ಆನಂದ ಚೋಪ್ರಾ ಕೊಲೆ ಯತ್ನ ಆರೋಪಿಗಳಿಗೆ ಚಪ್ಪಲಿ ತೋರಿಸಿದ ಮಹಿಳೆಯರು

Recommended Video

      ಆನಂದ ಚೋಪ್ರಾ ಕೊಲೆ ಯತ್ನ ಆರೋಪಿಗಳಿಗೆ ಚಪ್ಪಲಿ ತೋರಿಸಿದ ಮಹಿಳೆಯರು

      ಬೆಳಗಾವಿ, ಆಗಸ್ಟ್.03: ಸವದತ್ತಿಯ ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ಕೊಲೆ ಯತ್ನ ಪ್ರಕರಣದ ಆರೋಪಿಗಳಿಗೆ ಮಹಿಳೆಯರು ಚಪ್ಪಲಿ ತೋರಿಸಿ ಹಿಡಿ ಶಾಪ ಹಾಕಿರುವ ಘಟನೆ ಸವದತ್ತಿ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಇಂದು ಶುಕ್ರವಾರ ನಡೆದಿದೆ.

      ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲು ಬಂದಾಗ್ ಚಪ್ಪಲಿ ಪ್ರದರ್ಶನ ಮಾಡಲಾಗಿದೆ. ಆರೋಪಿಗಳಾದ ಮಂಜು ಪಾಚಂಗಿ, ಸುನೀಲ್ ತಾರಿಹಾಳ, ಬಸವರಾಜ ಅರಮನೆಗೆ ಮಹಿಳೆಯರು ಹಿಡಿಶಾಪ ಹಾಕಿದ್ದಾರೆ.

      ಹಣಕಾಸಿನ ವಿಚಾರದಲ್ಲಿ ಮನಸ್ತಾಪವಾಗಿ ಕೊಲೆಗೆ ಯತ್ನಿದ ಆರೋಪ ಮೇಲೆ ಆರೋಪಿಗಳನ್ನು ಸವದತ್ತಿ ಪೊಲೀಸರು ಬಂಧಿಸಿದ್ದಾರೆ. ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಈ ಕೊಲೆ ಯತ್ನ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಕಳೆದ ವಾರ ರಾತ್ರಿ 10.30 ಸುಮಾರು ಸವದತ್ತಿಯಲ್ಲಿ ಆನಂದ ಚೋಪ್ರಾ ಹತ್ಯೆಗೆ ಯತ್ನ ನಡೆಸಿದ್ದರು.

      Women show slippers for those involved in the murder attempt case in Congress leader

      ಆನಂದ ಚೋಪ್ರಾ ಅವರ ಮೇಲೆ ಮಾರಕಾಸ್ತ್ರಗಳಿಂದ ಆರೋಪಿಗಳು ಹಲ್ಲೆ ನಡೆಸಿ ಪರಾರಿ ಆಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆನಂದ ಚೋಪ್ರಾ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಅದೃಷ್ಟವಷಾತ್ ಆನಂದ್ ಚೋಪ್ರಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+