ಬೆಳಗಾವಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪೇದೆ ಬಂಧನ
ಬೆಳಗಾವಿ, ಜೂನ್ 28: ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್ ಟೆಬಲ್ ಇಮ್ರಾನ್ ಖಾನ್ ಘೋರಿ ಎಂಬಾತನನ್ನು ಬಂಧಿಸಲಾಗಿದೆ. ಈತನು ಸಿಟಿ ರಿಸರ್ವ್ ಪೊಲೀಸ್ ಕಾನ್ಸ್ ಟೆಬಲ್ ಎಂದು ತಿಳಿದು ಬಂದಿದೆ.
ಸುಮಾರು 3-4 ವರ್ಷಗಳಿಂದ ವಿವಾಹಿತ ಪೊಲೀಸ್ ಕಾನ್ಸ್ ಟೆಬಲ್ ಪಕ್ಕದೂರಿನ ಯುವತಿಯ ಜೊತೆಗೆ ಪ್ರೀತಿಯ ನಾಟಕವಾಡಿ, ಮದುವೆ ಆಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದನು. ನಂತರ ದೈಹಿಕ ಸಂಪರ್ಕ ಬೆಳೆಸಿದ ಮೇಲೆ ಯುವತಿಗೆ ವಂಚಿಸಿದ್ದನು.
ಹತಾಶೆಗೊಂಡ ಯುವತಿಯು ನೀಡಿದ ದೂರಿನ ಮೇರೆಗೆ ಬೆಳಗಾವಿಯ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮದ ಇಮ್ರಾನ್ ಖಾನ್ ಘೋರಿ (29) ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದು ಬಂಧನವಾಗಿದ್ದಾನೆ.

ಯುವತಿ ನೀಡಿರುವ ದೂರಿನ ಆರೋಪದ ಪ್ರಕರಣದಲ್ಲಿ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಇಂದು ವಂಚಕನ್ನು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications