ಸಂಕೇಶ್ವರದ ಸಮೀಪ ಊರೊಳಗೆ ಕಾಣಿಸಿಕೊಂಡ ಕಾಡುಕೋಣಗಳು
ಬೆಳಗಾವಿ, ಏಪ್ರಿಲ್ 21: ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ನಗರಗಳಿಂದಿಡಿದು ಗ್ರಾಮಗಳೂ ಬಿಕೋ ಎನ್ನುತ್ತಿವೆ. ಮನುಷ್ಯರ ಓಡಾಟವೂ ಕಡಿಮೆಯಾಗಿರುವುದರಿಂದ ಪ್ರಾಣಿಗಳಿಗೆ ಅಡೆತಡೆಯಿಲ್ಲದಂತಾಗಿದೆ. ಕಾಡಂಚಿನ ಗ್ರಾಮಗಳಲ್ಲಂತೂ ಜನರ ಓಡಾಟವಿಲ್ಲದೇ, ವಾಹನಗಳ ಗದ್ದಲವಿಲ್ಲದೇ ಕಾಡುಪ್ರಾಣಿಗಳು ಸ್ವಚ್ಛಂದವಾಗಿ ಓಡಾಡುವಂತಾಗಿವೆ.
ಇಂದು ಬೆಳಗಾವಿಯ ಸಂಕೇಶ್ವರ ಸಮೀಪದ ಹರಗಾಪುರ ಬಳಿಯೂ ಬೆಳ್ಳಂಬೆಳಿಗ್ಗೆ ಮೂರು ಕಾಡುಕೋಣಗಳು ಕಾಣಿಸಿಕೊಂಡಿವೆ.

ಸೂರ್ಯೋದಯವಾಗುತ್ತಿದ್ದಂತೆಯೇ ಹರಗಾಪುರ ಗ್ರಾಮದ ಬಳಿ ಮೂರು ಕಾಡುಕೋಣಗಳು ಕಾಣಿಸಿಕೊಂಡಿದ್ದು, ಅವನ್ನು ನೋಡಿ ಗ್ರಾಮದ ಜನರು ಗಾಬರಿಯಾಗಿದ್ದರು. ಇನ್ನು ಕೆಲವರು ಕಾಡುಕೋಣ ಕಂಡು ಚೀರಾಡಿ, ಕೂಗಾಡಿ ಈ ಕಾಡುಕೋಣಗಳನ್ನು ಬೆದರಿಸುವ ಕಾರ್ಯದಲ್ಲಿ ತೊಡಗಿದ್ದರು. ಎಷ್ಟೋ ಹೊತ್ತಿನ ಬಳಿಕ ಈ ಕಾಡುಕೋಣಗಳು ವಾಪಸ್ ಹೋದವು.












Click it and Unblock the Notifications