ರಾಜಕಾಲುವೆ ಒತ್ತುವರಿ ಮಾಡಿರುವ ಸಂಸ್ಥೆಗಳ ಪಟ್ಟಿ ಬಹಿರಂಗ
ಸುವರ್ಣ ವಿಧಾನಸೌಧ(ಬೆಳಗಾವಿ), ನವೆಂಬರ್ 21: ವಿಧಾನಸಭೆಯ 20ನೇ ಸ್ಪೀಕರ್ ಕೆ.ಬಿ ಕೋಳಿವಾಡ ನೇತೃತ್ವದ ಸಮಿತಿ ರಚಿಸಿರುವ ಕೆರೆ ಒತ್ತುವರಿ ಕುರಿತ ವರದಿಯನ್ನು ಅಧ್ಯಯನ ಸಮಿತಿ ಸದಸ್ಯ ಎನ್ ಎ ಹ್ಯಾರಿಸ್ ಅವರು ಮಂಗಳವಾರದಂದು ವಿಧಾನಸಭೆಯಲ್ಲಿ ಮಂಡಿಸಿದರು.
ಸುಮಾರು 1090 ಕಿಲೋ ಮೀಟರ್ ವ್ಯಾಪ್ತಿಯ ರಾಜಕಾಲುವೆಯಲ್ಲಿ 501 ಎಕರೆ ಒತ್ತುವರಿಯಾಗಿದ್ದು, ಒತ್ತುವರಿದಾರರ ವಿರುದ್ಧ ಅಗತ್ಯ ಕಾನೂನು ಕ್ರಮಕ್ಕೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.
ವರದಿಯಲ್ಲಿ ಉಲ್ಲೇಖಿತ ಒತ್ತುವರಿ ಅಂಶಗಳು:
* ಒಟ್ಟು ಕೆರೆಗಳ ಒತ್ತುವರಿ 10,785 ಎಕರೆ
* ಕೆರೆಗಳ ಒಟ್ಟು ವಿಸ್ತೀರ್ಣ 57,932 ಎಕರೆ
* ಒತ್ತುವರಿ ಆಗಿರುವ ಕೆರೆಗಳಲ್ಲಿ ಉಳಿದ ಪ್ರದೇಶ 46,282 ಎಕರೆ
* ಬೆಂ.ನಗರ ಕೆರೆಗಳ ಒತ್ತುವರಿ 4533 ಎಕರೆ
* ಬೆಂ.ಗ್ರಾಮಾಂತರ ಕೆರೆಗಳ ಒತ್ತುವರಿ 6252 ಎಕರೆ
* ಒಟ್ಟು ಕೆರೆಗಳು 1547 ಎಕರೆ, 1090 ಕಿ.ಮೀ ರಾಜಕಾಲುವೆಯಲ್ಲಿ 501 ಎಕರೆ ಒತ್ತುವರಿ.

ಒತ್ತುವರಿ ಮಾಡಿರುವ ಸಂಸ್ಥೆಗಳು
* ಆಸ್ತ ವಾಲ್ ಮಾರ್ಕ್
* ವಿ.ಆರ್.ಮಾಲ್
* ಬಾಗ್ ಮನೆ ಟೆಕ್ ಪಾರ್ಕ್
* ಕಾರ್ಲೆ ಕಂಪನಿ
* ಡಿಯೋ ಎನ್ ಕ್ಲೇವ್ ಬಡಾವಣೆ
* ಹುಳಿಮಾವು ಬಳಿ ವಾಲ್ ಮಾರ್ಕ್ ಅಪಾರ್ಟ್ ಮೆಂಟ್
* ಕೆಎಸ್ ಆರ್ ಟಿಸಿ ಹೌಸಿಂಗ್ ಕೋ ಅಪರೇಟೀವ್ ಸೊಸೈಟಿ
* ಆರ್ತಜೆನ್ ಬಡಾವಣೆ
* ಜಯನಗರ ಗೃಹ ನಿರ್ಮಾಣ ಸಂಘ
* ಸ್ಟರ್ಲಿಂಗ್ ಅಪಾರ್ಟ್ ಮೆಂಟ್
* ಕೆಐಎಡಿಬಿ
* ಕೆಇಡಿಸಿ ಸಂಸ್ಥೆ
* ಎ.ಎಂ.ಶರತ್ ಚಂದ್ರ ಗ್ರೂಪ್
* ಅಪೋಲೋ ಆಸ್ಪತ್ರೆ ಗ್ರೂಪ್
* ಗೋಲ್ಡನ್ ಟವರ್ ಅಪಾರ್ಟ್ ಮೆಂಟ್
* ಜಿಯೋ ಪೋರ್ಚ್ ಕಂಪನಿ
* ಸಾಯಿ ಚರಣ್ ಕಂಪನಿ
* ಡಿಎಸ್ ಮ್ಯಾಕ್ಸ್ ಡೆವಲಪರ್ಸ್
* ಆರ್.ಎಸ್.ಡೆವಲಪರ್ಸ್
* ಕಲ್ಯಾಣ್ ಹೌಸಿಂಗ್ ಸೊಸೈಟಿ
* ಒಬೆರಾಯ್ ಕಂಪನಿ
* ಕೋಕೋ ಕೋಲಾ ಫ್ಯಾಕ್ಟರಿ
* ಬಾಲನ್ ಅಗ್ರೋ ಪ್ರಾಡಕ್ಟ್
* ರಾಗ್ ಬಿಲ್ಡರ್ಸ್
* ಗಾರ್ಡನ್ ವ್ಯೂ ಅಪಾರ್ಟ್ ಮೆಂಟ್
* ಸ್ನೋವೈಟ್ ಎಂಟರ್ ಪ್ರೈಸಸ್
* ಪ್ರೆಸ್ಟೀಜ್ ಗ್ರೂಪ್
* ಆದರ್ಶ ಡೆವಲಪರ್ಸ್
* ಐಎಂಸಿ ಕಂಪನಿ
* ಗ್ರೀನ್ ವುಡ್
* ಬಿಲ್ ಪೋರ್ಜಾ ಕಂಪನಿ
* ಆರ್.ಕೆ.ಡೆವಲಪರ್ಸ್
* ಶೋಭಾ ಡೆವಲಪರ್ಸ್
* ಸಿಂಬಯಾಸಿಸ್ ಗ್ರೂಪ್
(ಒನ್ಇಂಡಿಯಾ ಸುದ್ದಿ)












Click it and Unblock the Notifications