ಬೆಳಗಾವಿ: ನೀರು ಪೂರೈಕೆ ಯೋಜನೆಗೆ 960 ಕೋಟಿ ರೂ.ಮಂಜೂರು: ಬೊಮ್ಮಾಯಿ

ಬೆಳಗಾವಿ, ಅಕ್ಟೋಬರ್ 25: ಬೆಳಗಾವಿ ಜಿಲ್ಲಾ ವ್ಯಾಪ್ತಿಯ ವಿವಿಧ ತಾಲ್ಲೂಕುಗಳಿಗೆ ಜಲಜೀವನ ಮಿಷನ್ ಅಡಿ ಕುಡಿಯುವ ನೀರಿನ ಒದಗಿಸುವ ಯೋಜನೆಗಾಗಿ ಒಟ್ಟು 960 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮವಾರ ಬೆಳಗಾವಿಯಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮನ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಿತ್ತೂರಿಗೆ ಏತ ನೀರಾವರಿ ಯೋಜನೆಗೆ 580 ಕೊಟಿ ರೂ. ಹಣ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಕುಡಿಯುವ ನೀರಿನ ಯೋಜನೆ ಜಲ ಜೀವನ್ ಮಿಷನ್ ಅಡಿ 9000 ಕೋಟಿ ರೂ.ಗಳಲ್ಲಿ 25 ಲಕ್ಷ ಮನೆಗಳಿಗೆ ಕುಡಿಯುವ ನೀರು ‌ಯೋಜನೆ ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.

ಕಿತ್ತೂರು ರಾಣಿ ಚೆನ್ನಮ್ಮನ ಅರಮನೆ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 50 ಕೋಟಿ ಅನುದಾನ ಮಂಜೂರು ಮಾಡಿದ್ದರು. ಈಗ 115 ಕೋಟಿ ರೂ. ಅನುಮೋದನೆ ನೀಡಿದ್ದೇವೆ‌. ಕೋಟೆಯ ಪಕ್ಕದಲ್ಲಿ ಅರಮನೆ ನಿರ್ಮಾಣ ಮಾಡಲಾಗುವುದು. ಭೂಸ್ವಾಧೀನ ವೆಚ್ಚವನ್ನು ಸರ್ಕಾರ ಭರಿಸಲಿ ದೆ.ಚೆನ್ನಮ್ಮನ ಮೂಲ ಅರಮನೆ ಅಭಿವೃದ್ಧಿಗೆ 27 ಕೋಟಿ ರೂ. ನೀಡಲಾಗಿದೆ ಎಂದರು.

ಕಿತ್ತೂರು ಬಳಿ 1000 ಎಕರೆಯಲ್ಲಿ ಕೈಗಾರಿಕಾ ಟೌನ್ ಶಿಪ್

ಕಿತ್ತೂರು ಬಳಿ 1000 ಎಕರೆಯಲ್ಲಿ ಕೈಗಾರಿಕಾ ಟೌನ್ ಶಿಪ್

ಕಿತ್ತೂರು ಸಮೀಪ 1,000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್ ಶಿಪ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಅದರಿಂದ ಸುಮಾರು 50 ಸಾವಿರ ಯುವಕರಿಗೆ ಉದ್ಯೋಗ ದೊರೆಯಲಿದೆ. ಧಾರವಾಡ-ಬೆಳಗಾವಿ ಮಧ್ಯೆ ರೈಲು ಸಂಪರ್ಕಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಶೀಘ್ರವೇ ಯೊಜನೆಗೆ ಕೇಂದ್ರದಿಂದ ಅನುಮೊದನೆ ದೊರೆಯಲಿದೆ. ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ ಮಾಡಿದೆ. ಹಾವೇರಿಯ ಜವಳಿ ಪಾರ್ಕ್, ಧಾರವಾಡದಲ್ಲಿ ಎಫ್ಎಂಸಿಜಿ ಪಾರ್ಕ್, ಕಿತ್ತೂರು ಕರ್ನಾಟಕ ಭಾಗದಲ್ಲಿ ಕೋಟ್ಯಂತರ ರೂ. ಅನುದಾನದಲ್ಲಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಚಾಲನೆ ಶೀಘ್ರ

ಕೃಷ್ಣಾ ಮೇಲ್ದಂಡೆ ಯೋಜನೆಗೆ ಚಾಲನೆ ಶೀಘ್ರ

ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರ ನ್ಯಾಯಾಲಯದಲ್ಲಿದೆ. ಅಲ್ಲಿ ಒಪ್ಪಿಗೆ ದೊರೆತ ಕೂಡಲೇ ಕೃಷ್ಣಾಮೇಲ್ದಂಡೆ 3ನೇ ಹಂತದ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಕಳಸಾ ಬಂಡೂರಿ ಯೋಜನೆ ಅಂತಿಮ ಹಂತದಲ್ಲಿದ್ದು, ಒಪ್ಪಿಗೆ ಪಡೆದು ಕೆಲಸ ಪ್ರಾರಂಭಿಸಲಾಗುವುದು. ಸುವರ್ಣಸೌಧದ ಬಳಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ನವೆಂಬರ್ ನಲ್ಲಿ ಅಡಿಗಲ್ಲು ಹಾಕಲಾಗುವುದು. ಬೆಳವಡಿ ಮಲ್ಲಮ್ಮನ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.

ಕೃಷಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ

ಕೃಷಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ

ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ಜೊತೆಗೆ 6 ಲಕ್ಷ ಕೃಷಿ ಕಾರ್ಮಿಕರ ಮಕ್ಕಳನ್ನು ಗುರುತಿಸಲಾಗಿದೆ. ಡಿಸೆಂಬರ್ ಒಳಗೆ ಇವರಿಗೆ ವಿದ್ಯಾನಿಧಿ ನೀಡಲಾಗುವುದು. ಮೀನುಗಾರರ, ನೇಕಾರರ ಮಕ್ಕಳಿಗೆ, ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಈ ಯೋಜನೆ ವಿಸ್ತರಣೆ ಮಾಡಲಾಗಿದೆ. ಪ್ರತಿ ಗ್ರಾಮದಲ್ಲಿ ಎರಡು ಯುವಕ ಸಂಘ ಹಾಗೂ ಮಹಿಳಾ ಸಂಘಗಳಿಗೆ ತಲಾ 5 ಲಕ್ಷ ರೂ. ಹಣ ನೀಡಲು ತೀರ್ಮಾನಿಸಿದ್ದೇವೆ. 5ಲಕ್ಷ ಮಹಿಳೆಯರು ಹಾಗೂ 5ಲಕ್ಷ ಯುವಕರಿಗೆ ಉದ್ಯೋಗ ಒದಗಿಸಲಾಗುತ್ತಿದೆ ಎಂದು ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಿದರು.

ಬ್ರಿಟೀಷರ ವಿರುದ್ಧ ಸಿಡಿದೆದ್ದ ಮೊದಲ ಮಹಿಳೆ ರಾಣಿ ಚೆನ್ನಮ್ಮ

ಬ್ರಿಟೀಷರ ವಿರುದ್ಧ ಸಿಡಿದೆದ್ದ ಮೊದಲ ಮಹಿಳೆ ರಾಣಿ ಚೆನ್ನಮ್ಮ

ಬ್ರಿಟೀಷರ ವಿರುಧ್ದ ಧ್ವನಿ ಎತ್ತಿದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಬ್ರಿಟೀಷರ ವಿರುದ್ಧ ನಿಲ್ಲುವ ಧೈರ್ಯ ಇಲ್ಲದ ಕಾಲದಲ್ಲಿ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಮೊದಲ ಸ್ವಾತಂತ್ರ್ಯ ಹೋರಾಟ ಮಾಡಿದ ಮಹಿಳೆ ಎಂದು ಇತಿಹಾಸದಲ್ಲಿ ಬರೆದಿದ್ದಾರೆ‌. ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ನಿಂತ ಮೊದಲ ಮಹಿಳೆ ಎಂದು ತಿಳಿಸುವ ಸಮಯ ಬಂದಿದೆ. ಆ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ. ಸೈದ್ಧಾಂತಿಕವಾಗಿ ಹೋರಾಡಿ ಮಾಡಿದವರು ಯಾರಿಗೂ ಗುಲಾಮರಾಗುವುದಿಲ್ಲ ಎಂಬುವುದನ್ನು ಚೆನ್ನಮ್ಮ ತೋರಿಸಿಕೊಟ್ಟರು. ಚೆನ್ನಮ್ಮನ ಜೊತೆಗೆ ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಜೊತೆಯಾಗಿ ನಿಂತರು. ಜಯ ಗಳಿಸಿದರು ಎಂದರು.

ಚೆನ್ನಮ್ಮ ನ ಶಕ್ತಿ ಇಂದಿಗೂ ಪ್ರೇರಣೆ‌

ಚೆನ್ನಮ್ಮ ನ ಶಕ್ತಿ ಇಂದಿಗೂ ಪ್ರೇರಣೆ‌

ಸಮಸ್ಯೆಗಳು ಎಷ್ಟೇ ಇದ್ದರು ಚೆನ್ನಮ್ಮಳ ಪ್ರೇರಣೆ‌ಯಿಂದ ನಾಡು ಕಟ್ಟುವ ಕೆಲಸ ಮಾಡೋಣ. ಸ್ವಾಭಿಮಾನದ ಬದುಕು ನಮ್ಮದಾಗಲು ಸ್ವಾವಲಂಬಿಗಳಾಗಬೇಕು. ದುಡಿಯುವ ವರ್ಗಕ್ಕೆ ಗೌರವ ಬರಬೇಕು. ವಿದ್ಯೆ ಕಲಿತಿರುವ ವಿದ್ಯಾರ್ಥಿಗಳಿಗೆ ಗೌರವ ಬರಬೇಕು. ಶಿಕ್ಷಣದ ಮೂಲಕ ಸಬಲರಾಗುತ್ತಿದ್ದೇವೆ. ಭಾರತ ದೇಶದ ಒಗ್ಗಟ್ಟನ್ನು ಮುರಿಯಲು ಅನೇಕ ಶಕ್ತಿಗಳು ಪ್ರಯತ್ನಿಸುತ್ತಿದೆ. ಸುದೈವದಿಂದ ದೇಶಕ್ಕೆ ನರೇಂದ್ರ ಮೋದಿ ಅವರಂತ ನಾಯಕರು ಸಿಕ್ಕಿದ್ದಾರೆ.

ಕಿತ್ತೂರು ಉತ್ಸವಕ್ಕೆ ಹೋದರೆ ನಿಮ್ಮ ಸಿಎಂ ಸ್ಥಾನ ಹೋಗುತ್ತದೆ ಎಂದು ಕೆಲವರು ಹೆದರಿಸಿದರು. ಇದೆಂತಹ ಮೂಢನಂಬಿಕೆ, ನಾನು ಕಿತ್ತೂರು ಚೆನ್ನಮ್ಮನ ಪುಣ್ಯ ಭೂಮಿಗೆ ಹೋಗುತ್ತೇನೆ. ಸಿಎಂ ಸ್ಥಾನ ಹೋದರೂ ಹೋಗಲಿ ಎಂದು ಈ ಉತ್ಸವಕ್ಕೆ ಬಂದೆ ಎಂದು ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+