ಗಡಿಭಾಗದಲ್ಲಿ ಗಡಿಬಿಡಿ, ಬೆಳಗಾವಿಯಲ್ಲಿ ಏನಾಗುತ್ತಿದೆ?
ಬೂದಿಮುಚ್ಚಿದ ಕೆಂಡದಂತ್ತಿದ್ದ ಬೆಳಗಾವಿಯ ಹಲವು ಪ್ರದೇಶಗಳಲ್ಲಿ ಈಗ ಮತ್ತೆ ಬೆಂಕಿ ಭುಗಿಲೆದ್ದಿದೆ. ನಾಮಫಲಕ ಸ್ಥಾಪನೆ-ತೆರವು ವಿಚಾರದಲ್ಲಿ ಘರ್ಷಣೆ ತಲೆದೋರಿದೆ. ಮರಾಠಿ ಜನರ ಕಿತಾಪತಿಗೆ ಇದು ಇನ್ನೊಂದು ಉದಾಹರಣೆ. ಬೆಳಗಾವಿ ಜಿಲ್ಲೆಯಲ್ಲಿ ಈಗ ನಿಜಕ್ಕೂ ಏನಾಗುತ್ತಿದೆ? ಪಬ್ಲಿಕ್ ಟಿವಿ ಬಿತ್ತರಿಸಿದ ಒಂದು ವಿಶೇಷ ವರದಿಯ ಸಾರಾಂಶ ಇಲ್ಲಿದೆ.
ಎಳ್ಳೂರು ನಾಮಫಲಕ ತೆರವು ಕಾರ್ಯಾಚರಣೆ ಗಂಭೀರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಶನಿವಾರ ಮಧ್ಯಾಹ್ನದಿಂದ ಬೆಳಗಾವಿ ಜಿಲ್ಲೆಯ 8 ಕಡೆ ಮಹಾರಾಷ್ಟ್ರ ಎಂಬ ನಾಮಫಲಕಗಳು ಸ್ಥಾಪನೆಯಾಗಿವೆ. ಇದಕ್ಕೂ ಮುನ್ನ ಮಹಾರಾಷ್ಟ್ರದ ಗಡಿಭಾಗದಲ್ಲಿ ಇನ್ನೂ ಅನೇಕ ಕಡೆ ನಾಮಫಲಕ ಸ್ಥಾಪನೆಯಾಗಿವೆ.[ಎಂಇಎಸ್ ಪುಂಡಾಟ: ಯಾರು ಏನು ಹೇಳಿದರು?]
ಜೊತೆಗೆ ಎಲ್ಲಾ ನಾಮಫಲಕ ಬಳಿ ಎಂಇಎಸ್ ಕಾರ್ಯಕರ್ತರು ಮಾರಕಾಸ್ತ್ರ ಹಿಡಿದು ಗಸ್ತು ಕೂತಿದ್ದಾರೆ. ಇದರಿಂದಾಗಿ ಬೆಳಗಾವಿಯಲ್ಲಿ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಪೊಲೀಸರು ಸಜ್ಜಾಗಿದ್ದು ಅಕ್ಕ ಪಕ್ಕದ ಜಿಲ್ಲೆಗಳಿಂದ ಪೊಲೀಸರನ್ನು ಬೆಳಗಾವಿಗೆ ಕರೆಸಿಕೊಂಡಿದ್ದಾರೆ. ಬೆಳಗಾವಿ ಪರಿಸ್ಥಿತಿ ನಿಯಂತ್ರಿಸಲು ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಸರ್ಕಾರ ನಿಯೋಜಿಸಿದೆ. ನಿಂಬಾಳ್ಕರ್ ಅವರು ಈ ಮುಂಚೆ ಇಲ್ಲಿ ಎಸ್ ಪಿಯಾಗಿದ್ದರು.

ಬೆಳಗಾವಿಯ 13 ಕಡೆ 'ಮಹಾರಾಷ್ಟ್ರ' ರಾಜ್ಯ
ವಿವಾದ ಆರಂಭಕ್ಕೂ ಮುನ್ನ ಜಿಲ್ಲೆಯ 5 ಕಡೆ 'ಮಹಾರಾಷ್ಟ್ರ ಬೋರ್ಡ್' ಹಾಕಿದ್ದರು.
* ಎಳ್ಳೂರು
* ಕಂಗರಾಳಿ ಬಿಕೆ
* ಕಂಗರಾಳಿ ಖುರ್ದ್
* ಸಾಂಬ್ರಾ
* ಉಚಗಾಂವ್
ಎಳ್ಳೂರಿನಲ್ಲಿ ನಾಮಫಲಕ ಮರುಸ್ಥಾಪನೆಗೊಂಡ ಬೆನ್ನಲ್ಲೇ ಮತ್ತೆ 8 ಕಡೆ ಮಹಾರಾಷ್ಟ್ರ ನಾಮಫಲಕ ತಲೆ ಎತ್ತಿವೆ.
* ರಾಜಹಂಸಘಡ
* ಸುಳಗೆ
* ನಂದಿಹಳ್ಳಿ
* ಗುರ್ಲಗುಂಜಿ
* ಕಿಣಯೆ
* ದೇಸೂರು
* ಸುಳಗಾ ಯಳ್ಳೂರು
* ಮುತಗಾ

ಎಂಇಎಸ್ ಸಭೆಯ ನಿರ್ಣಯಗಳೇನು..?
* ಬೆಳಗಾವಿಯ ಮರಾಠಾ ಮಂದಿರದಲ್ಲಿ ಎಂಇಎಸ್ ಮುಖಂಡರ ಸಭೆ
* ಹಾಲಿ, ಮಾಜಿ ಶಾಸಕರು ಸೇರಿ ಹಲವಾರು ಕಾರ್ಯಕರ್ತರು ಭಾಗಿ
* ಬೆಳಗಾವಿ ಮೇಯರ್ ಮಹೇಶ್ ಭಾಗಿಯಾಗಿದ್ದರು
* ಸೋಮವಾರ ಬೆಳಗಾವಿ ಬಂದ್ ಮಾಡಿ ಭಾರಿ ಪ್ರತಿಭಟನೆ
* ಯಾರ ಜೊತೆ ಮಾತನಾಡಿದರೂ ಮೊದಲು 'ಜೈ ಮಹಾರಾಷ್ಟ್ರ' ಎಂದು ಹೇಳಿ ಮರಾಠಿಯಲ್ಲೇ ಮಾತನಾಡಬೇಕು.
* ಕರಪತ್ರ ಹಂಚಿ ಮರಾಠಿ ಭಾಷೆಯ ಬಗ್ಗೆ ಅಭಿಮಾನ ಸೃಷ್ಟಿಸಬೇಕು
* ಪ್ರತಿಯೊಬ್ಬರು ಮನೆಯ ಮೇಲೆ ಮರಾಠಿ ಧ್ವಜ ಹಾಕಬೇಕು
* ಸಾಧ್ಯವಾದರೆ ಎಲ್ಲ ಗ್ರಾಮಗಳಲ್ಲಿ ಮಹಾರಾಷ್ಟ್ರ ರಾಜ್ಯ ಎಂದು ಬೋರ್ಡ್ ಹಾಕಬೇಕು
* ಮಹಾರಾಷ್ಟ್ರದಿಂದ ಶಿವಸೇನೆಯ ಪ್ರಮುಖ ನಾಯಕರು ಬೆಳಗಾವಿ ನಗರಕ್ಕೆ ಆಗಮನ
* ಕೊಲ್ಹಾಪುರ ಶಾಸಕ ರಾಜೇಶ್ ಕ್ಷೀರಸಾಗರ ಆಗಮನ
* ಹೋರಾಟದ ರೂಪುರೇಷೆ ಬಗ್ಗೆ ಬೆಂಬಲಿಗರ ಜೊತೆ ಚರ್ಚೆ

ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಜ್ಜು
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಳಗಾವಿ ನಗರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು. ಎಸ್ಪಿ ಚಂದ್ರಕಾಂತ್, ಎಜಿಪಿ ಭಾಸ್ಕರ್ ರಾವ್ ಮುಂತಾದವರು ಪಾಲ್ಗೊಂಡಿದ್ದರು.
* ಬೆಳಗಾವಿ ಜಿಲ್ಲೆಯ ಎಲ್ಲಾ ಠಾಣೆಗಳ ಪೊಲೀಸರು, ಗದಗ, ಹಾವೇರಿ, ಧಾರವಾಡ, ಬಿಜಾಪುರ, ಬಾಗಲಕೋಟೆಯಿಂದ ಪೊಲೀಸರ ಆಗಮನ
* 10 ಕೆಎಸ್‍ಆರ್ ಪಿ ತುಕಡಿ
* 10 ಡಿಆರ್‍ಎ ತುಕಡಿ ಸನ್ನದ್ಧ
* ಬೆಳಗಾವಿ ಎಸ್ಪಿ ಚಂದ್ರಗುಪ್ತ ಗೃಹ ಕಚೇರಿಯಲ್ಲಿ ಸಭೆ
* ಬೆಳಗಾವಿ ಐಜಿ ವಲಯದ ಎಲ್ಲ ಪೊಲೀಸ್ ಅಧಿಕಾರಿಗಳು ಭಾಗಿ
* ತಂಡ ಎ, ತಂಡ ಬಿ ರಚನೆ
* ಕಾರ್ಯಾಚರಣೆ, ರಕ್ಷಣೆ ಎಂದು ತಂಡ ರಚನೆ

ಎಳ್ಳೂರಿನಲ್ಲಿ ನಾಮಫಲಕ ತೆರವು ಯಾಕೆ..?
* ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗುಂಡಪ್ಪ ಗಡದ್ ಅವರಿಂದ ಆರ್ ಟಿಐ ಅರ್ಜಿ
* ಎಳ್ಳೂರು ಯಾವ ಲೋಕಸಭಾ ಕ್ಷೇತ್ರದಲ್ಲಿದೆ..? ಎಂದು ಪ್ರಶ್ನೆ ಕರ್ನಾಟಕದಲ್ಲಿದೆಯೋ, ಮಹಾರಾಷ್ಟ್ರದಲ್ಲಿದೆಯೋ ಎಂದು ಅರ್ಜಿ.
* ಜಿಲ್ಲಾಡಳಿತದಿಂದ ಭೀಮಪ್ಪ ಗಡದ್ ಗೆ ಉತ್ತರ. ಎಳ್ಳೂರು ಕರ್ನಾಟಕದಲ್ಲಿದೆ, ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ ಎಂದು ಉತ್ತರ
* ಕರ್ನಾಟಕದಲ್ಲಿದ್ದರೂ ಮಹಾರಾಷ್ಟ್ರ ಎಂದು ಯಾಕೆ ಬರೆದಿದ್ದೀರಿ ಎಂದು ಜಿಲ್ಲಾಡಳಿತಕ್ಕೆ ಮತ್ತೆ ಪತ್ರ
* ಎಳ್ಳೂರು ನಾಮಫಲಕ ಜಿಲ್ಲಾಡಳಿತಕ್ಕೆ ಸಂಬಂಧಿಸಿದ್ದಲ್ಲ. ಎಳ್ಳೂರು ನಾಮಫಲಕ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದು ಎಂದು ಉತ್ತರ.
ಚಿತ್ರದಲ್ಲಿ : ಜಿಲ್ಲಾಧಿಕಾರಿ ಎನ್ ಜಯರಾಮ್

ನಾಮಫಲಕದ ಬಗ್ಗೆ ಗಡದ್ ಖಡಕ್ ಪ್ರಶ್ನೆ
* ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದ ಗಡದ್
* ಇದು ಜಿಲ್ಲಾ ಪಂಚಾಯತ್ ಗೆ ಸಂಬಂಧಿಸಿದ ಕಲ್ಲು ಎಂದು ಲೋಕೋಪಯೋಗಿ ಇಲಾಖೆ ಉತ್ತರ.
* ಮತ್ತೆ ಜಿಲ್ಲಾ ಪಂಚಾಯತ್ ಗೆ ಹೋದರೆ ಎಳ್ಳೂರು ಗ್ರಾಮ ಪಂಚಾಯತ್ ಗೆ ಸಂಬಂಧಿಸಿದ್ದು ಎಂದು ಉತ್ತರ.
* ಗ್ರಾಮ ಪಂಚಾಯತ್ ಮೊರೆ ಹೋದ ವೇಳೆ ಎಳ್ಳೂರು ಮಹಾರಾಷ್ಟ್ರ ರಾಜ್ಯ ಎಂದು ಬರೆದಿರುವುದೂ ನಿಜ ಆದರೆ ಆ ಕಲ್ಲು ನಮ್ಮ ವ್ಯಾಪ್ತಿಯಲ್ಲಿಲ್ಲ ಎಂಬ ಗೊಂದಲದ ಉತ್ತರ ಸಿಕ್ಕಿತು.

ಬೆಳಗಾವಿ ಪೊಲೀಸರಿಗೆ ಮೊರೆ ಹೋದ ಗಡದ್
* ಕೊನೆಗೆ ಬೆಳಗಾವಿ ಪೊಲೀಸರಿಗೆ ಮೊರೆ ಹೋದ ಗಡದ್
* ಯಾರಿಗೂ ಸಂಬಂಧ ಪಡದ ಕಲ್ಲನ್ನು ಕಾಯಲು ಪೊಲೀಸರನ್ನು ಯಾಕೆ ಕೂರಿಸಿದ್ದೀರಿ..?
ಇದರ ಬಗ್ಗೆ ಲಿಖಿತ ಉತ್ತರ ಕೊಡಿ ಎಂದು ಎಸ್ಪಿ ಹಾಗೂ ಎಜಿಪಿಗೆ ಅರ್ಜಿ.
* ಜಿಲ್ಲಾಡಳಿತ ಅಥವಾ ಹೈಕೋರ್ಟ್ ನಿಂದ ಆದೇಶ ಬಂದರೆ ಕಲ್ಲು ತೆರವುಗೊಳಿಸುತ್ತೇವೆ ಎಂದು 2012ರಲ್ಲಿ ಬೆಳಗಾವಿ ಎಸ್ಪಿಯಾಗಿದ್ದ ಸಂದೀಪ್ ಪಾಟೀಲ್ ರಿಂದ ಲಿಖಿತ ಉತ್ತರ
* ಈ ಪತ್ರವೇ ಪ್ರಕರಣ ಪ್ರಮುಖ ತಿರುವು ಪಡೆಯಲು ಕಾರಣವಾಯಿತು.

ಕರ್ನಾಟಕ ಹೈಕೋರ್ಟ್ ನಿಂದ ತೆರವಿಗೆ ಆದೇಶ
* ಪೊಲೀಸರು ಲಿಖಿತವಾಗಿ ಉತ್ತರ ನೀಡಿದ್ದಾರಾ ಎಂದು ಪ್ರಶ್ನಿಸಿದ ಹೈಕೋರ್ಟ್
* ಹೌದು ಎಂದು ಹೇಳಿ ಪೊಲೀಸರ ಪತ್ರ ನೀಡಿದ ಗಡದ್ ಪರ ವಕೀಲರು
* ಪತ್ರ ನೋಡಿ ಹೈಕೋರ್ಟ್ ನ್ಯಾಯಾಧೀಶರು ಎಳ್ಳೂರು ಬೋರ್ಡ್ ಜುಲೈ 21ರೊಳಗೆ ತೆರವುಗೊಳಿಸಲು ಆದೇಶ. ಆದರೂ ಜಿಲ್ಲಾಡಳಿತ ನಾಮಫಲಕ ತೆರವುಗೊಳಿಸಲಿಲ್ಲ
* ಬೋರ್ಡ್ ತೆರವುಗೊಳಿಸಲಿಲ್ಲ ಎಂದು ಭೀಮಪ್ಪ ಪರ ವಕೀಲರಿಂದ ಮತ್ತೆ ಹೈಕೋರ್ಟ್ ಗೆ ಮನವಿ
* ಹೈಕೋರ್ಟ್ ನಿಂದ ಬೆಳಗಾವಿ ಜಿಲ್ಲಾಡಳಿತಕ್ಕೆ ಛೀಮಾರಿ. ಜುಲೈ 28ರೊಳಗೆ ತೆರವುಗೊಳಿಸದಿದ್ದರೆ ನಿಮ್ಮ ಮೇಲೆ ಯಾಕೆ ಕಾನೂನು ಕ್ರಮ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ಪ್ರಶ್ನೆ
* ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿ ಜುಲೈ 25ರಂದು ತೆರವು
* ಉಪವಿಭಾಗಾಧಿಕಾರಿ ಶಶಿಧರ ಬಗಲಿ ನೇತೃತ್ವದಲ್ಲಿ 400 ಪೊಲೀಸರ ಭದ್ರತೆಯಲ್ಲಿ ತೆರವು

ನಾಮಫಲಕ ತೆರವಿನಿಂದ ನಂತರ ಏನಾಯ್ತು?
* ನಾಮ ಫಲಕ ವಿಷಯ ತಿಳಿಯುತ್ತಿದ್ದಂತೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ 5 ಬಸ್ ಗಳ ಮೇಲೆ ದಾಂದಲೆ.
* ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸಂಪೂರ್ಣ ಸ್ಥಗಿತ
* ಮಹಾರಾಷ್ಟ್ರದಿಂದಲೂ ಬೆಳಗಾವಿಗೆ ಬಸ್ ಗಳು ಬರುತ್ತಿಲ್ಲ.
* ಹೆದ್ದಾರಿಯಲ್ಲಿ ಅಘೋಷಿತ ಬಂದ್ ಆಚರಣೆ.
* ಮರಾಠಿಗರಿಂದ ಕನ್ನಡ ಪತ್ರಕರ್ತರ ಮೇಲೆ ದಾಳಿ, ಕಲ್ಲೆಸೆತ. ಬಡಿಗೆ ಹಿಡಿದುಕೊಂಡು ಗಸ್ತು ತಿರುಗಾಟ

ಈಗ ಪರಿಸ್ಥಿತಿ ಹೇಗಿದೆ? ಭಾನುವಾರದ ಬೆಳವಣಿಗೆ
* ಪರಿಸ್ಥಿತಿ ನಿಭಾಯಿಸಲು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ನಿಯೋಜನೆ.
* ಸೋಮವಾರ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರೊಡನೆ ಪೊಲೀಸರ ಸಭೆ.
* ಸುಮಾರು 150ಕ್ಕೂ ಅಧಿಕ ಎಂಇಎಸ್ ಪುಂಡರಿರುವ ಮನೆಗಳ ಮೇಲೆ ದಾಳಿ.
* ಕನ್ನಡ ಪತ್ರಕರ್ತರಿಗೆ ರಕ್ಷಣೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ.
* ಕಲ್ಲೆಸೆತದಿಂದ 10 ಮಂದಿಗೆ ಗಾಯ. ಲಾಠಿಚಾರ್ಜ್ ನಂತರ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಡಿಸಿ ಜಯರಾಮ್ ಘೋಷಣೆ.












Click it and Unblock the Notifications