ಬೆಳಗಾವಿ; ಕೊನೆ ಕ್ಷಣದಲ್ಲಿ sslc ಪರೀಕ್ಷಾ ಕೇಂದ್ರದ ಬದಲಾವಣೆ
ಬೆಳಗಾವಿ, ಜೂನ್ 24: ನಾಳೆಯಿಂದ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಕೊನೆ ಕ್ಷಣದಲ್ಲಿ ದಿಢೀರ್ ಪರೀಕ್ಷಾ ಕೇಂದ್ರವೇ ಬದಲಾವಣೆ ಆದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪರೀಕ್ಷಾ ಕೇಂದ್ರ ಆಯ್ಕೆಗೂ ಮುನ್ನ ಪರಿಸ್ಥಿತಿ ಅವಲೋಕಿಸದೇ ಬೆಳಗಾವಿ ಶಿಕ್ಷಣ ಇಲಾಖೆ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.
ಕಟ್ಟಡ ಶಿಥಿಲಾವಸ್ಥೆಯಲ್ಲಿದೆ ಎಂಬ ಕಾರಣಕ್ಕೆ ಬೆಳಗಾವಿಯ ಶಹಾಪುರ್ ನಲ್ಲಿರುವ ಸರಸ್ವತಿ ಬಾಲಕಿಯರ ಪ್ರೌಢ ಶಾಲೆಯಲ್ಲಿದ್ದ ಪರೀಕ್ಷಾ ಕೇಂದ್ರವನ್ನು ಜ್ಞಾನ ಮಂದಿರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶಿಫ್ಟ್ ಮಾಡಿದ್ದಾರೆ. ಬೆಳಗಾವಿಯ 12 ಶಾಲೆಗಳ 315 ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆ ಬರೆಯಬೇಕಿತ್ತು. ಪರೀಕ್ಷಾ ಹಾಲ್ ಟಿಕೆಟ್ ನಲ್ಲಿ ಸರಸ್ವತಿ ಪ್ರೌಢ ಶಾಲೆ ಪರೀಕ್ಷಾ ಕೇಂದ್ರ ಎಂದು ಈಗಾಗಲೇ ನಮೂದಾಗಿದೆ.
SSLC ಪರೀಕ್ಷೆ ಸುದ್ದಿಗೋಷ್ಠಿ: ವಿದ್ಯಾರ್ಥಿಗಳು ತಿಳಿಯಬೇಕಾದ ವಿಷಯಗಳು
ಆದರೆ ಇದೀಗ ಮಳೆಗಾಲದಲ್ಲಿ ಕಟ್ಟಡ ಸೋರುತ್ತದೆ ಎಂಬ ಕಾರಣಕ್ಕೆ ಕಟ್ಟಡ ಬದಲಾವಣೆ ಮಾಡಲಾಗಿದ್ದು ಎಲ್ಲಾ ಶಾಲಾ ಆಡಳಿತ ಮಂಡಳಿಗೆ ಪರೀಕ್ಷಾ ಕೇಂದ್ರ ಬದಲಾವಣೆ ಕುರಿತು ಮಾಹಿತಿ ರವಾನಿಸಲಾಗುತ್ತಿದೆ. ನಿನ್ನೆಯಿಂದ ಪರೀಕ್ಷಾ ಕೇಂದ್ರ ಬದಲಾವಣೆ ಆಗಿದೆ ಎಂದು ಪಾಲಕರಿಗೆ ಫೋನ್ ಕರೆ ಮಾಡಿ ಮಾಹಿತಿ ನೀಡಲಾಗುತ್ತಿದೆ.
ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಪರೀಕ್ಷಾ ಕೇಂದ್ರಕ್ಕೆ ಇಂದು ಸಚಿವ ಸುರೇಶ್ ಅಂಗಡಿ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.