ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಲ್ವರು ಪುತ್ರಿಯರೊಂದಿಗೆ ತಾಯಿ ಆತ್ಮಹತ್ಯೆ

|
Google Oneindia Kannada News

ಬೆಳಗಾವಿ, ಸೆ.20 : ನಾಲ್ಕು ಮಕ್ಕಳನ್ನು ಬಾವಿಗೆ ತಳ್ಳಿದ ತಾಯಿ ತಾನು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹುಕ್ಕೇರಿ ತಾಲೂಕಿನ ರಾಶಿಂಗ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ರಾಶಿಂಗ ಗ್ರಾಮದ ನಿವಾಸಿ ಸುನೀತಾ ಏಕನಾಥ ಆಗಮ (35), ನಾಲ್ವರು ಪುತ್ರಿಯರಾದ ಆರತಿ(8), ಸಂಜನಾ(6), ಅಮೃತಾ(3) ಹಾಗೂ 6 ತಿಂಗಳ ನಿಶಿಗಂಧಾರನ್ನು ಮೃತಪಟ್ಟವರು ಎಂದು ಗುರುತಿಸಲಾಗಿದೆ.

Belgaum

ಗುರುವಾರ ಬೆಳಗ್ಗೆ ಮನೆಯಿಂದ ಆಧಾರ್ ಕಾರ್ಡ್ ಮಾಡಿಸಿಕೊಂಡು ಬರುವುದಾಗಿ ಹೊರಟ ಸುನೀತಾ, ಶಾಲೆಗೆ ಹೋಗಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ. ನಂತರ ಮನೆಯಲ್ಲಿದ್ದ ಎರಡು ಮಕ್ಕಳೊಂದಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಶಿಂಗ ಗ್ರಾಮದ ಹೊರವಲಯದಲ್ಲಿರುವ ಕೃಷ್ಣಾ ಅವರ ತೋಟದ ಬಾವಿಗೆ ಮಕ್ಕಳನ್ನು ತಳ್ಳಿರುವ ಸುನೀತಾ, ನಂತರ ತಾನು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುರುವಾರ ಸಂಜೆ ತೋಟಕ್ಕೆ ಹೋದ ಜನರು ಬಾವಿಯಲ್ಲಿ ಒಂದು ಶವ ನೋಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರು ಬಾವಿಗೆ ಇಳಿದಾಗ ಐದು ಶವಗಳು ದೊರಕಿದ್ದು, ತಕ್ಷಣ ಸಂಕೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸುನೀತಾ ಪತಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

English summary
A woman drowned her four daughters in a well and committed suicide by jumping into it at Rasinga village in Hukkeri taluk in the Belgaum district. The incident, came to light on Thursday, September 19. The deceased have been identified as Sunita Eknath Agam (32), her daughters Arati (10), Sanjana (7), Amruta (4) and Nishigandha (six months).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X