ಬೆಂಗಳೂರಲ್ಲಿ ಪ್ರತಿ ಕಿ.ಮೀ ಒಂದರಂತೆ ನಂದಿನಿ ಪಾರ್ಲರ್

Recommended Video

      ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ನಂದಿನಿ ಪಾರ್ಲರ್ ಗಳನ್ನ ತೆರೆಯಲು ಕೆ ಎಂ ಎಫ್ ನಿರ್ಧಾರ | Oneindia Kannada

      ಬೆಂಗಳೂರು, ಅಕ್ಟೋಬರ್ 9: ನಗರದ ಪ್ರಮುಖ ಪ್ರದೇಶಗಳು ಅಥವಾ ಪ್ರಮುಖ ರಸ್ತೆಗಳಲ್ಲಿ ಮಾತ್ರ ನಂದಿನಿ ಉತ್ಪನ್ನಗಳು ದೊರೆಯುತ್ತಿದ್ದವು. ಆದರೆ ಇನ್ನುಮುಂದೆ ಪ್ರತಿ ಕಿ.ಮೀ ಒಂದರಂತೆ 100 ನಂದಿನಿ ಪಾರ್ಲರ್ ಗಳನ್ನು ತೆರೆಯಲು ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿರ್ಧರಿಸಿದೆ.

      ಬೆಂಗಳೂರು ಜನತೆಗೆ ದಿನದ 24 ಗಂಟೆಯೂ ನಂದಿನಿ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ಒಕ್ಕೂಟ ನಿರ್ಧರಿಸಿದ್ದು, ಕನಕಪುರ, ಉತ್ತರಹಳ್ಳಿ, ಆನೇಕಲ್, ಜಯನಗರ, ಶಿವಾಜಿನಗರ, ರಾಜಾಜಿನಗರ, ಸರ್ಜಾಪುರ, ಮಹಾಲಕ್ಷ್ಮೀ ಲೇಔಟ್, ಮೈಸೂರು ರಸ್ತೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ಸುಮಾರು 1800 ಕ್ಕೂ ಹೆಚ್ಚು ಏಜೆನ್ಸಿಗಳು ನಂದಿನಿ ಉತ್ಪನ್ನಗಳ ಮಾರಾಟದಲ್ಲಿ ತೊಡಗಿವೆ.

      ಆದರೂ ಕೂಡ ಬೆಂಗಳೂರಿನ ಸಾಕಷ್ಟು ಕಡೆಗಳಲ್ಲಿ ತಮಿಳು ಹಾಗೂ ತೆಲುಗು ಜನರು ಹೆಚ್ಚಿರುವ ಪ್ರದೇಶದಲ್ಲಿ ಆಯಾ ರಾಜ್ಯದ ಆರೋಗ್ಯ, ದೊಡ್ಲ, ಹೆರಿಟೇಜ್ ಹಾಲುಗಳನ್ನು ಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

      100 more Nandini parlours in Bengaluru

      ಹಾಗಾಗಿ ನಗರದಲ್ಲಿ 100 ನಂದಿನಿ ಪಾರ್ಲರ್ ಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಬಿಬಿಎಂಪಿ ಕಟ್ಟಡಗಳು, ಸರ್ಕಾರಿ ಜಾಗಗಳಲ್ಲಿ ಈಗಾಗಲೇ ನಂದಿನಿ ಪಾರ್ಲರ್‌ಗಳನ್ನು ತೆರೆಯಲಾಗಿದೆ. ಜನ ಸಂದಣಿ ಜಾಗಗಳು, ವ್ಯಾಪಾರಸ್ಥ ಪ್ರದೇಶಗಳಲ್ಲಿ ಖಾಸಗಿ ಅಂಗಡಿಗಳನ್ನು ಬಾಡಿಗೆ ಪಡೆದು ನಂದಿನಿ ಪಾರ್ಲರ್ ತೆರೆಯಲು ಬಮೂಲ್ ತೀರ್ಮಾನಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+