• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಪರಿಹಾರ ನಿಧಿಗೆ ಕೋಟಿ ಕೊಟ್ಟ ಬೆಳಗಾವಿಯ ಬಿ.ಟಿ ಪಾಟೀಲರು

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಏಪ್ರಿಲ್ 01: ಪ್ರಧಾನ ಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ಬೆಳಗಾವಿಯ ಪ್ಯಾಟ್ಸನ್ ಗ್ರೂಪ್ ನ ಬಾಳಾ ಸಾಹೇಬ್ ಪಾಟೀಲ್ (ಬಿ.ಟಿ. ಪಾಟೀಲ) ಅವರು ಒಂದು ಕೋಟಿ ರೂಪಾಯಿ ನೀಡಿದ್ದಾರೆ.

ದೇಶದಲ್ಲಿ ರಾಷ್ಟ್ರೀಯ ವಿಪತ್ತು ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿಯನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ, ನೆರೆ ಬಂದ ಸಂದರ್ಭ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವ ಬಿ.ಟಿ. ಪಾಟೀಲ ಪರಿವಾರ ಈಗ ಕೊರೊನಾ ಸಂಕಷ್ಟದಲ್ಲಿಯೂ ಕೈ ಜೋಡಿಸಿದೆ.

ಸುತ್ತೂರು ಮಠದಿಂದ ಸಿಎಂ ಪರಿಹಾರ ನಿಧಿಗೆ 50ಲಕ್ಷ ರೂ. ದೇಣಿಗೆಸುತ್ತೂರು ಮಠದಿಂದ ಸಿಎಂ ಪರಿಹಾರ ನಿಧಿಗೆ 50ಲಕ್ಷ ರೂ. ದೇಣಿಗೆ

"ದೇಶ ಗಂಡಾಂತರದಲ್ಲಿದೆ. ಜನ ಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವೇ ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲ, ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಇದನ್ನು ಮನಗಂಡು ಪ್ರಧಾನ ಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ಕೊಟ್ಟಿದ್ದೇನೆ. ಇಂತಹ ಕಷ್ಟದ ಕಾಲದಲ್ಲಿ ಯಾರಿಗೆ ಆರ್ಥಿಕ ಸಹಾಯ ಮಾಡುವ ಸಾಮರ್ಥ್ಯ ಇದೆಯೋ ಅವರೆಲ್ಲರೂ ಕೈ ಜೋಡಿಸಿ. ಇದೇ ನಿಜವಾದ ದೇಶ ಸೇವೆ" ಎಂದು ಮನವಿ ಮಾಡಿದ್ದಾರೆ ಬಾಳಾಸಾಹೇಬ ಪಾಟೀಲ.

ಇಂದು ಒಂದು ಕೋಟಿ ರೂಗಳ ಚೆಕ್ ಅನ್ನು ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಮುಖಾಂತರ ಪ್ರಧಾನ ಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ನೀಡಲಾಯಿತು.

English summary
Bala Saheb patil of belagavi's patson group gave one crore rs to pm corona relief fund,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X