ಬೆಳಗಾವಿಯಲ್ಲಿ ಅಂತ್ಯ ಸಂಸ್ಕಾರದ ವೇಳೆ ಎದ್ದು ಕುಳಿತ ಮಹಿಳೆ: ಏನಿದು ಪವಾಡ
ಬೆಳಗಾವಿ, ಜನವರಿ 9: ಅಂತ್ಯಸಂಸ್ಕಾರದ ವೇಳೆ ಮಹಿಳೆಯೊಬ್ಬರು ಎದ್ದುಕುಳಿತ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮಹಿಳೆ ಮೃತಪಟ್ಟಿದ್ದಾರೆ ಎಂದು ಅಂತ್ಯಸಂಸ್ಕಾರದ ಎಲ್ಲಾ ವಿಧಿ ವಿಧಾನಗಳನ್ನು ಮಾಡಲಾಗುತ್ತಿತ್ತು. ಮಾಲು ಯಲ್ಲಪ್ಪ ಎಂಬುವವರು ಮೆದುಳು ಸಂಬಂಧಿ ಕಾಯ್ದೆಯಿಂದ ಬಳಲುತ್ತಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಆಕೆ ಹೆಚ್ಚು ದಿನ ಬದುಕುವುದಿಲ್ಲ ಮನೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದರು.
ಹೀಗೆ ಆಂಬುಲೆನ್ಸ್‌ನಲ್ಲಿ ಮನೆಗೆ ಕೊಂಡೊಯ್ಯುತ್ತಿದ್ದ ವೇಳೆ ಚಲನವಲನವಿಲ್ಲದ ಕಾರಣ ಆಕೆ ಸತ್ತಿದ್ದಾರೆ ಎಂದು ಭಾವಿಸಿ, ನೆಂಟರಿಷ್ಟರಿಗೆಲ್ಲಾ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಎಲ್ಲಾ ಅಂತಿಮ ವಿಧಿ ವಿಧಾನಗಳನ್ನು ನಡೆಸುತ್ತಿರುವ ವೇಳೆ ಆಕೆ ಎದ್ದು ಕುಳಿತಿದ್ದಾಳೆ. ಸೌದತ್ತಿ ಯೆಲ್ಲಮ್ಮನ ಪವಾಡ ಇದು ಎಂದು ಹೇಳುತ್ತಿದ್ದಾರೆ.












Click it and Unblock the Notifications