ಬೆಳಗಾವಿ-ಮುಂಬೈ ವಿಮಾನ ಹಾರಾಟ ಆರಂಭಿಸಿದ ಸ್ಪೈಸ್ ಜೆಟ್
ಬೆಳಗಾವಿ, ಜೂನ್ 20 : ಸ್ಪೈಸ್ ಜೆಟ್ ಬೆಂಗಳೂರು-ಬೆಳಗಾವಿ-ಮುಂಬೈ ನಡುವೆ ವಿಮಾನ ಸಂಚಾರವನ್ನು ಆರಂಭಿಸಿದೆ. ಉಡಾನ್ ಯೋಜನೆಗೆ ಬೆಳಗಾವಿ ವಿಮಾನ ನಿಲ್ದಾಣ ಸೇರಿದ್ದು, 13 ನಗರಗಳಿಂದ ಬೆಳಗಾವಿಗೆ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.
ಗುರುವಾರ ಬೆಂಗಳೂರಿನಿಂದ 55 ಪ್ರಯಾಣಿಕರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಮುಂಬೈಗೆ 50 ಪ್ರಯಾಣಿಕರು ತೆರಳಿದರು. ವಿಮಾನ ನಿಲ್ದಾಣದಲ್ಲಿ ಸರಳ ಕಾರ್ಯಕ್ರಮವನ್ನು ಮಾಡಿ ಪ್ರಯಾಣಿಕರನ್ನು ಸ್ವಾಗತಿಸಲಾಯಿತು.
ಸ್ಪೈಸ್ ಜೆಟ್ ಕಂಪನಿ ಪ್ರಾದೇಶಿಕ ವ್ಯವಸ್ಥಾಪಕ (ದಕ್ಷಿಣ) ಎನ್.ಕಿಶೋರ್, ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿಯಾಜ್ ಶಿರಹಟ್ಟಿ ಅವರು ಪ್ರಯಾಣಿಕರನ್ನು ಸ್ವಾಗತಿಸಿದರು. ಬೆಳಗಾವಿಯಿಂದ ಅಹಮದಾಬಾದ್-ಪುಣೆ ನಡುವಿನ ವಿಮಾನ ಹಾರಾಟಕ್ಕೆ ಕಳೆದು ತಿಂಗಳು ಚಾಲನೆ ಸಿಕ್ಕಿತ್ತು.

ವೇಳಾಪಟ್ಟಿ : ಬೆಂಗಳೂರಿನಿಂದ ಹೊರಡುವ ವಿಮಾನ ಮಧ್ಯಾಹ್ನ 12.05ಕ್ಕೆ ಬೆಳಗಾವಿಗೆ ಬರಲಿದೆ. 12.25ಕ್ಕೆ ಮುಂಬೈಗೆ ಹೊರಡಲಿದೆ. ಸಂಜೆ 4.05ಕ್ಕೆ ಮುಂಬೈನಿಂದ ಬೆಳಗಾವಿಗೆ ಬಂದು 4.25ಕ್ಕೆ ಬೆಂಗಳೂರಿಗೆ ಹೊರಡಲಿದೆ. ಪ್ರತಿನಿತ್ಯ ಈ ವಿಮಾನ ಸಂಚಾರ ನಡೆಸಲಿದೆ.
ಬೆಳಗಾವಿ-ಬೆಂಗಳೂರು ವಿಮಾನ ಸೇವೆಗೂ ಇಂದು ಚಾಲನೆ ಸಿಕ್ಕಿತು. ಬೆಂಗಳೂರಿನಿಂದ ಸಂಜೆ 6.05ಕ್ಕೆ ಬರುವ ವಿಮಾನ, 6.25ಕ್ಕೆ ವಾಪಸ್ ತೆರಳಲಿದೆ.












Click it and Unblock the Notifications