಇದೀಗ ಒಂದು ಶತಮಾನದ ಸುದೀರ್ಘ ಪಯಣವನ್ನ ಪೂರೈಸಿರುವ ಈ ಸಂಸ್ಥೆ, ಗುಣಮಟ್ಟ ಹಾಗೂ ಸ್ವಾದಕ್ಕೆ ಮತ್ತೊಂದು ಹೆಸರಾಗಿ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ.

The 100-Year Inspiring Journey of Bengaluru s MTR From a Small Coffee Club to a Global Brand

1929ರಲ್ಲಿ ಪರಮೇಶ್ವರ ಅವರ ನಿಧನದ ನಂತರ, ಹೋಟೆಲ್ ಜವಾಬ್ದಾರಿ ಯಜ್ಞಪ್ಪ ಎಂದೇ ಕರೆಯಲ್ಪಡುತ್ತಿದ್ದ ಯಜ್ಞನಾರಾಯಣ ಮಯ್ಯ ಅವರ ಹೆಗಲೇರಿತು. 1951ರಲ್ಲಿ ಯಜ್ಞಪ್ಪ ಅವರು ಅಂದಿನ ಕಾಲದಲ್ಲಿ ಯಾರೂ ಊಹಿಸಲಾಗದ ದಿಟ್ಟ ನಿರ್ಧಾರವೊಂದನ್ನ ತೆಗೆದುಕೊಂಡರು. ಹೋಟೆಲ್ ಉದ್ಯಮ ಹಾಗೂ ಸ್ವಚ್ಛತೆಯ ಬಗ್ಗೆ ಅಧ್ಯಯನ ಮಾಡಲು ಅವರು ನೇರವಾಗಿ ಯುರೋಪ್‌ಗೆ ತೆರಳಿದರು.

ಅಲ್ಲಿಂದ ಮರಳಿದ ಬಳಿಕ, ಪಾತ್ರೆಗಳ ಸ್ಟೆರಿಲೈಸೇಶನ್, ಗ್ರಾಹಕರಿಗೆ ಕಾಣುವಂತಹ ಓಪನ್ ಕಿಚನ್ ಹಾಗೂ ಉತ್ತಮ ನೈರ್ಮಲ್ಯದ ಮಾನದಂಡಗಳನ್ನ ತಮ್ಮ ಹೋಟೆಲ್‌ನಲ್ಲಿ ಅಳವಡಿಸಿದರು. 1960ರಲ್ಲಿ ಲಾಲ್‌ಬಾಗ್‌ ರಸ್ತೆಗೆ ಸ್ಥಳಾಂತರಗೊಂಡ ಈ ಹೋಟೆಲ್, 'ಮಾವಳ್ಳಿ ಟಿಫಿನ್ ರೂಮ್ಸ್' (ಎಮ್‌ಟಿಆರ್‌) ಎಂದು ಮರುನಾಮಕರಣಗೊಂಡಿತು.

ಎರಡನೇ ಮಹಾಯುದ್ಧದ ವೇಳೆ ಹುಟ್ಟಿದ ರವೆ ಇಡ್ಲಿ

ಎಂಟಿಆರ್ ಹೋಟೆಲ್‌ನ ಅತ್ಯಂತ ಜನಪ್ರಿಯ ಖಾದ್ಯವಾದ ರವೆ ಇಡ್ಲಿ ಹುಟ್ಟಿದ್ದೆ ಒಂದು ಅನಿವಾರ್ಯತೆಯ ಸಂಧರ್ಭದಲ್ಲಿ. ಹೌದು, ಏಕೆಂದರೆ ಎರಡನೇ ಮಹಾಯುದ್ಧದ ಸಮಯದಲ್ಲಿ ಅಕ್ಕಿಯ ತೀವ್ರ ಅಭಾವ ಎದುರಾಗಿತ್ತು. ಸಾಂಪ್ರದಾಯಿಕ ಇಡ್ಲಿ ಮಾಡಲು ಅಕ್ಕಿ ಇಲ್ಲದಿದ್ದಾಗ, ಎಂಟಿಆರ್ ಬಾಣಸಿಗರು (ಅಡುಗೆ ಭಟ್ಟರು) ಹುರಿದ ರವೆಯನ್ನ ಬಳಸಿ ಇಡ್ಲಿ ತಯಾರಿಸುವ ಪ್ರಯೋಗ ಮಾಡಿದರು. ಈ ಪ್ರಯೋಗ ಯಶಸ್ವಿಯಾಗಿದ್ದಲ್ಲದೆ, ಆ ರವೆ ಇಡ್ಲಿ ಇಂದು ದಕ್ಷಿಣ ಭಾರತದ ಪ್ರಮುಖ ಉಪಾಹಾರವಾಗಿ ಮನೆಮಾತಾಗಿದೆ.

ಗುಣಮಟ್ಟದಲ್ಲಿ ರಾಜಿಯಾಗದೇ ಹೋರಾಟ

1975ರ ತುರ್ತು ಪರಿಸ್ಥಿತಿಯ ವೇಳೆ, ಸರ್ಕಾರವು ಆಹಾರ ನಿಯಂತ್ರಣ ಕಾಯ್ದೆಯಡಿ ನಿಗದಿತ ಕಡಿಮೆ ಬೆಲೆಗೆ ಆಹಾರ ಮಾರಾಟ ಮಾಡುವಂತೆ ಬೆಂಗಳೂರಿನ ಪ್ರಮುಖ ಹೋಟೆಲ್‌ಗಳಿಗೆ ಆದೇಶಿಸಿತ್ತು. ಕೆಲವು ಹೋಟೆಲ್‌ಗಳು ಕಳಪೆ ಸಾಮಗ್ರಿ ಬಳಸಿ ಕಡಿಮೆ ಬೆಲೆಗೆ ಆಹಾರ ನೀಡಿದವು.

ಆದರೆ, ಲಾಭಕ್ಕಾಗಿ ಗುಣಮಟ್ಟವನ್ನ ಕಡಿಮೆ ಮಾಡಿಕೊಳ್ಳಲು ಒಪ್ಪದ ಎಂಟಿಆರ್ ಆಡಳಿತ ಮಂಡಳಿ, ಸತತ 16 ದಿನಗಳ ಕಾಲ ತಮ್ಮ ಹೋಟೆಲ್‌ನ ಹೊರಗಡೆ ಬೋರ್ಡ್ ಹಾಕಿ, ತಮಗಾಗುತ್ತಿರುವ ಆರ್ಥಿಕ ನಷ್ಟವನ್ನ ಸಾರ್ವಜನಿಕವಾಗಿ ಪ್ರದರ್ಶಿಸುತ್ತಲೇ ಅದೇ ಅತ್ಯುತ್ತಮ ಗುಣಮಟ್ಟದ ಆಹಾರವನ್ನು ಬಡಿಸಿತು. 16ನೇ ದಿನದಂದು ಅನಿವಾರ್ಯವಾಗಿ ಹೋಟೆಲ್ ಬಾಗಿಲು ಮುಚ್ಚಿತು.

ಹೋಟೆಲ್ ಮುಚ್ಚಿದ 6 ವರ್ಷಗಳ ಕಾಲ ತಮ್ಮ ಸಿಬ್ಬಂದಿಯ ಉದ್ಯೋಗವನ್ನು ಉಳಿಸಿಕೊಳ್ಳಲು, ಮಯ್ಯ ಕುಟುಂಬವು ಮಸಾಲೆ ಪುಡಿ ಹಾಗೂ ಇತರೆ ಉತ್ಪನ್ನಗಳನ್ನ ತಯಾರಿಸಿ ಪಕ್ಕದ ಕಿರಾಣಿ ಅಂಗಡಿಯಲ್ಲಿ ಮಾರಾಟ ಮಾಡಲು ಮುಂದಾಯಿತು. ಈ ಅನಿವಾರ್ಯತೆಯ ನಿರ್ಧಾರವೇ 'ಎಂಟಿಆರ್ ಫುಡ್ಸ್' ಎಂಬ ಬೃಹತ್ ಸಾಮ್ರಾಜ್ಯದ ಉದಯಕ್ಕೆ ಕಾರಣವಾಯಿತು.

1981ರಲ್ಲಿ ಹೋಟೆಲ್ ಮತ್ತೆ ಅದೇ ಕಟ್ಟಡದಲ್ಲಿ, ಅದೇ ಗುಣಮಟ್ಟದೊಂದಿಗೆ ಆರಂಭವಾಯಿತು. ಮತ್ತೊಂದೆಡೆ, ಯಜ್ಞಪ್ಪ ಅವರ ಪುತ್ರ ಸದಾನಂದ ಮಯ್ಯ ಅವರ ನೇತೃತ್ವದಲ್ಲಿ ಬೆಳೆದ 'ಎಂಟಿಆರ್ ಫುಡ್ಸ್', 2007ರಲ್ಲಿ ನಾರ್ವೆ ಮೂಲದ ಓರ್ಕ್ಲಾ ಕಂಪನಿಗೆ ಸುಮಾರು 80 ದಶಲಕ್ಷ ಡಾಲರ್‌ಗೆ ಮಾರಾಟವಾಯಿತು.

ಇಂದು ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುವ ಎಂಟಿಆರ್ ಪ್ಯಾಕೆಟ್‌ಗಳು ವಿದೇಶಿ ಕಂಪನಿಯ ಒಡೆತನದಲ್ಲಿದ್ದರೂ, ಲಾಲ್‌ಬಾಗ್ ರಸ್ತೆಯಲ್ಲಿರುವ ಮೂಲ ಎಂಟಿಆರ್ ಹೋಟೆಲ್ ಮಾತ್ರ ಇಂದಿಗೂ ಮಯ್ಯ ಕುಟುಂಬದವರೇ ನಡೆಸುತ್ತಿದ್ದಾರೆ. ಯಾವುದೇ ಬಂಡವಾಳವಿಲ್ಲದೆ ಆರಂಭವಾದ ಒಂದು ಪುಟ್ಟ ಕಾಫಿ ಕ್ಲಬ್, ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳದೆ 100 ವರ್ಷಗಳ ಕಾಲ ಇತಿಹಾಸ ನಿರ್ಮಿಸಿರುವುದು ನಿಜಕ್ಕೂ ಅದ್ಭುತ ಸಾಧನೆಯಲ್ಲವೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+